Scuba Diving: ಮುರ್ಡೇಶ್ವರದ ನೇತ್ರಾಣಿಯಲ್ಲಿ ‘ಸ್ಕೂಬಾ’ ಮಾಡಿ ರಿಲ್ಯಾಕ್ಸ್ ಮಾಡಿದ ನಟ ‘ಡಾಲಿ ಧನಂಜಯ್’

ಭಟ್ಕಳ: ವಾರದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್‌ವುಡ್‌ ನಟಭಯಂಕರ ಡಾಲಿ ತಾಲ್ಲೂಕಿನ ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಖುಷಿಪಟ್ಟಿದ್ದಾರೆ. ಮುರ್ಡೇಶ್ವರದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶ್ವ…

ಭಟ್ಕಳ: ವಾರದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್‌ವುಡ್‌ ನಟಭಯಂಕರ ಡಾಲಿ ತಾಲ್ಲೂಕಿನ ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಖುಷಿಪಟ್ಟಿದ್ದಾರೆ. ಮುರ್ಡೇಶ್ವರದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ವಿಶ್ವ ಮೀನುಗಾರಿಕೆ ದಿನಾಚರಣೆಯ ಕೊನೆಯ ದಿನದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಂಡಿದ್ದ ಡಾಲಿ ಜಗತ್ ಪ್ರಸಿದ್ಧವಾಗಿರುವ ರಾಜ್ಯದ ಏಕೈಕ ಸ್ಕೂಬಾ ತಾಣದ ಸೌಂದರ್ಯ ಆಸ್ವಾದಿಸಿದರು.

ಮುರ್ಡೇಶ್ವರ ಕಡಲತೀರದಿಂದ ಇಲ್ಲಿನ ಅಕ್ವಾ ರೈಡ್ ಕಂಪೆನಿಯ ಬೋಟ್ ಮೂಲಕ ತಮ್ಮ ಸ್ನೇಹಿತರೊಂದಿಗೆ ನಟ ಡಾಲಿ ಅರಬ್ಬೀ ಸಮುದ್ರದಲ್ಲಿ ತೆರಳಿದ್ದು, ಸುಂದರ ವಾತಾವರಣ ಕಂಡು ಖುಷಿಪಟ್ಟರು. ಬಳಿಕ ನೇತ್ರಾಣಿ ದ್ವೀಪದ ಸಮೀಪದ ಆಳ ಸಮುದ್ರದಲ್ಲಿ ಸ್ಕೂಬಾ ಡೈವ್ ಮಾಡಿದ್ದು, ಅಪರೂಪದ ಮೀನುಗಳು, ಹವಳದ ಬಂಡೆ ಸೇರಿದಂತೆ ಆಳಸಮುದ್ರದ ವಿಹಂಗಮ ಜೀವವೈವಿಧ್ಯ ಪರಿಸರವನ್ನು ಕಣ್ತುಂಬಿಕೊಂಡರು. 

ಅವರು ಸುಮಾರು 45 ನಿಮಿಷಗಳ ಕಾಲ ನೀರಿನಾಳದಲ್ಲಿ ಕಾಲ ಕಳೆದಿದ್ದು, ಇನ್ನೂ ಒಂದು ತಾಸುಗಳ ಕಾಲ ನೀರಿನಲ್ಲಿ ಕಳೆಯುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೇ ಮುಂದಿನ ಕೆಲ ದಿನಗಳಲ್ಲಿ ಮತ್ತೆ ಸ್ಕೂಬಾ ಮಾಡಲು ಬರುವುದಾಗಿ ಹೇಳಿದ್ದಾರೆ. ಇದೇ ವೇಳೆ ತಮ್ಮ ತಂಡದೊಂದಿಗೆ, ಪ್ರವಾಸಿಗರ ಕಾಳಜಿ ತೆಗೆದುಕೊಂಡು ಸ್ಕೂಬಾ ಮಾಡಿಸುತ್ತಿರುವ ಅಕ್ವಾ ರೈಡ್ ಕಂಪನಿಯ ಮುಖ್ಯಸ್ಥರಿಗೆ, ಸಿಬ್ಬಂದಿಗೆ ಡಾಲಿ ಧನ್ಯವಾದ ಸಲ್ಲಿಸಿದರು.

Vijayaprabha Mobile App free

ನಟ ಡಾಲಿ ಧನಂಜಯ್‌ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ಸ್ನೇಹಿತೆಯಾಗಿದ್ದ, ವೈದ್ಯೆ ಡಾ. ಧನ್ಯತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಎಲ್ಲರಿಗೂ ಅಚ್ಚರಿ‌ ಮೂಡಿಸಿದ್ದರು. 2025ರ, ಫೆಬ್ರುವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಡಾಲಿ ಹಾಗೂ ಧನ್ಯತಾ ಕಾಲಿಡುತ್ತಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.