Ravichandran Ashwin: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ರವಿಚಂದ್ರನ್ ಅಶ್ವಿನ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರು 20 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು 30+ ಸಂದರ್ಭಗಳಲ್ಲಿ 5 ವಿಕೆಟ್ ಪಡೆದ ಮೊದಲ ಕ್ರಿಕೆಟಿಗರಾಗಿ ಹೊಮ್ಮಿದ್ದಾರೆ.
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅವರು ಈ ಸಾಧನೆ ಮಾಡಿರುವುದು ಗಮನಾರ್ಹ. ಅಶ್ವಿನ್ 101 ಪಂದ್ಯಗಳಲ್ಲಿ 14 ಅರ್ಧ ಶತಕ, 6 ಶತಕ, 36 ಬಾರಿ 5W, 8 ಬಾರಿ 10W ಗಳಿಸಿದ್ದಾರೆ.
ಇದನ್ನು ಓದಿ: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್ ; ಕಾರಣವೇನು?
Ravichandran Ashwin: ಅಶ್ವಿನ್ ಸೂಪರ್ ಶತಕ.. ಸಾಲು ಸಾಲು ದಾಖಲೆ
BAN ವಿರುದ್ಧ ಅಶ್ವಿನ್ ಗಳಿಸಿದ ಶತಕ ಹಲವು ದಾಖಲೆ ಸೃಷ್ಟಿಸಿದೆ. ಇದೇ ಮೈದಾನದಲ್ಲಿ 2 ಶತಕ & 5+ ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಶ್ವಿನ್ ಚೆನ್ನೈನಲ್ಲಿ 2 ಶತಕ & 4 ಸಲ 5 ವಿಕೆಟ್ ಪಡೆದಿದ್ದಾರೆ.
ಹೆಡಿಂಗ್ಲಿಯಲ್ಲಿ ಸೋಬರ್ಸ್, ಚೆನ್ನೈನಲ್ಲಿ ಕಪಿಲ್, ಆಕ್ಲೆಂಡ್‌ನಲ್ಲಿ ಕ್ರೇನ್ಸ್, ಹೆಡಿಂಗ್ಲಿಯಲ್ಲಿ ಇಯಾನ್ ಈ ಸಾಧನೆ ಮಾಡಿದ್ದಾರೆ. ಅಶ್ವಿನ್ 8/ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅತಿ ಹೆಚ್ಚು ಶತಕ (4) ಗಳಿಸಿದ 2ನೇ ಆಟಗಾರ ಎಂಬ ಗೌರವಕ್ಕೂ ಪಾತ್ರರಾದರು.
ಇದನ್ನು ಓದಿ: ಮನೆ ಇಲ್ಲದವರಿಗೆ ಸಿಹಿಸುದ್ದಿ: ವಕ್ಫ್ ಬೋರ್ಡ್‍ನಿಂದ ಬಡ ಕುಟುಂಬಗಳಿಗೆ ಮನೆ ಭಾಗ್ಯ- ಜಮೀರ್
Ravichandran Ashwin: ನಿಜವಾದ ಆಲ್‌ರೌಂಡರ್!
ಚೆನ್ನೈನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದಿರುವ ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಆರ್.ಅಶ್ವಿನ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ನಿಜವಾದ ಆಲ್‌ರೌಂಡರ್ ಎಂದು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.
ಬೌಲರ್ ಆಗಿ 500 ವಿಕೆಟ್, ಬ್ಯಾಟ್ಸ್ ಮನ್ ಆಗಿ ಹಲವು ಶತಕ, ಯೂಟ್ಯೂಬರ್, ಕ್ರಿಕೆಟ್ ವಿಶ್ಲೇಷಕ, ಚೆಸ್ ಆಟಗಾರ, ಟ್ವಿಟರ್ ಟ್ರೋಲರ್, ನಾನ್ ಸ್ಟ್ರೈಕರ್ ರನ್ ಔಟ್ ಸ್ಪೆಷಲಿಸ್ಟ್ ಸಹ ಆಗಿದ್ದಾರೆ.