Munirathna honeytrap : ಮಾಜಿ CM ಒಬ್ಬರ ಖಾಸಗಿ ವಿಡಿಯೊ ಮುನಿರತ್ನ ಬಳಿ ಇದೆ ಎಂದು ಅತ್ಯಾಚಾರ ಸಂತ್ರಸ್ತೆ ಹೇಳಿದ್ದು, ಹನಿಟ್ರ್ಯಾಪ್ (honeytrap) ಮಾಡಿಸಿದ ವಿಡಿಯೊ ಇಟ್ಟುಕೊಂಡೇ ಮುನಿರತ್ನ ಮಂತ್ರಿಗಿರಿ ಪಡೆದಿದ್ದರು ಎಂದು ತಿಳಿಸಿದ್ದಾರೆ.
‘ಮುನಿರತ್ನರನ್ನು ಎಸ್ಐಟಿಯವರು ಗೌಪ್ಯವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಮಮತಾ, ವೆಂಕಟೇಶ್ ಎಂಬವರಿಂದ ಮುನಿರತ್ನ 2020ರಲ್ಲಿ ಪರಿಚಯವಾಗಿದ್ದರು. ನನ್ನ ವಿಡಿಯೊ ಮಾಡಿಕೊಂಡು ಬೆದರಿಕೆ ಹಾಕಿ, ಅತ್ಯಾಚಾರ ನಡೆಸಿದರು. ಜಾಮೀನು ಪಡೆದು ಹೊರ ಬಂದ ಬಳಿಕ ಜೀವಬೆದರಿಕೆ ಇದೆ’ ಎಂದಿದ್ದಾರೆ.
ಇದನ್ನೂ ಓದಿ: UPI : ಯುಪಿಐ ಬಳಕೆದಾರರಿಗೆ ಖುಷಿ ಸುದ್ದಿ; ಯುಪಿಐ ವಹಿವಾಟಿನ ಮಿತಿ 10,000 ರೂಗೆ ಹೆಚ್ಚಿಸಿದ ಆರ್ಬಿಐ
ಹೌದು, ಈ ಕುರಿತು ಸಂತ್ರಸ್ತೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದು “ನನಗೆ ಸರ್ಕಾರದಿಂದ ಭದ್ರತೆ ನೀಡಿದರೆ ನಾನು ಮಾಜಿ ಸಿಎಂಗಳ ಹೆಸರು ಹಾಗೂ ಸಂಬಂಧಿತ ವಿಡಿಯೋ ನೀಡುವೆ,” ಎಂದಿದ್ದಾರೆ. ಏಡ್ಸ್ ರೋಗವುಳ್ಳ ಮಹಿಳೆಯರನ್ನು ಬಳಸಿಕೊಂಡು ಒಟ್ಟು 6 ಜನರನ್ನು ಮುನಿರತ್ನ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 2021ರಿಂದ 2023ರ ಅವಧಿಯಲ್ಲಿ ಮುನಿರತ್ನ ಸಚಿವರಾಗಿದ್ದರು.