ಇಂದು ಮದುವೆ, ನಾಳೆ ಪ್ರಸ್ತ, ನಾಳಿದ್ದು ಡಿವೋರ್ಸ್ ಎಂಬ ಕಾಲವಿದು. ದೀರ್ಘ ಕಾಲದ ಸತಿ-ಪತಿಯರಾಗಿ ಬದುಕುವ ಕಾಲವೀಗ ಅತಿ ವಿರಳ. ಏಕೆಂದರೆ ಆಧುನಿಕ ಕಾಲಘಟ್ಟದಲ್ಲಿರುವ ಜನರಿಗೆ ಡಿವೋರ್ಸ್ ಎಂಬ ಪದವು ತಲೆಗೆ ಹೊಕ್ಕಿ ಹೋಗಿದೆ. ಜಸ್ಟ್ ಸಣ್ಣ ಸಮಸ್ಯೆಯಾದರು ಡಿವೋರ್ಸ್ ಮೊರೆ ಹೋಗುತ್ತಾರೆ. ಅದರೆ ಇಲ್ಲೊಂದು ಸ್ಟೋರಿ ಮಾತ್ರ ವಿಚಿತ್ರವಾಗಿದೆ.
ದುಬೈ ರಾಜಕುಮಾರಿ ತನ್ನ ಗಂಡನಿಗೆ ಇನ್ಸ್ಟಾಗ್ರಾಂನಲ್ಲೇ ತಲಾಖ್ ನೀಡಿದ್ದಾಳೆ. ಅಚ್ಚರಿಯ ಸಂಗತಿ ಎಂದರೆ ಸಾಮಾಜಿಕ ಜಾಲತಾಣದಲ್ಲೇ ತನ್ನ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾಳೆ.
ಅಚ್ಚರಿಯಾದ್ರೂ ಇದು ನಿಜ ಘಟನೆ. ದುಬೈ ರಾಜಕುಮಾರಿ ಶೈಖಾ ಮಹ್ರಾ ತನ್ನ ಗಂಡ ಶೇಖ್ ಮನ ಅಲ್ ಮಕ್ತೌಮ್ನಿಗೆ ತ್ರಿವಳಿ ತಲಾಖ್ ಹೇಳಿದ್ದಾಳೆ. ಗಂಡನ ದಾಂಪತ್ಯ ದ್ರೋಹವೇ ವಿಚ್ಛೇದನ ನೀಡಲು ಕಾರಣ ಎಂದು ಬರೆದುಕೊಂಡಿದ್ದಾಳೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ದುಬೈ ರಾಜಕುಮಾರಿ, ‘‘ಆತ್ಮೀಯ ಪತಿ, ನೀವು ಇತರರೊಂದಿಗೆ ಸಂಬಂಧ ಹೊಂದಿರುವುದರಿಂದ ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ. ನಿಮ್ಮ ಮಾಜಿ ಹೆಂಡತಿ’’ ಎಂದು ಬರೆದುಕೊಂಡಿದ್ದಾರೆ.
ಶೈಖಾ ಮಹ್ರಾ ದುಬೈನ ಆಡಳಿತಗಾರ್ತಿ. ಹಿಸ್ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ. ಇವರು ಯುನೈಟೆಡ್ ಅರಬ್ ಎಮಿರೇಟ್ಸ್ನ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿಯೂ ಆಗಿದ್ದಾರೆ.
ಶೈಖಾ ಮಹ್ರಾ 2023ರಲ್ಲಿ ವಿವಾಹವಾದರು. ಒಂದು ವರ್ಷದ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಮಗು ಹುಟ್ಟಿದ 2 ತಿಂಗಳ ಬಳಿಕ ಗಂಡನಿಗೆ ತಲಾಕ್ ನೀಡಿದ್ದಾರೆ.