ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಿಚಿತ್ರ ಎಂದರೆ ಅಂತಹ ಸುದ್ದಿಗಳೇ ಹೆಚ್ಚು ಜನರಿಗೆ ತಲುತ್ತಿವೆ. ಮಾರ್ಕಪ್ ಮಾಡಿದ ವಿಡಿಯೋ, ಫೋಟೊ ಹಾಗೂ ಸುದ್ದ್ದಿಗಳು ಕ್ಷಣ ಮಾತ್ರದಲ್ಲಿ ಸಾವಿರಾರು ಜನಕ್ಕೆ ತಲುಪಿತ್ತಿವೆ. ಆದರೆ ಅಸಲಿ ಸತ್ಯ ಮಾತ್ರ ಬೇರೆಯದ್ದೇ ಇರುತ್ತದೆ.
ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹಿರಿಯ ಪತ್ರಕರ್ತ ರವೀಶ್ ಕುಮಾರ್ ಟಿವಿ ಲೋಗೋ ಹಿಡಿದು ರಸ್ತೆಯಲ್ಲಿ ಹೊರಾಡಿದ್ದಾರೆ ಎಂದು ಆರೋಪಿಸಿ ಮಾರ್ಕಪ್ ಮಾಡಿದ ವಿಡಿಯೋ ಒಂದನ್ನು ಸಾಮಾಜಿ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಸಾವಿರಾರು ಜನ ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶದ ಜಬಲ್‍ಪುರ ಕ್ಷೇತ್ರದ ಬಿಜೆಪಿ ಶಾಸಕ ಇಂದು ತಿವಾರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
इस मसीहा पत्रकार को पहचानते हैं? ये दुनिया को पत्रकारिता पर ज्ञान देने की खान हैं। इन्हें आजकल की पत्रकारिता इन्हें मज़ाक़ लगता है। क़ैदें हैं रविश कुमार। @SushantBSinha @anuraagmuskaan @KapilMishra_IND @TajinderBagga @Rajput_Ramesh @DChaurasia2312 @SureshNakhua @beingarun28 pic.twitter.com/zm260NbCmN
— Indu Tiwari (@indutiwarijbp) September 29, 2020
ಸುಶಾಂತ್ ಸಿನ್ಹಾ ಎಂಬ ಪತ್ರಕರ್ತ ಕೂಡ ರವೀಶ್ ಕುಮಾರ್ ಅವರ ಹೆಸರು ಉಲ್ಲೇಖಿಸದೇ ಈ ಮಾರ್ಕಪ್ ವಿಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಸಾವಿರಾರು ಜನ ಪ್ರತಿಕ್ರಿಯೆ ನೀಡಿದ್ದು, ನೂರಾರು ಜನ ಶೇರ್ ಕೂಡ ಮಾಡಿದ್ದಾರೆ.
इस मसीहा पत्रकार को पहचानते हैं?
(Hint: ये दुनिया को पत्रकारिता पर ज्ञान देने की खान हैं) pic.twitter.com/sxXHhKPbw1— Sushant Sinha (@SushantBSinha) September 29, 2020
ವಿಡಿಯೋನಲ್ಲಿರುವ ಅಸಲಿ ಸತ್ಯವೇನು ?
ಈ ಕುರಿತು ಆಲ್ಟ್‍ನ್ಯೂಸ್.ಕಾಂ ಪ್ಯಾಕ್ಟ್ ಚೆಕ್ ನಡೆಸಿದ್ದು, ಇದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ವಿಡಿಯೋ ಅಲ್ಲ ಎಂದು ಸಾಬೀತು ಪಡಿಸಿದೆ. ವಿಡಿಯೋದಲ್ಲಿರುವುದು ಜಮ್ಮು ಮತ್ತು ಕಾಶ್ಮೀರ ಪತ್ರಕರ್ತ ಫಯಾಜ್ ಬುಖಾರಿ ಎಂಬುವವರು. ಎನ್‍ಡಿಟಿವಿ ಪ್ರಸಾರ ಮಾಡಿದ್ದ ಬ್ಲೂಪರ್ಸ್ ವೀಡಿಯೊದಲ್ಲಿ ಈ ತುಣುಕು ಇದೆ.ಭಯೋತ್ಪಾದಕ ದಾಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ವರದಿಗಾರ ಪ್ರಯತ್ನಿಸುತ್ತಿರುವ ದೃಶ್ಯ.ವರದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತರು ಒಬ್ಬೊರಿಗೊಬ್ಬರು ಹಾಸ್ಯ ಮಾಡಿತ್ತಿರುವಾಗ ತೆಗೆದಿರುವ ಬ್ಲೂಪರ್ಸ್ ವೀಡಿಯೊ ತುಣು ಎಂದು ಸಾಬೀತಾಗಿದೆ. ಆದರೆ ಫೇಕ್ ಅಡಿಬರಹದ ಮೂಲಕ ಪತ್ರಕರ್ತ ರವೀಶ್ ಕುಮಾರ್ ರಸ್ತೆಯಲ್ಲಿ ಹೊರಳಾಡಿದ್ದಾರೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲ ಹಂಚಿಕೊಳ್ಳಲಾಗುತ್ತಿದೆ.