Ratan Tata Personal property: ಉದ್ಯಮ ಲೋಕದ ಮಿನುಗುತಾರೆ ರತನ್ ಟಾಟಾ (Ratan Tata) ಅವರ ವೈಯಕ್ತಿಕ ಆಸ್ತಿ (property) ಎಷ್ಟು? ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲು? ಎಂಬುದರ ಮಾಹಿತಿ
ಹೌದು, ರತನ್ ಟಾಟಾ ಅವರು ಲಕ್ಷಾಂತರ ಕೋಟಿ ರೂ ಮೌಲ್ಯದ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ್ದು, ವೈಯಕ್ತಿಕವಾಗಿ ₹16,448 ಕೋಟಿ ರೂ ಸಂಪತ್ತನ್ನು ಹೊಂದಿದ್ದ ಅವರು ಅಕ್ಟೋಬರ್ 9ರಂದು ಇಹಲೋಕ ತ್ಯಜಿಸಿದ್ದರು.
ಫಾರ್ಚೂನ್ ಇಂಡಿಯಾ-ವಾಟರ್‌ಫೀಲ್ಡ್ ಸಂಶೋಧನೆಯ ಪ್ರಕಾರ ರತನ್ ಟಾಟಾ ಅವರ ವೈಯಕ್ತಿಕ ಸಂಪತ್ತು ₹16,448 ಕೋಟಿ ಎಂದು ಅಂದಾಜಿಸಲಾಗಿದೆ, ಅದರಲ್ಲಿ ಬಹುಪಾಲು ಟಾಟಾ ಗ್ರೂಪ್ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ.
ಇದನ್ನೂ ಓದಿ: Channapatna constituency | ಉಪ ಚುನಾವಣೆ ಅದೃಷ್ಟದ ಕ್ಷೇತ್ರ ಚನ್ನಪಟ್ಟಣದ ರಾಜಕೀಯ ಇತಿಹಾಸ
ರತನ್ ಟಾಟಾ ಅವರ ಹೆಚ್ಚಿನ ಸಂಪತ್ತು ಷೇರುಗಳಲ್ಲಿ ಮತ್ತು ರಿಯಲ್ ಎಸ್ಟೇಟ್ನಲ್ಲಿ ಇದ್ದು, ವೈಯಕ್ತಿಕ ಜೀವನದಲ್ಲಿ ಬಹಳ ಸರಳತೆ ಅಳವಡಿಸಿಕೊಂಡಿದ್ದ ರತನ್ ಟಾಟಾ ತನ್ನೊಂದಿಗಿದ್ದ ನಂಬಿಕಸ್ಥರನ್ನು ಬಹಳ ಚೆನ್ನಾಗಿ ನೋಡಿಕೊಂಡವರು.
Ratan Tata Personal property : ಟಾಟಾ ಆಸ್ತಿಯಲ್ಲಿ ಯಾರಿಗೆಲ್ಲಾ ಪಾಲು?
ಟಾಟಾ ಅವರು ಬರೆದಿಟ್ಟ ಉಯಿಲಿನ ಸಂಗತಿ ಸ್ವಲ್ಪ ಸ್ವಲ್ಪವೇ ಹೊರಬರುತ್ತಿದೆ. ತಮ್ಮ ವಿಲ್ನಲ್ಲಿ ಅವರು ತಮ್ಮ ಪ್ರೀತಿಯ ಸಾಕು ನಾಯಿ ಟಿಟೋವನ್ನು ನೋಡಿಕೊಳ್ಳಲು ಅಡುಗೆ ಕೆಲಸಗಾರ ರಾಜನ್ ಶಾಗೆ ವಹಿಸಿದ್ದಾರೆ.
ಈ ಕಾರ್ಯಕ್ಕಾಗಿ ರಾಜನ್ ಶಾ ಅವರಿಗೆ ರತನ್ ಟಾಟಾ ತಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ಬರೆದಿದ್ದಾರೆ. ಪರಿಚಾರಿಕೆಯ ಕೆಲಸ ಮಾಡುತ್ತಿದ್ದ ಬಟ್ಲರ್ ಸುಬ್ಬಯ್ಯ ಅವರ ಹೆಸರನ್ನು ವಿಲ್ನಲ್ಲಿ ಪ್ರಸ್ತಾಪಿಸಿದ್ದು, ಅವರಿಗೆ ಆಸ್ತಿಯಲ್ಲಿ ಪಾಲು ಕೊಟ್ಟಿರುವುದು ತಿಳಿದುಬಂದಿದೆ.
ಇದನ್ನೂ ಓದಿ: Heavy rain | ರಾಜ್ಯದಲ್ಲಿ ಇಂದಿನಿಂದ ಮತ್ತೆ ಭಾರಿ ಮಳೆ ಮುನ್ಸೂಚನೆ
ಟಾಟಾ ಜೊತೆ ಕೆಲ ವರ್ಷಗಳಿಂದ ಜೊತೆಯಲ್ಲಿರುತ್ತಿದ್ದ ಹುಡುಗ ಶಾಂತನು ನಾಯ್ಡು. ವೈಯಕ್ತಿಕವಾಗಿ ಟಾಟಾ ಅವರ ಯೋಗಕ್ಷೇಮಗಳನ್ನು ಈತ ನೋಡಿಕೊಳ್ಳುತ್ತಿದ್ದ. ಈತನ ಸ್ವಂತ ಬಿಸಿನೆಸ್ಗೆ ನೀಡಿದ್ದ ಸಾಲವನ್ನು ಟಾಟಾ ಸಾಯುವ ಮುನ್ನವೇ ಮನ್ನಾ ಮಾಡಿದ್ದು, ಈಗ ಆಸ್ತಿಯಲ್ಲೂ ಒಂದಷ್ಟು ಪಾಲನ್ನು ಈತನಿಗೆ ಬರೆದಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಕುತೂಹಲದ ಸಂಗತಿ ಎಂದರೆ ಈಗಿನ ಟಾಟಾ ಟ್ರಸ್ಟ್ಗಳ ಮುಖ್ಯಸ್ಥ ನೋಯಲ್ ಟಾಟಾ ಹಾಗೂ ಅವರ ಕುಟುಂಬ ಸದಸ್ಯರ ಹೆಸರನ್ನು ಟಾಟಾ ತಮ್ಮ ವಿಲ್ನಲ್ಲಿ ಪ್ರಸ್ತಾಪಿಸಿಲ್ಲ.