ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದಲ್ಲಿ ಸಂಭ್ರಮದ ಗಣೇಶೋತ್ಸವ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಲಿವುಡ್ ತಾರೆಯರು, ಕ್ರಿಕೆಟಿಗರು, ಹಲವು ಕ್ಷೇತ್ರಗಳ ಖ್ಯಾತನಾಮರು ಅವರ ನಿವಾಸದಲ್ಲಿ ಸಂಭ್ರಮಿಸಿದರು.
ಇನ್ನು ಈ ಹಬ್ಬದಲ್ಲಿ ವಿಶೇಷವಾಗಿ ಗಮನ ಸೆಳೆಯುವ ಗಣೇಶೋತ್ಸವ ಅಂದರೆ ಅದು ಮುಂಬೈನ ಅತೀ ದೊಡ್ಡ ಗಣೇಶನ ಮೂರ್ತಿಯಾಗಿದೆ.
ಮುಂಬೈನ ಲಾಲ್ಚೌಚಾ ಗಣೇಶನ ಮೂರ್ತಿ ವರ್ಷಗಳಿಂದಲೂ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಈ ಗಣೇಶನ ನೋಡಲೆಂದು ಬಾಲಿವುಡ್‌ನ ಸೆಲೆಬ್ರಿಟಿಗಳು ಸಹ ಬರುತ್ತಾರೆ. ಆದ್ರೆ ಈಗ ಉದ್ಯಮಿ ಅನಂತ್ ಅಂಬಾನಿ 20 ಕೆ.ಜಿ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂದು ಈ ಗಣೇಶನ ಮೂರ್ತಿಯನ್ನು ಅನಾವರಣಗೊಳಿಸಲಾಗಿದ್ದು, 20 ಕೆ.ಜಿ ಮೌಲ್ಯದ ಚಿನ್ನದ ಕಿರೀಟ ಎಲ್ಲರ ಗಮನ ಸೆಳೆದಿದೆ.
ಈ ವರ್ಷದ ಲಾಲ್‌ಬಾಗ್ಚಾ ರಾಜಾ ಗಣೇಶನಿಗೆ ಅನಂತ್ ಅಂಬಾನಿ 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನದ ಕಿರೀಟ ಉಡುಗೊರೆಯಾಗಿ ನೀಡಿದ್ದಾರೆ. ಅನಂತ್ ಅಂಬಾನಿ ಅವರು ಕಳೆದ 15 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳ ನಡೆಸಿಕೊಡುವ ಮೂಲಕ ಲಾಲ್ಬೌಚಾ ರಾಜಾ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಗಣೇಶೋತ್ಸವದ ಸಂದರ್ಭದಲ್ಲಿ ಲಾಲ್‌ಬೌಚಾ ರಾಜಾ ಅವರ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. ಲಾಲ್‌ಬೌಚಾ ರಾಜಾ ಅಥವಾ ‘ಕಿಂಗ್ ಆಫ್ ಲಾಲ್‌ಬಾಗ್’ ಮುಂಬೈ ಮಾತ್ರವಲ್ಲ ಇಡೀ ಭಾರತದಲ್ಲಿ ಹೆಸರು ಮಾಡಿರುವ ಗಣಪತಿಯಾಗಿದೆ. ಈ ಗಣೇಶನ ದರ್ಶನಕ್ಕೆಂದು ಲಕ್ಷ ಲಕ್ಷ ಮಂದಿ ಆಗಮಿಸುತ್ತಾರೆ.