Ration card EKYC : ಪಡಿತರ ಚೀಟಿ ಹೊಂದಿರುವವರಾಗಿದ್ದರೆ ಡಿಸೆಂಬರ್ 1ರ ಮೊದಲು ಇ-ಕೆವೈಸಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡುವಂತೆ ಸೂಚನೆಗಳನ್ನು ನೀಡಿದ್ದು, ಇದನ್ನು ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗಬಹುದು ಎನ್ನಲಾಗಿದ್ದು, ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ ಕಾರ್ಯ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Ration card | ಪಡಿತರ ಚೀಟಿ ಹೊಂದಿದವರಿಗೆ ಇಲ್ಲಿದೆ ಗುಡ್ ನ್ಯೂಸ್
Ration card EKYC : ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್!
ರೇಷನ್ ಕಾರ್ಡ್’ಗೆ ಇ-ಕೆವೈಸಿ ಮಾಡಿಸದವರಿಗೆ ಸರ್ಕಾರದಿಂದ ಬಿಗ್ ಶಾಕ್ ಎದುರಾಗಿದ್ದು, ಆಧಾರ್ ದೃಢೀಕರಣ ಮಾಡದ ಸುಮಾರು 22 ಲಕ್ಷ ಕಾರ್ಡ್’ಗಳನ್ನು ಈಗಾಗಲೇ ಅನರ್ಹ ಎಂದು ಪರಿಗಣಿಸಿ ರದ್ದುಗೊಳಿಸಿದೆ.
ಇದರಿಂದಾಗಿ ಆಯುಷ್, ವಿಮೆ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸ್ಥಗಿತವಾಗಿವೆ ಎನ್ನಲಾಗುತ್ತಿದೆ. ಆಹಾರ ಇಲಾಖೆ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್’ಗಳು ಪತ್ತೆಯಾಗಿದ್ದವು. ಅಂತಹ ಪಡಿತರ ಚೀಟಿದಾರರಿಗೆ ಹಣ ಸ್ಥಗಿತವಾಗಿದೆ.
ಇದನ್ನೂ ಓದಿ: Newspaper distributors | ಓದುಗರ ಮನೆ ಬಾಗಿಲಿಗೆ ಪತ್ರಿಕೆ ತರುವ ಸೇನಾನಿಗಳ ಮಹತ್ವವೇನು ಗೊತ್ತಾ..?
Ration card EKYC : ಕೆವೈಸಿ ಜೋಡಣೆಯಾದ ಬಳಿಕ ಪಡಿತರ ವಿತರಣೆ
ಇನ್ನು, 22 ಲಕ್ಷ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ಅಮಾನತು ಮಾಡಿದ್ದು ಸರಿಯಾಗಿ ಕೆವೈಸಿ ಜೋಡಣೆಯಾದ ಬಳಿಕ ಈ ಕಾರ್ಡ್ ದಾರರಿಗೆ ಅಕ್ಕಿ ಸಿಗಲಿದೆ. ಈಗಾಗಲೇ ಲಕ್ಷಾಂತರ ಎಪಿಎಲ್ ಕಾರ್ಡ್ ಗಳು ರದ್ದಾಗಿದ್ದು 60 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಗೆ ಶಿಫ್ಟ್ ಮಾಡಲಾಗಿದೆ. ರೇಷನ್ ಅಂಗಡಿಗೆ ತೆರಳಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: Actress Nayanthara | ನಟ ಧನುಷ್ ವಿರುದ್ಧ ನಯನತಾರಾ ಗಂಭೀರ ಆರೋಪ