Deepavali : ಕತ್ತಲೆಯ ಮೇಲೆ ಬೆಳಕು ಹಚ್ಚುವ ಐದು ದಿನದ ದೀಪಾವಳಿ (Deepavali) ಆಚರಣೆ ಮಹತ್ವ, ಪೂಜಾ ಸಮಯ ಯಾವಾಗ ಎಂದು ತಿಳಿದುಕೊಳ್ಳೋಣ..
ದೀಪಾವಳಿಯು ಕತ್ತಲೆಯ ಮೇಲೆ ಬೆಳಕು, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸೂಚಿಸಲಿದ್ದು, ಇದು ನಮ್ಮ ಜೀವನದಿಂದ ಕತ್ತಲೆಯ ನೆರಳು, ನಕಾರಾತ್ಮಕತೆ ಮತ್ತು ಅನುಮಾನಗಳ ನಿರ್ಮೂಲನೆಯನ್ನು ಸೂಚಿಸುತ್ತದೆ. ಹಬ್ಬವು ನಮ್ಮ ಅಂತರಂಗವನ್ನು ಸ್ಪಷ್ಟತೆ ಮತ್ತು ಸಕಾರಾತ್ಮಕತೆಯಿಂದ ಬೆಳಗಿಸುವ ಸಂದೇಶವನ್ನು ಉತ್ತೇಜಿಸುತ್ತದೆ.
ಧನ ತ್ರಯೋದಶಿ (ಧನತೇರಸ್)
ದೀಪಾವಳಿಯ ಮೊದಲ ದಿನವನ್ನು ಧನ ತ್ರಯೋದಶಿ ಅಥವಾ ನೀರು ತುಂಬುವ ಹಬ್ಬ ಎಂದು ಕರೆಯುತ್ತಾರೆ. ಈ ದಿನದಂದು ಲಕ್ಷ್ಮೀ & ಕುಬೇರನ ಆರಾಧನೆ ಮಾಡಲಾಗುತ್ತದೆ.
ಪೂಜಾ ಸಮಯ: ಅಕ್ಟೋಬರ್ 29 ಬೆಳಿಗ್ಗೆ 10:31 ರಿಂದ ಅ. 30 ರ ಮಧ್ಯಾಹ್ನ 1:15 ರವರೆಗೆ. ಈ ಸಮಯ ವಾಹನ, ಚಿನ್ನ, ಬೆಳ್ಳಿ ಖರೀದಿಸಲು ಸೂಕ್ತವಾಗಿದೆ.
ಇದನ್ನೂ ಓದಿ: Panchanga | ಇಂದು ಸೋಮವಾರ 28-10-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ನರಕ ಚತುರ್ದಶಿ
ಕೃಷ್ಣ ನರಕಾಸುರನ ವಧೆ ಮಾಡಿದ ದಿನವನ್ನು ನರಕ ಚತುರ್ದಶಿ ಎನ್ನಲಾಗುತ್ತದೆ. ಈ ದಿನ ಶ್ರೀಕೃಷ್ಣನನ್ನು ಆರಾಧಿಸಿ, ತಲೆಸ್ನಾನ ಮಾಡಿ ದೃಷ್ಟಿ ಬೊಟ್ಟು ಹಚ್ಚಿಕೊಳ್ಳುವುದರಿಂದ ನಮ್ಮ ಮೇಲಿನ ಕೆಟ್ಟ ದೃಷ್ಟಿ ದೂರವಾಗುತ್ತದೆ ಎನ್ನುವ ನಂಬಿಕೆಯಿದೆ.
ಶುಭ ಚತುರ್ದಶಿ ತಿಥಿ: ಅಕ್ಟೋಬರ್ 30 ಮಧ್ಯಾಹ್ನ 1:15 ರಿಂದ 31ರ ಮಧ್ಯಾಹ್ನ 3:52 ರವರೆಗೆ.
ದೀಪಾವಳಿ ಆಚರಣೆ (Deepavali celebration)
ಬೆಳಕಿನ ಹಬ್ಬ ದೀಪಾವಳಿಯನ್ನು ನವೆಂಬರ್ 1 ರಂದು ಆಚರಿಸಲಾಗುತ್ತದೆ. ಈ ದಿನ ಸಮುದ್ರ ಮ೦ಥನದಲ್ಲಿ ಲಕ್ಷ್ಮಿ ದೇವಿಯು ಪುನರ್ಜನ್ಮ ತಾಳಿದ್ದು, ಮನೆಯಲ್ಲಿ ಲಕ್ಷ್ಮಿಪೂಜೆ ಮಾಡಿ. ಹೊಸ ವ್ಯಾಪಾರ ಆರಂಭಕ್ಕೆ ಈ ದಿನ ಸೂಕ್ತವಾಗಿದೆ.
ಅಮವಾಸ್ಯೆ ತಿಥಿ: ಅಕ್ಟೋಬರ್ 31 ಮಧ್ಯಾಹ್ನ 3:52 ರಿಂದ ನವೆಂಬರ್ 1 ಸಂಜೆ 6:16 ರವರೆಗೆ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 28-10-2024 ಸೋಮವಾರ
ಬಲಿಪಾಡ್ಯಮಿ ಅಥವಾ ಗೋವರ್ಧನ ಪೂಜೆ
ಪುರಾಣದ ಪ್ರಕಾರ, ಈ ದಿನದಂದು ಶ್ರೀ ಕೃಷ್ಣನು ಗೋವರ್ಧನ ಬೆಟ್ಟವನ್ನು ಮೇಲೆತ್ತಿದ್ದು ಹಾಗೂ ಕೃಷ್ಣನ ಆಜ್ಞೆಯಂತೆ ಬಲಿಯು ಭೂಲೋಕ ಆಗಮಿಸುವ ಸಮಯವಾಗಿದೆ.
ಪ್ರತಿಪದ ತಿಥಿ: ನವೆಂಬರ್ 1 ಸಂಜೆ 6:16 ರಿಂದ ನವೆಂಬರ್ 2 ರಾತ್ರಿ 8:21 ರವರೆಗೆ.
ಭಾಯಿ ದೂಜ್ (ಭಾತೃ ವಿಧಿ)
ದೀಪಾವಳಿ 5ನೇ ದಿನ ಭಾಯಿ ದೂಜ್ ಹಬ್ಬವನ್ನು ಉತ್ತರ ಭಾರತದಲ್ಲಿ ಆಚರಿಸುತ್ತಾರೆ. ಈ ಹಬ್ಬವನ್ನು ಯಮ ದ್ವಿತೀಯ ಅಥವಾ ಭಾತೃ ವಿಧಿ ಎಂದು ಕರೆಯಲಾಗುತ್ತದೆ. ಸಹೋದರಿಯರು ಈ ದಿನ ತಮ್ಮ ಸಹೋದರನ ದೀರ್ಘಾಯುಷ್ಯಕ್ಕಾಗಿ ಆಚರಿಸುತ್ತಾರೆ.
ಆಚರಣೆ ಸಮಯ: ನವೆಂಬರ್ 2 ರಾತ್ರಿ 8:21ರಿಂದ ನವೆಂಬರ್ 3 ರಾತ್ರಿ 7:52 ರವರೆಗೆ.