PM Kisan : ರೈತರ ಜೀವನದಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯನ್ನು ಜಾರಿಗೊಳಿಸಿದೆ.
ಇದರಂತೆ ಪಿಎಂ ಕಿಸಾನ್ ಹದಿನೆಂಟನೇ ಕಂತು ಈಗಾಗಲೇ ಬಿಡುಗಡೆಯಾಗಿದ್ದು, ಕೆಲವರಿಗೆ ಈಗಾಗಲೇ ಹಣ ಜಮೆಯಾಗಿದ್ದು ಇನ್ನುಳಿದವರಿಗೆ ಜಮೆಯಾಗುತ್ತಿದೆ.
ಇದನ್ನೂ ಓದಿ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
PM Kisan : ಲಿಸ್ಟ್‌ನಲ್ಲಿ ನಿಮ್ಮ ಹೆಸರು ನೋಡಲು ಈ ಹಂತಗಳನ್ನು ಅನುಸರಿಸಿ
- ಮೊದಲು PM ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ https://pmkisan.gov.in/ ಹೋಗಿ.
- ಇಲ್ಲಿ ‘ಫಲಾನುಭವಿಗಳ ಪಟ್ಟಿ’ ಆಯ್ಕೆಯು ಮುಖಪುಟದಲ್ಲಿ ಗೋಚರಿಸುತ್ತದೆ.
- ‘ಫಾರ್ಮರ್ಸ್ ಕಾರ್ನರ್’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಮುಂದಿನ ಪುಟಕ್ಕೆ ಹೋಗಿ.
- ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಮಾಡಿ.’Get Report’ ಬಟನ್ ಮೇಲೆ ಕ್ಲಿಕ್ ಮಾಡಿ. ಇದೀಗ ನಿಮ್ಮ ಹೆಸರನ್ನು ಪರಿಶೀಲಿಸಿ.
PM Kisan : ಹಣ ನಿಮ್ಮ ಖಾತೆಗೆ ಜಮೆಯಾಗದಿದ್ದರೆ ಹೀಗೆ ಮಾಡಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತನ್ನು ಅಕ್ಟೋಬರ್ 5ರಂದು ಬಿಡುಗಡೆಯಾಗಿದ್ದರೂ ಕೂಡ ಹಲವು ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಯಾರ ಖಾತೆಗೆ ಇನ್ನೂ 18ನೇ ಕಂತಿನ ಹಣ ಬಂದಿಲ್ಲ ಅವರು ಪಿಎಂ ಕಿಸಾನ್ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದಾಗಿದ್ದು, ವಿಳಂಬದ ಕಾರಣವನ್ನು ತಿಳಿಯಬಹುದಾಗಿದೆ.
PM Kisan ಮುಂದಿನ ಕಂತಿನ ಹಣಕ್ಕಾಗಿ ಈ ಕೆಲಸ ಮಾಡಲೇಬೇಕು
ಇನ್ನು, ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ₹2000 ನೀವು ಪಡೆಯಬೇಕಾದ್ರೆ, ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು, ನಿಮ್ಮ ಬ್ಯಾಂಕ್ ಖಾತೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರಬೇಕು.
ಅಧಿಕೃತ ವೆಬ್‌ಸೈಟ್ ಭೇಟಿ ನೀಡದೆಯೂ ರೈತರು ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದ್ದು, ಪಿಎಂ ಕಿಸಾನ್ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಷನ್ ಮಾಡುವ ಮೂಲಕ ರೈತರು ಈ ಕೆಲಸವನ್ನು ಸುಲಭವಾಗಿ ಮಾಡಬಹುದು.