ಗಣಪತಿಗೆ ಗರಿಕೆ ಯಾಕೆ ಇಷ್ಟ? ಗಣೇಶನಿಗೆ ಗರಿಕೆ ಹುಲ್ಲು ಯಾಕೆ ಅರ್ಪಿಸುತ್ತಾರೆ ಗೊತ್ತಾ?

Ganesha Festival: ಗಣಪತಿ ಪೂಜೆಯಲ್ಲಿ (Ganapati Puja) ಗರಿಕೆಗೆ (Garike grass) ವಿಶೇಷ ಸ್ಥಾನವಿದ್ದು ಅಗತ್ಯವೂ ಆಗಿದೆ. ಈ ಗರಿಕೆ ಗಣೇಶನಿಗೆ ಯಾಕೆ ಇಷ್ಟ ಎಂಬ ವಿಚಾರ ಗೊತ್ತೆ? ಅದಕ್ಕೂ ಒಂದು ಕಾರಣವಿದೆ. ಹೌದು,…

Ganesha festival vijayaprabhanews

Ganesha Festival: ಗಣಪತಿ ಪೂಜೆಯಲ್ಲಿ (Ganapati Puja) ಗರಿಕೆಗೆ (Garike grass) ವಿಶೇಷ ಸ್ಥಾನವಿದ್ದು ಅಗತ್ಯವೂ ಆಗಿದೆ. ಈ ಗರಿಕೆ ಗಣೇಶನಿಗೆ ಯಾಕೆ ಇಷ್ಟ ಎಂಬ ವಿಚಾರ ಗೊತ್ತೆ? ಅದಕ್ಕೂ ಒಂದು ಕಾರಣವಿದೆ.

ಹೌದು, ಗಣೇಶನಲ್ಲಿ ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತ ಹೆಚ್ಚಾಗಿ ಇರುವುದರಿಂದ ಗಣಪತಿಗೆ ಗರಿಕೆಯನ್ನು ಅರ್ಪಿಸುತ್ತಾರೆ. ಇನ್ನೂ ಪುರಾಣದ ಪ್ರಕಾರ ಒಮ್ಮೆ ಅನಲಾಸುರನೆಂಬ ರಾಕ್ಷಸನಿಗೂ ಗಣೇಶನಿಗೂ ಯುದ್ಧ ನಡೆಯುತ್ತದೆ. ಅನಲಾಸುರನು ಬೆಂಕಿಯುಂಡೆಗಳನ್ನು ಗಣೇಶನ ಮೇಲೆ ಎಸೆಯುತ್ತಾನೆ. ಆಗ ಕೋಪದಿಂದ ಗಣೇಶನು ಅಸುರನ ಸಂಹಾರಕ್ಕಾಗಿ ಅನಲಾಸುರನನ್ನು ನುಂಗಿ ಬಿಡುತ್ತಾನೆ.

ಇದರಿಂದಾಗಿ ಗಣೇಶನ ದೇಹದಲ್ಲಿ ಉಷ್ಣಾಂಶವು ಅಧಿಕವಾಗಿ ಹೊಟ್ಟೆ ಊದಿಕೊಂಡು ಬಿಡುತ್ತದೆ. ದೇಹದ ಉಷ್ಣಾಂಶದಿಂದ ಗಣೇಶನು ಕಷ್ಟ ಪಡುತ್ತಿದ್ದನು. ಆಗ ಋಷಿಮುನಿಗಳು 21 ಗರಿಕೆಯನ್ನು ಗಣೇಶನ ತಲೆಯ ಮೇಲಿಡುತ್ತಾರೆ. ಆಗ ಗಣೇಶನು ಗುಣಮುಖನಾಗುತ್ತಾನೆ. ಅಂದಿನಿಂದ ಗಣೇಶನಿಗೆ ಗರಿಕೆ ಹುಲ್ಲನ್ನು ಅರ್ಪಿಸುತ್ತಾರೆ.

Vijayaprabha Mobile App free

https://vijayaprabha.com/mumbai-2/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.