ಬಗರ್ ಹುಕುಂ ಜಮೀನು ನೀಡಲು ಸರ್ಕಾರ ಕ್ರಮ; ಏನಿದು ‘ಬಗರ್ ಹುಕುಂ’..?

Bagar Hukum : ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿರುವ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್​ ಹುಕುಂ ಯೋಜನೆಯಡಿಗೆ ಮರುಜೀವ ಬಂದಿದೆ. ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ರೈತರಿಗೆ ಸರ್ಕಾರ ಗುಡ್​ನ್ಯೂಸ್​…

Bagar Hukum : ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿರುವ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್​ ಹುಕುಂ ಯೋಜನೆಯಡಿಗೆ ಮರುಜೀವ ಬಂದಿದೆ. ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ರೈತರಿಗೆ ಸರ್ಕಾರ ಗುಡ್​ನ್ಯೂಸ್​ ನೀಡಿದೆ.

ಹೌದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯಿಸಿ, ’14 ಲಕ್ಷ ರೈತರು ಅರ್ಜಿ ಹಾಕಿದ್ದಾರೆ. ಈ ಸಂಬಂಧ ತಹಶೀಲ್ದಾರ್‌​ಗಳ ಜೊತೆ ಸಭೆ ನಡೆಸಿದ್ದೇನೆ. ನಾಲ್ಕೈದು ತಿಂಗಳಲ್ಲಿ ಇತ್ಯರ್ಥ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

Bagar Hukum :’ಬಗರ್ ಹುಕುಂ’ ಎಂದರೇನು?

ಬಗರ್ ಹುಕುಂ ಸಕ್ರಮಗೊಳಿಸಲು ಸರ್ಕಾರ ತೀರ್ಮಾನ ಮಾಡಿರುವುದಾಗಿ ವರದಿಯಾಗಿದೆ. ಬಗರ್ ಹುಕುಂ ಪದದ ನಿಜವಾದ ರೂಪ ‘ಬಗೈರ್ ಹುಕುಂ’ ಎಂದಾಗಿದೆ. ಇದರ ಅರ್ಥ ‘Without Order’ ಎಂದು. ಹುಕುಂ ಜಾರಿ ಮಾಡುವುದು ಎಂದರೆ ಆದೇಶ ಜಾರಿಗೊಳಿಸುವುದು ಎಂದರ್ಥ.

Vijayaprabha Mobile App free

ಸರ್ಕಾರಿ ಜಮೀನಿನಲ್ಲಿ ಅನುಮತಿ ಇಲ್ಲದೆ ಕೃಷಿ ಮಾಡಿದ್ದರೆ ಅದನ್ನು ಸರ್ಕಾರ ವಾಪಸ್ ಪಡೆಯಬಹುದು. ಆದರೆ ಇಂದು ರೈತರು ಬಹುತೇಕ ಒತ್ತುವರಿ ಮಾಡಿಕೊಂಡಿರುವುದು ಸಾಮಾನ್ಯ. ಇಂತಹ ಜಮೀನು ಸಕ್ರಮ ಮಾಡಲು ಕೋರುವುದೇ ‘ಬಗರ್ ಹುಕುಂ’ ಅರ್ಜಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.