Gruhalakshmi Yojana | ಬಿಪಿಎಲ್‌ ಕಾರ್ಡ್‌ ರದ್ದಾದರೆ ಗೃಹಲಕ್ಷ್ಮಿ ಯೋಜನೆ ಹಣ ಬಂದ್ ಆಗುತ್ತಾ ..!?

Gruhalakshmi Yojana : ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶಾಕ್ ಎದುರಾಗಿದೆ. ಹೌದು, ಆಹಾರ ಇಲಾಖೆ ಅನಧಿಕೃತ ಬಿಪಿಎಲ್‌ ಕಾರ್ಡ್‌ಗಳ ವಿರುದ್ಧ ಕ್ರಮಕ್ಕೆ…

Gruhalakshmi yojana

Gruhalakshmi Yojana : ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶಾಕ್ ಎದುರಾಗಿದೆ.

ಹೌದು, ಆಹಾರ ಇಲಾಖೆ ಅನಧಿಕೃತ ಬಿಪಿಎಲ್‌ ಕಾರ್ಡ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ ಪೂರಕವೆಂಬಂತೆ ತಾಂತ್ರಿಕ ಕಾರಣಗಳಿಂದ ಹಲವರ ಖಾತೆಗೆ ಹಣ ಜಮೆಯಾಗುವುದು ಸ್ಥಗಿತವಾಗಿದ್ದು, ಕಾರ್ಡ್ ರದ್ದಾದ ಹಲವರು ಗೃಹಲಕ್ಷ್ಮಿ ಯೋಜನೆಯೂ ಸ್ಥಗಿತವಾಗುತ್ತದೆ ಎಂದು ಆತಂಕ ಪಡುತ್ತಿದ್ದಾರೆ

ಇದನ್ನೂ ಓದಿ: Heavy rain : ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ; ಹೈ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

Vijayaprabha Mobile App free

Gruhalakshmi Yojana : ಬಿಪಿಎಲ್‌ ಕಾರ್ಡ್‌ ರದ್ದಾದರೆ ಗೃಹಲಕ್ಷ್ಮಿ ಯೋಜನೆ ಹಣ ಸ್ಥಗಿತವಾಗುತ್ತದೆಯೇ?

ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡುತ್ತಿದ್ದು, ಕಾರ್ಡ್‌ ರದ್ದಾದ ಹಲವರು ಗೃಹಲಕ್ಷ್ಮಿ ಯೋಜನೆಯೂ ಸ್ಥಗಿತವಾಗುತ್ತದೆ ಎಂಬ ಆತಂಕ ಎದುರಿಸುತ್ತಿದ್ದಾರೆ. ಆದರೆ ಗೃಹಲಕ್ಷ್ಮಿ ಯೋಜನೆಗೆ ಬಿಪಿಎಲ್‌ ಕಾರ್ಡ್‌ ಮಾನದಂಡವಲ್ಲ. ರೇಷನ್‌ ಕಾರ್ಡ್‌ ಹೊಂದಿದ್ದರೆ ಸಾಕಗ್ಗಿದ್ದು, ಸದ್ಯ ಯಾರಿಗೂ ಯೋಜನೆಯಿಂದ ಕೈಬಿಡುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kartika Purnima | ಕಾರ್ತಿಕ ಪೂರ್ಣಿಮೆ ಈ ರಾಶಿಯವರಿಗೆ ಅತ್ಯಂತ ಶುಭ ಯೋಗ

Gruhalakshmi Yojana : ಈ ಮಹಿಳೆಯರಿಗಿಲ್ಲ ಖಾತೆಗೆ 2000 ರೂ.

ಇನ್ನು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರ ಜೂನ್‌ 6ರಂದು ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಲ್ಲಿ 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2000 ಹಣ (ಕಂತುಗಳಲ್ಲಿ) ಪಾವತಿಯಾಗುತ್ತಿದೆ. ಇಂದಿಗೂ ಮಹಿಳೆಯರಿಗೆ ಎನ್‌ಪಿಸಿಐ ತಾಂತ್ರಿಕ ತೊಡಕು ಆಗಾಗ ಕಾಣಿಸಿಕೊಳ್ಳುತ್ತಿದ್ದು, ಇದೇ ಕಾರಣಕ್ಕೆ ನೋಂದಣಿಯಾದ ನಾಲ್ಕು ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಹಣ ಡಿಬಿಟಿ ಮೂಲಕ ಪಾವತಿ ಆಗುತ್ತಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.