PM Kisan : ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಪಿಎಂ-ಕಿಸಾನ್ ಯೋಜನೆಯಡಿ (PM Kisan Yojana ) ರೈತರ ಖಾತೆಗೆ ಹೆಚ್ಚುವರಿಯಾಗಿ 2 ಸಾವಿರ ರೂ. ಬಿಡುಗಡೆ ಮಾಡಿದ್ದು,, ನವರಾತ್ರಿ ಗಿಫ್ಟ್ ಕೊಟ್ಟಿದೆ.
ಹೌದು, ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಇಂದು ₹20,000 ಕೋಟಿ ಹಣವನ್ನು ಪ್ರಧಾನಿ ಮೋದಿ ಅವರು 18ನೇ ಕಂತಿನ ಹಣ ಬಿಡುಗಡೆ ಮಾಡಿದರು. ಇದರೊಂದಿಗೆ ದೇಶಾದ್ಯಂತ ಸುಮಾರು 9.4 ಕೋಟಿ ರೈತರ ಖಾತೆಗಳಿಗೆ 2 ಸಾವಿರ ರೂ ಬಿಡುಗಡೆ ಮಾಡಿದ್ದು, ಇ-ಕೆವೈಸಿ ಮಾಡಿಸಿದ ರೈತರ ಖಾತೆಗೆ ₹2,000 ಜಮಾ ಆಗಲಿದೆ.
ಇದನ್ನೂ ಓದಿ: Pradhan Mantri Suraksha Bima Yojana: ಈ ಯೋಜನೆಯಡಿ ಕೇವಲ 20 ರೂ ವಿಮೆಗೆ ಸಿಗುತ್ತೆ ರೂ. 2 ಲಕ್ಷ ವಿಮಾ ಕವರೇಜ್ ?
ಅದೇ ರೀತಿ ನಮೋ ಶೇತ್ಕಾರಿ ಮಹಾ ಸಮ್ಮಾನ್ ನಿಧಿ ಯೋಜನೆಯಡಿ ಅಧಿಕಾರಿಗಳು ಮಹಾರಾಷ್ಟ್ರದ ರೈತರ ಖಾತೆಗೆ ಹೆಚ್ಚುವರಿಯಾಗಿ 2 ಸಾವಿರ ರೂ. ಬಿಡುಗಡೆ ಮಾಡಿದರು. ಪಿಎಂ ಕಿಸಾನ್ ಯೋಜನೆಯನ್ನು ಫೆ. 24, 2019ರಂದು ಪ್ರಾರಂಭಿಸಲಾಗಿತ್ತು.
PM Kisan : ಖಾತೆಗೆ ₹2,000 ಜಮೆ; ನೋಡುವುದು ಹೇಗೆ ?
ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ https://pmkisan.gov.in/ ಲಾಗ್‌ಇನ್ ಆಗಿ ನೀವು ಫಲಾನುಭವಿಯ ಸ್ಟೇಟಸ್ (ಸ್ಥಿತಿ) ಪರಿಶೀಲಿಸಬಹುದು. ಇದಕ್ಕೆ ನಿಮ್ಮ ಆಧಾರ್/ಖಾತೆ ಸಂಖ್ಯೆ ಅತ್ಯಗತ್ಯ. ಇದರಲ್ಲಿ ನೀವು ಪಾವತಿ ಸ್ಥಿತಿ ಸಹ ಪರಿಶೀಲಿಸಲು ಸಾಧ್ಯವಿದೆ.




