ಲಖನೌ ( ಉತ್ತರ ಪ್ರದೇಶ ): ಹತ್ರಾಸ್ ಗ್ರಾಮದಲ್ಲಿ 19 ವರ್ಷದ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಯೋಗಿ ಆದಿತ್ಯನಾಥ್ ಅವರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ಮೇಲ್ವರ್ಗದ ಕಿರಾತರು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆಸಿದ್ದು, ಇಡೀ ಮನುಕುಲವನ್ನು ತಲೆತಗ್ಗಿಸುವಂತೆ ಮಾಡಿದರೆ. ಆದರೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಪ್ರಕರಣದ ಕುರಿತು ನಡೆದುಕೊಂಡ ರೀತಿ ಕುರಿತು ದೇಶಾದ್ಯಂತ ಟೀಕೆ ವ್ಯಕ್ತವಾಗಿವೆ.
ಈ ನಡುವೆ ಉತ್ತರ ಪ್ರದೇಶ ಸರ್ಕಾರ ಮಾಧ್ಯಮಗಳಿಗೆ ಹತ್ರಾಸ್ ಗ್ರಾಮ ಪ್ರವೇಶ ಕುರಿತು ನಿಷೇಧ ಹೇರಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಕಿಡಿಕಾರಿದೆ. ಯೋಗಿ ಸರ್ಕಾರದ ನಡೆ ಕುರಿತು ಮಾಧ್ಯಮಗಳು ಇಡೀ ದೇಶಕೆ ಸತ್ಯ ಸಂಗತಿ ತಿಳಿಸುವ ಕೆಲಸ ಮಾಡುತ್ತಿವೆ. ಆದರೆ ಇಂದು ಯೋಗಿಜೀ ಹಳ್ಳಿಯೊಳಗೆ ಮಾಧ್ಯಮಗಳ ಪ್ರವೇಶವನ್ನು ನಿಷೇಧಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಯೋಗಿಜೀ ಅವರ ಜಂಗಲ್ ರಾಜ್ ಬಗ್ಗೆ ಮಾಧ್ಯಮಗಳು ಬಹಿರಂಗಪಡಿಸುತ್ತವೆ. ಆದ್ದರಿಂದ ಈಗ ಮಾಧ್ಯಮವನ್ನು ನಿಷೇಧಿಸಲಾಗಿದೆ,” ಉತ್ತರ ಪ್ರದೇಶ ಕಾಂಗ್ರೆಸ್ ಟ್ವೀಟ್ ಮಾಡಿದೆ.