Divorce | ಡಿವೋರ್ಸ್‌ಗೆ ಕಾರಣಗಳೇನು? ವಿಚ್ಛೇದನದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳೇನು?

Divorce : ದಂಪತಿಗಳ ಮಧ್ಯೆ ಸಂವಹನವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ, ವಾದಗಳು, ಅಸಮಾಧಾನಗಳು ಹೆಚ್ಚಾದಾಗ ದಂಪತಿಗಳು ಮೌನವಾಗಿದ್ದರೆ, ಅದು ಪ್ರತ್ಯೇಕತೆ & ವಿಚ್ಛೇದನವನ್ನು(Divorce) ಸೂಚಿಸಲಿದ್ದು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗದಿದ್ದಾಗ ದಂಪತಿಗಳು…

Divorce

Divorce : ದಂಪತಿಗಳ ಮಧ್ಯೆ ಸಂವಹನವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ, ವಾದಗಳು, ಅಸಮಾಧಾನಗಳು ಹೆಚ್ಚಾದಾಗ ದಂಪತಿಗಳು ಮೌನವಾಗಿದ್ದರೆ, ಅದು ಪ್ರತ್ಯೇಕತೆ & ವಿಚ್ಛೇದನವನ್ನು(Divorce) ಸೂಚಿಸಲಿದ್ದು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗದಿದ್ದಾಗ ದಂಪತಿಗಳು ಪ್ರತ್ಯೇಕತೆಯನ್ನು ಬಯಸುತ್ತಾರೆ.

Divorce : ನಂಬಿಕೆ ದ್ರೋಹ

ದ್ರೋಹವು ದಂಪತಿಗಳ ವಿಚ್ಛೇದನಕ್ಕೆ ಮೊದಲ ಕಾರಣವಾಗಿದೆ. ಇಬ್ಬರಲ್ಲಿ ಒಬ್ಬರು ಮೋಸ ಮಾಡಿದಾಗ, ಅದು ಸಂಪೂರ್ಣವಾಗಿ ನಂಬಿಕೆಯನ್ನು ಮುರಿಯುತ್ತದೆ. ಒಮ್ಮೆ ಕಳೆದುಕೊಂಡ ನಂಬಿಕೆಯನ್ನು ಮರಳಿ ಪಡೆಯುವುದು ಕಷ್ಟ. ಉಳಿದಿರುವ ಕೊನೆಯ ಆಯ್ಕೆಯು ವಿಚ್ಚೇದನ ಅಥವಾ ಕ್ಷಮೆಯಾಗಿರುತ್ತದೆ.

ಇದನ್ನೂ ಓದಿ: Atal Pension Yojana | ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳೇನು?

Vijayaprabha Mobile App free

Divorce : ಆತ್ಮೀಯತೆಯ ಕೊರತೆ

ದಂಪತಿಗಳ ನಡುವೆ ದೈಹಿಕ ಮತ್ತು ಭಾವನಾತ್ಮಕ ಅನ್ನೋನ್ಯತೆಯು ಮುಖ್ಯವಾಗಿದೆ. ದಂಪತಿಗಳು ಒಬ್ಬರಿಗೊಬ್ಬರು ಸಂಪರ್ಕ ಹೊಂದಿಲ್ಲದಿದ್ದರೆ, ಅಂತಹ ಪ್ರೀತಿ ರಹಿತ ದಾಂಪತ್ಯದಲ್ಲಿ ಯಾವುದೇ ಅರ್ಥವಿಲ್ಲ, ಅದು ಜವಾಬ್ದಾರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಆರ್ಥಿಕ ತೊಂದರೆಗಳು

ವಿಚ್ಛೇದನಕ್ಕೆ ಮತ್ತೊಂದು ಕಾರಣವೆಂದರೆ ಅದು ಹಣಕಾಸಿನ ಸಮಸ್ಯೆ. ಇಬ್ಬರು ಪರಸ್ಪರ ಕಾಳಜಿ ವಹಿಸುವುದು ಮುಖ್ಯ. ಮದುವೆಯಾದ ನಂತರ ಸಂಸಾರದ ಜವಾಬ್ದಾರಿ ಹೆಗಲ ಮೇಲಿರುತ್ತದೆ. ಅದಕ್ಕೆ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಬೇಕಾಗುತ್ತದೆ.

ಇದನ್ನೂ ಓದಿ: ಅಟಲ್ ಪೆನ್ಷನ್ ಯೋಜನೆಯಡಿ ಪ್ರತಿ ತಿಂಗಳು ರೂ.5 ಸಾವಿರ; ಖಾತೆ ತೆರೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಡಿವೋರ್ಸ್‌ನಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳೇನು?

  • ಮಗುವು ಖಿನ್ನತೆಗೆ ಒಳಗಾಗುತ್ತದೆ.
  • ಶೈಕ್ಷಣಿಕ ಹಿನ್ನಡೆ ಉಂಟಾಗುತ್ತದೆ.
  • ಮಾನಸಿಕ ಒತ್ತಡದಿಂದ ಮನೋರೋಗಗಳು ಉಂಟಾಗುತ್ತವೆ.
  • ದುಶ್ಚಟಕ್ಕೆ ಬಲಿಯಾಗುತ್ತಾರೆ.
  • ಮಕ್ಕಳು ಆತಂಕದ ಪರಿಸ್ಥಿತಿಗೆ ಸಿಲುಕುತ್ತಾರೆ.

ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ

ಇನ್ನು, ಮನೆಯಲ್ಲಿ ತಂದೆ-ತಾಯಿ ನಡುವಿನ ಜಗಳವು ಮಕ್ಕಳನ್ನು ಖಿನ್ನತೆ ಹಾಗು ಒತ್ತಡಕ್ಕೆ ಒಳಪಡಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದ 14% ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ ಅದಕ್ಕೆ ಕಾರಣ ಮನೆಯಲ್ಲಿನ ವಿರಸಗಲಾಗಿದ್ದು, ಯಾವ ಕುಟುಂಬ ಜೀವನದ ಮೇಲೆ ಭಾರತೀಯರು ಅವಲಂಬಿತರೋ ಅದೇ ಕುಟುಂಬ ಜೀವನದ ಮೇಲೆ ಡಿವೋರ್ಸ್ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.