ತಿಕೋಟಾ : ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ತಿಮಾ೯ನ – ಸಿದ್ರಾಮಯ್ಯ ಲಕ್ಕುಂಡಿಮಠ

ತಿಕೋಟಾ : ತಿಕೋಟಾ ಕನ್ನಡ ಸಾಹಿತ್ಯ ಸಮ್ಮೇಳನ (Kannada Literature Conference) ಜನವರಿ ಮೊದಲ ವಾರದಂದು ಮಾಡಲು ತಿಮಾ೯ನಿಸಲಾಯಿತು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿಪ್ರಾಯ…

Tikota Taluka Kannada Literature Conference

ತಿಕೋಟಾ : ತಿಕೋಟಾ ಕನ್ನಡ ಸಾಹಿತ್ಯ ಸಮ್ಮೇಳನ (Kannada Literature Conference) ಜನವರಿ ಮೊದಲ ವಾರದಂದು ಮಾಡಲು ತಿಮಾ೯ನಿಸಲಾಯಿತು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹೌದು, ನಿನ್ನೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ತಿಮಾ೯ನಿಸಿ ಅಥ೯ಪೂಣ೯ವಾದ ಆಚರಣೆಗೆ ಸಂಕಲ್ಪ ಮಾಡಲಾಯಿತು.

Tikota Taluka Kannada Literature Conference
Tikota Taluka Kannada Literature Conference

ಸಾನ್ನಿಧ್ಯ ವಹಿಸಿದ್ದ ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಎಲ್ಲ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿ ಪ್ರಥಮ ಸಾಹಿತ್ಯ ಸಮ್ಮೇಳನ ಆಚರಿಸೋಣ ಎಂದರು.

Vijayaprabha Mobile App free

ಇದನ್ನೂ ಓದಿ: Channapatna constituency | ಉಪ ಚುನಾವಣೆ ಅದೃಷ್ಟದ ಕ್ಷೇತ್ರ ಚನ್ನಪಟ್ಟಣದ ರಾಜಕೀಯ ಇತಿಹಾಸ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ನಾಡು -ನುಡಿ. ನೆಲ-ಜಲ ಕಾಪಾಡುವ ದೃಷ್ಟಿಯಿಂದ ಗೋಷ್ಠಿಗಳನ್ನು ಏಪ೯ಡಿಸೋಣ. ಸ್ಥಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ ಬಿ ಪಾಟೀಲರ ಗಮನಕ್ಕೆ ತಂದು ಕಾರ್ಯಕ್ರಮ ಯಶಸ್ವಿ ಮಾಡೋಣ ಎಂದರು.

ಪದಾಧಿಕಾರಿಗಳಾದ ಎಸ್ ಬಿ ಬಿರಾದಾರ. ಶಿಲ್ಪಾ ಹಂಜಿ. ಗಣಪತಿ ಗಳವೆ. ಗೌರಿಶಂಕರ ಹಿರೇಮಠ. ರಮೇಶ ಖ್ಯಾಡಿ. ಎಸ್ ಎಸ್ ಕುಂಬಾರ
ಎನ್ ಬಿ ಕೋಟಿ. ನಿಂಗರಾಜ ಪಾಟೀಲ. ಶರಣು ಕಂಠಿ.ಎಚ್ ಎಲ್ ಕುಡಚಿ ದರೆಪ್ಪ ಎಚ್ಚಿ. ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.