Pumpkin : ಕುಂಬಳಕಾಯಿ ಆರೋಗ್ಯಕರ, ಬಹುಮುಖ ತರಕಾರಿಯಾಗಿದ್ದು, ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ವಿವಿಧ ಪೋಷಕಾಂಶಗಳಿಂದ ತುಂಬಿರುತ್ತದೆ. ಕುಂಬಳಕಾಯಿಯ ಹೆಚ್ಚಿನ ಆರೋಗ್ಯ ಪ್ರಯೋಜನಗಳು ಅದರ ಫೈಬರ್ ಅಂಶ ಮತ್ತು ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ಸೇರಿದಂತೆ ಸೂಕ್ಷ್ಮ ಪೋಷಕಾಂಶಗಳ ಮೇಲೆ ಕೇಂದ್ರೀಕೃತವಾಗಿವೆ.
Pumpkin health benefits : ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು
- ರೋಗ ನಿರೋಧಕ ಶಕ್ತಿ ಹೆಚ್ಚಳ
- ಕಣ್ಣಿನ ದೃಷ್ಟಿ ಸುಧಾರಿಸುತ್ತದೆ
- ಮಧುಮೇಹದಿಂದ ಪಾರಾಗಲು ಸಹಕಾರಿ
- ತೂಕ ಕಡಿಮೆ ಮಾಡುತ್ತದೆ
- ಮೂಳೆಗಳ ಬಲವರ್ಧನೆಗೆ ಉತ್ತಮ
- ನಿದ್ರಾಹೀನತೆಗೆ ಮದ್ದು
- ಚರ್ಮದ ಕಾಂತಿ ಹೆಚ್ಚಿಸುತ್ತದೆ
ಇದನ್ನೂ ಓದಿ: Blood Cancer : ಬ್ಲಡ್ ಕ್ಯಾನ್ಸರ್‌ನಿಂದ ಪಾರಾಗಲು ಈ ರೀತಿ ಜೀವನಶೈಲಿ ಬದಲಿಸಿಕೊಳ್ಳಿ..!
1. ರೋಗ ನಿರೋಧಕ ಶಕ್ತಿ ಹೆಚ್ಚಳ
ಕುಂಬಳಕಾಯಿಯ ತಿರುಳು ಮತ್ತು ಬೀಜಗಳಲ್ಲಿ ವಿಟಮಿನ್ ಸಿ, ಇ, ಕಬ್ಬಿಣ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿವೆ. ಪೋಷಕಾಂಶಗಳ ಶಕ್ತಿಯುತ ಸಂಯೋಜನೆಯಿರುವುದರಿಂದ ಆಹಾರದಲ್ಲಿ ಹೆಚ್ಚು ಕುಂಬಳಕಾಯಿಯನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
2. ಕಣ್ಣಿನ ದೃಷ್ಟಿ ಸುಧಾರಿಸುತ್ತದೆ
ಪ್ರತಿನಿತ್ಯ ಕುಂಬಳಕಾಯಿ ಸೇವನೆ ಮಾಡುವುದರಿಂದ ದೃಷ್ಟಿಯಲ್ಲಿನ ತೊಂದರೆಗಳು ಕಡಿಮೆಯಾಗುತ್ತದೆ. ಇದರಲ್ಲಿನ ವಿಟಮಿನ್ ಎ ಆರೋಗ್ಯಕರವಾದ ಕಣ್ಣುಗಳನ್ನು ಹೊಂದಲು ಮತ್ತು ಕಣ್ಣುಗಳ ದೃಷ್ಟಿ ದುರ್ಬಲಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.
3. ಮಧುಮೇಹದಿಂದ ಪಾರಾಗಲು ಸಹಕಾರಿ
ಕುಂಬಳಕಾಯಿಯಲ್ಲಿನ ಪೊಟ್ಯಾಷಿಯಂ ಮಟ್ಟವು ಪಾರ್ಶ್ವವಾಯು ಲಕ್ಷಣಗಳು, ಟೈಪ್ 2 ಮಧುಮೇಹದಂತಹ ಅಪಾಯದಿಂದ ಪಾರು ಮಾಡುತ್ತದೆ. ನಿಯಮಿತವಾಗಿ ಕು೦ಬಳಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: Gastric Problem : ಗ್ಯಾಸ್ಟಿಕ್ ಸಮಸ್ಯೆಗೆ ಮನೆಮದ್ದುಗಳು; ಐದೇ ನಿಮಿಷದಲ್ಲೇ ಸಿಗುತ್ತೆ ಇಸ್ಟ್ಯಾಂಟ್ ರಿಲೀಫ್..!
4. ತೂಕ ಕಡಿಮೆ ಮಾಡುತ್ತದೆ
ಕುಂಬಳಕಾಯಿಯಲ್ಲಿ ಫೈಬರ್ ಹೆಚ್ಚಾಗಿದ್ದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚಿನ ನೀರಿನ ಅಂಶವಿರುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗಿ ಪದೇ ಪದೇ ತಿನ್ನುವುದು ತಪ್ಪುತ್ತದೆ. ಇದರಿಂದ ತೂಕ ಹೆಚ್ಚುವುದಿಲ್ಲ.
5. ಮೂಳೆಗಳ ಬಲವರ್ಧನೆಗೆ ಉತ್ತಮ
ಕುಂಬಳಕಾಯಿಯಲ್ಲಿ ವಿಟಮಿನ್ ಕೆ, ಮೆಗ್ನಿಸಿಯಮ್ ಮತ್ತು ರಂಜಕ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಮೂಳೆಗಳನ್ನು ಗಟ್ಟಿಯಾಗಿಸಲು ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ತಡೆಗಟ್ಟುವಿಕೆಗೆ ಅವಶ್ಯಕವಾಗಿದೆ.
ಇದನ್ನೂ ಓದಿ: ಏಲಕ್ಕಿ ಸೇವನೆ ಮಾಡಿದರೆ ಸಿಗುವ ಆರೋಗ್ಯ ಪ್ರಯೋಜನಗಳು
6. ನಿದ್ರಾಹೀನತೆಗೆ ಮದ್ದು
ಕುಂಬಳಕಾಯಿ ಬೀಜಗಳು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಸಹಾಯಕವಾಗಿದೆ. ಇವುಗಳಲ್ಲಿ ಟ್ರಿಸ್ಟೋಫಾನ್ ಎಂಬ ಅಮಿನೋ ಆಮ್ಲವಿದೆ. ಇದು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
7.ಚರ್ಮದ ಕಾಂತಿ ಹೆಚ್ಚಿಸುತ್ತದೆ
ಕುಂಬಳಕಾಯಿ ಸೇವನೆಯು ಚರ್ಮದ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಕುಂಬಳ ಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುತ್ತಾ ಬರುವುದರಿಂದ ಚರ್ಮದ ಸಕಲ ತೊಂದರೆಗಳಿಗೆ ನೈಸರ್ಗಿಕ ಪರಿಹಾರ ಪಡೆಯಬಹುದು.