Gruhalakshmi yojana : ಜುಲೈ, ಆಗಸ್ಟ್‌ ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ?

Gruhalakshmi yojana : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಫಲಾನುಭವಿಗಳ ಖಾತೆ ಸೇರುವುದು ಇತ್ತೀಚೆಗೆ ವಿಳಂಬವಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗು ಇದೇ…

Gruhalakshmi yojana

Gruhalakshmi yojana : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಫಲಾನುಭವಿಗಳ ಖಾತೆ ಸೇರುವುದು ಇತ್ತೀಚೆಗೆ ವಿಳಂಬವಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಹೌದು,  ಈ ತಿಂಗಳ ಅಂತ್ಯದಲ್ಲಿ ಹಣ ಬರುತ್ತದೆ ಎಂದು ಫಲಾನುಭವಿಗಳು ಕಾಯುತ್ತಿದ್ದರು. ಆದರೆ ಪ್ರಸ್ತುತ ತಿಂಗಳ ಅಂತ್ಯಕ್ಕೆ ಇನ್ನು ಐದು ದಿನ ಮಾತ್ರ ಬಾಕಿ ಇದ್ದು ಜುಲೈ ಮತ್ತು ಆಗಸ್ಟ್ ತಿಂಗಳ ₹4000 ಹಣ ಇನ್ನೂ ಬಿಡುಗಡೆ ಆಗಿಲ್ಲ. ಸೆಪ್ಟೆಂಬರ್ ತಿಂಗಳು ಸೇರಿ ಮೂರು ತಿಂಗಳ ₹6000 ಹಣ ಫಲಾನುಭವಿಗಳ ಖಾತೆಗೆ ಒಟ್ಟಿಗೆ ಹಾಕುವುದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ಹೇಳಿದ್ದರೂ, ಅದು ಸದ್ಯಕ್ಕೆ ದೂರದ ಮಾತು ಎನ್ನಲಾಗುತ್ತಿದೆ.

ಇದನ್ನೂ ಓದಿ: ನಿಮ್ಮ ಖಾತೆಗೆ ₹2,000.. ದಿನಾಂಕ ಫಿಕ್ಸ್‌!

Vijayaprabha Mobile App free

ಸದ್ಯದ ಮಾಹಿತಿ ಪ್ರಕಾರ ಹಣಕಾಸು ಇಲಾಖೆಯಿಂದ ಹಣ ಇನ್ನೂ ರಿಲೀಸ್‌ ಆಗಿಲ್ಲ ಎನ್ನಲಾಗಿದ್ದು, ಹಣ ಬರುವುದು ಡೌಟ್‌ ಎನ್ನಲಾಗಿದೆ. ಹೀಗಾಗಿ ಹಿಂದಿನ 2 ತಿಂಗಳ ₹4000 ಹಣವನ್ನು ಅಕ್ಟೋಬ‌ರ್ ಮೊದಲ 2 ವಾರಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ನಿರೀಕ್ಷೆ ಇದೆ.

Gruhalakshmi yojana : ಇನ್ಮುಂದೆ ಈ ಮಹಿಳೆಯರಿಗೆ ಸಿಗಲ್ಲ ₹2,000

ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ₹6000 ಹಣ ಫಲಾನುಭವಿಗಳ ಖಾತೆಗೆ ಇನ್ನೂ ಜಮೆಯಾಗದ ಕಾರಣ ಮನೆ ಯಜಮಾನಿಯರು ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಇದರ ಬೆನ್ನಲ್ಲೇ, ಆದಾಯ ತೆರಿಗೆ ಕಟ್ಟುತ್ತಿದ್ದರೂ ಈ ಯೋಜನೆಯ ಲಾಭ ಪಡೆಯುತ್ತಿದ್ದ 1.78 ಲಕ್ಷ ಮಹಿಳೆಯರ ಹಣಕ್ಕೆ ಸರ್ಕಾರ ತಡೆಯೊದ್ದು, ಇದೀಗ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಅರ್ಹರಿಗೆ ಮಾತ್ರ ತಿಂಗಳಿಗೆ ₹2,000 ಸಿಗಲಿದೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಪ್ರಕರಣ: ಹಂತಕನ ಡೆತ್‌ನೋಟ್‌ನಲ್ಲಿ ಹತ್ಯೆಯ ರಹಸ್ಯ ಬಯಲು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.