PM Kisan : ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ; ನಾಳೆಯೇ ರೈತರ ಖಾತೆಗೆ ₹2,000..!?

PM Kisan : ಕೇಂದ್ರ ಸರ್ಕಾರವು ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana ) 18ನೇ ಕಂತಿಗೆ ಹಣ ಬಿಡುಗಡೆ ಮಾಡುವ ದಿನಾಂಕವನ್ನು ಕೇಂದ್ರವು…

PM Kisan Scheme

PM Kisan : ಕೇಂದ್ರ ಸರ್ಕಾರವು ಅನ್ನದಾತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana ) 18ನೇ ಕಂತಿಗೆ ಹಣ ಬಿಡುಗಡೆ ಮಾಡುವ ದಿನಾಂಕವನ್ನು ಕೇಂದ್ರವು ಪ್ರಕಟಿಸಿದೆ.

ಹೌದು, ಪಿಎಂ ಕಿಸಾನ್‌ ಯೋಜನೆಯ ಮೂಲಕ ಅರ್ಹ ರೈತರಿಗೆ ವರ್ಷಕ್ಕೆ 3 ಕಂತುಗಳಲ್ಲಿ ಸರ್ಕಾರವು 2000 ರೂಪಾಯಿಯಂತೆ ವಾರ್ಷಿಕ ₹6,000 ನೀಡುವುದು ಗೊತ್ತೇ ಇದೆ. ಮುಂಬರುವ 18ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ಎಂದು ರೈತರು ಎದುರು ನೋಡುತ್ತಿದ್ದಾರೆ. ಆದ್ರೆ ಇದೀಗ ಹಣ ಬಿಡುಗಡೆ ದಿನಾಂಕ ಅಂತಿಮವಾಗಿದೆ.

ಇದನ್ನೂ ಓದಿ: 1 ಕೋಟಿ ಯುವಕರಿಗೆ ಮಾಸಿಕ 5,000; ಅರ್ಹತೆ, ಸ್ಟೈಪೆಂಡ್, ಪ್ರಯೋಜನಗಳ ಮಾಹಿತಿ ಇಲ್ಲಿದೆ!

Vijayaprabha Mobile App free

PM Kisan : ನಾಳೆಯೇ ರೈತರ ಖಾತೆಗೆ ₹2,000..!?

ಹೌದು, ಅ.5ರಂದು (ನಾಳೆ) ಮಹಾರಾಷ್ಟ್ರದ ವಾಶಿಮ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಹಣ ಜಮಾಕ್ಕೆ ಚಾಲನೆ ನೀಡಲಿದ್ದು, ರೈತರ ಖಾತೆಗೆ ಹಣ 2000 ರೂ. ಜಮಾ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದ್ದು, ಈ ಪ್ರಯೋಜನವನ್ನು ಪಡೆಯಲು ಅನ್ನದಾತರು ಇಕೆವೈಸಿಗೆ ಒಳಗಾಗಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇ-ಕೆವೈಸಿ ಮಾಡಿದರೆ ಮಾತ್ರ ನಿಮಗೆ ಹಣ ಸಿಗುತ್ತದೆ.

ಇನ್ನು, ದೇಶಾದ್ಯಂತ ಸುಮಾರು 9 ಕೋಟಿ ರೈತರ ಖಾತೆಗಳಿಗೆ 2 ಸಾವಿರ ರೂ. ಹಾಕಲಾಗುತ್ತಿದ್ದು, ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್ (https://pmkisan.gov.in/) ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಕಾರು, ಬೈಕ್ ಇದ್ರೆ ರೇಷನ್​​ ಕಾರ್ಡ್​​ ರದ್ದು; ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಬಿಗ್​ ಶಾಕ್

PM Kisan E-KYC : ಇ-ಕೆವೈಸಿ ಮಾಡುವುದು ಹೇಗೆ?

  • ಮೊದಲು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ https://pmkisan.gov.in/ಗೆ ಲಾಗಿನ್ ಆಗಿ.
  • ನಂತರ e-KYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಆಧಾರ್ ಸಂಖ್ಯೆ ನಮೂದಿಸಿ, ‘ಸರ್ಚ್​’ ಬಟನ್​​ ಒತ್ತಿರಿ.
  • OTP ಸಹಾಯದಿಂದ ಈ ಪ್ರಕ್ರಿಯೆ ಪೂರ್ಣಗೊಳಿಸಿ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.