Theft Arrest: ಮನೆ ಕಳ್ಳತನ ಆರೋಪಿಗಳು ಪೊಲೀಸ್ ವಶಕ್ಕೆ

ಮುಂಡಗೋಡ: ಪಟ್ಟಣದ ಭಾರತನಗರದ ಮನೆಯೊಂದರಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ ದೂರಿನ ಹಿನ್ನೆಲೆಯಲ್ಲಿ ಎಸ್‌ಪಿ ಎಂ.ನಾರಾಯಣ ಮಾರ್ಗದಶನದ ಮೇರೆಗೆ ಕಳ್ಳರನ್ನು ಬೇಧಿಸಿದ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಸಿಬ್ಬಂದಿಗಳಿಗೆ ಎಸ್‌ಪಿ ಪ್ರಶಂಸಿಸಿದ್ದಾರೆ. ಪಟ್ಟಣದ…

ಮುಂಡಗೋಡ: ಪಟ್ಟಣದ ಭಾರತನಗರದ ಮನೆಯೊಂದರಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ ದೂರಿನ ಹಿನ್ನೆಲೆಯಲ್ಲಿ ಎಸ್‌ಪಿ ಎಂ.ನಾರಾಯಣ ಮಾರ್ಗದಶನದ ಮೇರೆಗೆ ಕಳ್ಳರನ್ನು ಬೇಧಿಸಿದ ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಸಿಬ್ಬಂದಿಗಳಿಗೆ ಎಸ್‌ಪಿ ಪ್ರಶಂಸಿಸಿದ್ದಾರೆ.

ಪಟ್ಟಣದ ಭಾರತನಗರದ ಅರ್ಜುನ ಸಿಂಗ್ ಎಂಬುವರ ಮನೆಯಲ್ಲಿ ಅ.28 ರಂದು ಯಾರೋ ಕಳ್ಳರು ಕಿಟಕಿಯಿಂದ ಹೊಕ್ಕಿ ಕಳ್ಳತನ ಮಾಡಿದ್ದಾರೆ ಎಂದು ದೂರು ದಾಖಲು ಮಾಡಿದ್ದರು. ಕಳ್ಳತನ ‌ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಚೇತನ ನರೇಶ ಪಾರ್ಗೆ ಹಾಗೂ ವಿನಾಯಕ ಕರೀಯಪ್ಪ ಭೋವಿವಡ್ಡರ, ಇಬ್ಬರು ಆರೋಪಿಗಳು ಸುಭಾಸ ನಗರದವರಾಗಿದ್ದಾರೆ.

ಕಳ್ಳತನ ನಡೆದ ಮನೆ ಮಾಲೀಕನು ನೀಡಿದ ದೂರಿನಲ್ಲಿ 10 ಗ್ರಾಂ. ಬಂಗಾರ 1 ಚೈನ್, ಬಂಗಾರದ ಉಂಗುರ 2.5 ಗ್ರಾಂ, ರಿಯಲ್ ಮಿ ಪೋನ್, ಬೆಳ್ಳಿಯ ಕೈ ಖಡ್ಗ ಹಾಗೂ 50,000 ರೂ.ನಗದು ಕಳ್ಳತನ ನಡೆದಿದೆ ಎಂದು ದೂರು ನೀಡಲಾಗಿತ್ತು.

Vijayaprabha Mobile App free

ಬಂಧಿತ ಆರೋಪಿಗಳಿಂದ 10 ಗ್ರಾಂ. ಬಂಗಾರ 1 ಚೈನ್, ಬಂಗಾರದ ಉಂಗುರ 2.5 ಗ್ರಾಂ, ರಿಯಲ್ ಮಿ ಪೋನ್ ವಶಪಡೆಯಲಾಗಿದೆ.

ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್‌ಐ ಹನುಮಂತ ಕುಡಗುಂಟಿ, ಕೋಟೆಶ ನಾಗರವಳ್ಳಿ, ಅಣ್ಣಪ್ಪ ಬುಗಡಗೇರಿ, ಮಾಲತೇಶ ಹಾಗೂ ತಿರುಪತಿ ಚೌಡಣ್ಣನವರ ಪ್ರಮುಖರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.