ತಿಕೋಟಾ : ಮಕ್ಕಳ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಕಾವ್ಯಾ ನಿಂಗಪ್ಪ ಕೋಟಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೌದು, ತಾಲ್ಲೂಕಿನ ರಾಮಪುರ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಬಾಲ ವಿಕಾಸ ಆಕಾಡೆಮಿ ಧಾರವಾಡ ಇವರು ಹಮ್ಮಿಕೊಂಡ ಭಾಷಣ ಸ್ಪರ್ಧೆಯಲ್ಲಿ ವಿದ್ಯಾಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಕಾವ್ಯಾ ನಿಂಗಪ್ಪ ಕೋಟಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ತಿಕೋಟಾ : ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ತಿಮಾ೯ನ – ಸಿದ್ರಾಮಯ್ಯ ಲಕ್ಕುಂಡಿಮಠ
ಈ ಸಂದರ್ಭದಲ್ಲಿ ಸಿ ಆರ್ ಪಿ ಸುಜಾತಾ ಬಾಗಲಕೋಟ ಇತರ ಶಿಕ್ಷಕರು ಹಾಜರಿದ್ದರು ಸಂಸ್ಥೆಯ ಆಡಳಿತ ಮಂಡಳಿಯವರು ಶಾಲೆಯ ಎಲ್ಲ ಗುರುವೃಂದ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.