ಮೋದಿ ಸರ್ಕಾರ ಐದು ವರ್ಷ ಪೂರೈಸೋದಿಲ್ಲ; ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ವಿಜೇಯೇಂದ್ರ

B Y Vijayendra: ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಪೂರೈಸೋದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಯೇಂದ್ರ (B Y…

Siddaramaiah and B Y Vijayendra

B Y Vijayendra: ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಪೂರೈಸೋದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಯೇಂದ್ರ (B Y Vijayendra) ತಿರುಗೇಟು ನೀಡಿದ್ದಾರೆ

ಹೌದು, ಈ ಕುರಿತು ಟ್ವೀಟ್ ಮಾಡಿರುವ ವಿಜೇಯೇಂದ್ರ, ಸಿದ್ದರಾಮಯ್ಯ ಅವರೇ ಮೋದಿಜೀ ಅವರ ಸರ್ಕಾರದ ಸುಭದ್ರತೆ ಕುರಿತ ನಿಮ್ಮ ಗ್ರಹಿಕೆ ಹಾಗೂ ವ್ಯಾಖ್ಯಾನ “ನವಿಲು ಕುಣಿಯಿತೆಂದು ಕೆಂಭೂತ ಪುಕ್ಕ ತರೆದುಕೊಂಡಿದಂತಾಗಿದೆ”.

ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ: ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?, ಮಾಹಿತಿ ಇಲ್ಲಿದೆ

Vijayaprabha Mobile App free

ಅಸ್ಥಿರಗೊಳ್ಳುತ್ತಿರುವ ನಿಮ್ಮ ಸ್ಥಾನದ ಸ್ಥಿತಿಯ ಲೆಕ್ಕಾಚಾರದಲ್ಲಿ ಮುಳುಗಿರುವ ನಿಮ್ಮ ಪಕ್ಷದ ಹಿತೈಷಿಗಳು “BioData” ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ವರಿಷ್ಠ ಮಂಡಳಿಯ ಕದ ತಟ್ಟುತ್ತಿರುವುದು ನಿತ್ಯ ಚರ್ಚೆಯಲ್ಲಿರುವ ಸುದ್ದಿಯಾಗಿದೆ, ಕೆಲವರು ಈ ಕುರಿತು ಮಾಧ್ಯಮಗಳ ಮೂಲಕ ಹಕ್ಕು ಮಂಡಿಸಿದ್ದಾರೆ.

ಇದರಿಂದ ವಿಚಲಿತಗೊಂಡಿರುವ ನೀವು ಮೇಲಿಂದ ಮೇಲೆ ನನ್ನ ಸ್ಥಾನ ಅಬಾಧಿತ, ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಲೇ ಇದ್ದೀರಿ, ಈ ಹೇಳಿಕೆ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಿರುವ ಅಸ್ಥಿರ ಸ್ಥಿತಿಯನ್ನು ಬಿಂಬಿಸುತ್ತದೆ. ಮೋದಿ ಜೀ ಸರ್ಕಾರದ ಅವಧಿಯ ಬಗ್ಗೆ ಚಿಂತಿಸುವ ಮೊದಲು ನಿಮ್ಮ ಸ್ಥಾನ ಹಾಗೂ ನಿಮ್ಮ ಸರ್ಕಾರದ ಭದ್ರತೆಯ ಬಗ್ಗೆ ಯೋಚಿಸಿ.

ಇದನ್ನೂ ಓದಿ: ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಚಂದನ್‌ ಪತ್ನಿ ಕವಿತಾ ; ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಚಂದನ್

ಮಾನ್ಯ ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ಅವಧಿಯೂ ಪೂರೈಸುತ್ತದೆ, ಮತ್ತೊಂದು ಅವಧಿಗೂ ಚಾರಿತ್ರಿಕ ಗೆಲುವು ಸಾಧಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಂ1 ಸ್ಥಾನಕ್ಕೆ ತಂದು ನಿಲ್ಲಿಸಲಿದೆ. ಇದು ಶತಕೋಟಿ ಭಾರತೀಯರ ಆಶೋತ್ತರ ಹಾಗೂ ಸೂರ್ಯನ ಪ್ರಖರ ಬೆಳಕಿನಷ್ಟೇ ಸುಸ್ಪಷ್ಟ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.