PAN card: ಪ್ಯಾನ್ ಕಾರ್ಡ್ ಯಾಕೆ ಅಗತ್ಯ? ಅದರ ಮಹತ್ವಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

PAN card: ಪ್ಯಾನ್ ಕಾರ್ಡ್ ಶಾಶ್ವತ ಖಾತೆ ಸಂಖ್ಯೆ 10 ಅಂಕೆಗಳನ್ನು ಹೊಂದಿದ್ದು, ಇದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಇದು ಯುನಿವರ್ಸಲ್ ಗುರುತಿನ ಚೀಟಿ (Universal Identity Card) ರೀತಿ ಕೆಲಸ ಮಾಡುತ್ತದೆ.…

PAN card

PAN card: ಪ್ಯಾನ್ ಕಾರ್ಡ್ ಶಾಶ್ವತ ಖಾತೆ ಸಂಖ್ಯೆ 10 ಅಂಕೆಗಳನ್ನು ಹೊಂದಿದ್ದು, ಇದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಇದು ಯುನಿವರ್ಸಲ್ ಗುರುತಿನ ಚೀಟಿ (Universal Identity Card) ರೀತಿ ಕೆಲಸ ಮಾಡುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ

PAN card:  ಯಾವ ಕೆಲಸಗಳಿಗೆ ಪ್ಯಾನ್ ಕಾರ್ಡ್ ಮುಖ್ಯ ದಾಖಲೆಯಾಗಿದೆ?

ಆದಾಯ ತೆರಿಗೆ, ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿದ್ದು, ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ದಾಖಲೆಯಾಗಿರುತ್ತದೆ.

1. ಬ್ಯಾಂಕು ಖಾತೆ ತೆರೆಯಲು

ಹೊಸ ಬ್ಯಾಂಕ್‌ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್ ಕೊಡುವುದು ಅತ್ಯಗತ್ಯ.

Vijayaprabha Mobile App free

ಸಾರ್ವಜನಿಕ, ಖಾಸಗಿ, ಸಹಕಾರಿ ಅಥವಾ ಇನ್ಯಾವುದೇ ಬ್ಯಾಂಕುಗಳಲ್ಲಿ ಖಾತೆ ತೆರೆಯುವಾಗ ಪ್ಯಾನ್ ಕಾರ್ಡ್‌ನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ತಂದೆ, ಅಜ್ಜನ ಆಸ್ತಿಯಲ್ಲಿ ಈ 5 ಜನರಿಗೆ ಹಕ್ಕು!

2. ಕ್ರೆಡಿಟ್/ಡೆಬಿಟ್ ಕಾರ್ಡ್ ಪಡೆಯಲು

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಒದಗಿಸಬೇಕು. ಈ ಕಾರ್ಡ್ ಒದಗಿಸದಿದ್ದರೆ ಅರ್ಜಿ ತಿರಸ್ಕರಿಸಲ್ಪಡುತ್ತದೆ. ಕ್ರೆಡಿಟ್ ಕಾರ್ಡ್ ತಿರಸ್ಕರಿಸಲ್ಪಡುವುದರಿಂದ ಸಾಲ ಪಡೆಯುವಾಗ ಸಮಸ್ಯೆಯಾಗಬಹುದು.

3. ವಾಹನ ಮಾರಾಟ ಅಥವಾ ಖರೀದಿ

ವಾಹನವನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಪ್ಯಾನ್ ಕಾರ್ಡ್ ಪ್ರತಿ ಒದಗಿಸುವುದು ಕಡ್ಡಾಯವಾಗಿದ್ದು, ಲೋನ್ ಮೂಲಕ ವಾಹನ ಖರೀದಿ ಮಾಡುವುದಾದರೆ ಅದಕ್ಕೆ ಕೂಡಾ ಪ್ಯಾನ್ ಕಾರ್ಡ್ ಅಗತ್ಯವಾಗಿದೆ.

ಇದನ್ನೂ ಓದಿ: ವಾಹನ ಸವಾರರಿಗೆ ಭರ್ಜರಿ ಸಿಹಿಸುದ್ದಿ :ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆ 20 ರೂ. ಇಳಿಕೆ..!

4. ವಿಮೆ ಪಾವತಿ

ವರ್ಷದಲ್ಲಿ ರೂ. 50000ಕ್ಕಿಂತ ಹೆಚ್ಚು ಪ್ರೀಮಿಯಂ ಮೊತ್ತವನ್ನು ಕಂಪನಿಗಳಿಗೆ ಕಟ್ಟುವಾಗ ವಿಮೆ ಪಾಲಿಸಿದಾರರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ವಿವರ ಒದಗಿಸಬೇಕೆಂದು CBDT ಆದೇಶ ನೀಡಿದೆ.

5. ಆಸ್ತಿ ಖರೀದಿ ಅಥವಾ ಮಾರಾಟ

5,00,000 ಮೀರಿದ ಆಸ್ತಿ ವ್ಯವಹಾರ ಕೈಗೊಳ್ಳುವಾಗ ಪ್ಯಾನ್ ಕಾರ್ಡ್ ನಂಬರ್ ನೀಡುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ಇಲ್ಲದಿದ್ದಲ್ಲಿ ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು ಅಸಾಧ್ಯ. ಒಂದು ವೇಳೆ ಜಂಟಿ ಆಸ್ತಿಯಾಗಿದ್ದಲ್ಲಿ ಪ್ರತಿ ವ್ಯಕ್ತಿಯ ಪ್ಯಾನ್ ವಿವರ ಬೇಕಾಗುತ್ತದೆ.

6. ಅಂಚೆ ಕಚೇರಿ ಖಾತೆ ತೆರೆಯಲು

ಅಂಚೆ ಕಚೇರಿಯಲ್ಲಿ 50,000ಕ್ಕಿಂತ ಹೆಚ್ಚಿನ ಮೊತ್ತದ ಸ್ಥಿರ ಠೇವಣಿ ಇಡುವಾಗ ಗ್ರಾಹಕರು ಕಡ್ಡಾಯವಾಗಿ ಪ್ಯಾನ್ ವಿವರವನ್ನು ಅಂಚೆ ಕಚೇರಿಗೆ ಒದಗಿಸಬೇಕಾಗುತ್ತದೆ. ಒ೦ದು ವರ್ಷದ ಅವಧಿಯಲ್ಲಿ ರೂ. 5 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಇಡುವಾಗ ಪ್ಯಾನ್ ಕಾರ್ಡ್ ಅಗತ್ಯ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿರುವ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ನೆಲಸಮ ಮಾಡಬೇಕು: ಸುಪ್ರೀಂ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.