heavy rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು,ಈ ನಡುವೆ ಅನಾಹುತಗಳೂ ಹೆಚ್ಚಾಗುತ್ತಿದೆ. ಇಂದು ಸಹ ರಾಜ್ಯದ ಬಹುತೇಕ ಕಡೆ ವರುಣ ಅಬ್ಬರಿಸಲಿದ್ದಾನೆ. ನಾಳೆ ಬೀದರ್ ಸೇರಿ ಕೆಲ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, 100 ರಿಂದ 150 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು, ರಾಯಚೂರು, ವಿಜಯನಗರ, ಕೊಪ್ಪಳ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮೈಸೂರು ಸೇರಿ ಬಹುತೇಕ ಕಡೆ ಮಳೆ (heavy rain) ಹೆಚ್ಚಾಗಲಿದೆ. ಅಂದಹಾಗೆ ಮಳೆ ಸಂಬಂಧಿ ಅವಘಡಗಳಿಂದ ನಿನ್ನೆ ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ.
ಇದನ್ನು ಓದಿ: ಇಪಿಎಫ್ ಖಾತೆ ಹೊಂದಿದ ಉದ್ಯೋಗಿಗಳಿಗೆ ಭರ್ಜರಿ ಬಡ್ಡಿ ಘೋಷಿಸಿದ ಸರ್ಕಾರ; ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?
heavy rain: ರಾಜ್ಯದಲ್ಲಿಂದು ಭಾರೀ ಮಳೆ ಸಂಭವ: ಹಲವು ಕಡೆ ರಜೆ ಘೋಷಣೆ..!
ರಾಜ್ಯದಲ್ಲಿ ಭಾರೀ ಮಳೆ (heavy rain) ಯಾಗುತ್ತಿರುವ ಹಿನ್ನೆಲೆ ಹಲವು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಇಂದೂ ಸಹ ರಜೆ ಘೋಷಿಸಲಾಗಿದ್ದು, ಬೀದರ್ನಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ ಶಾಲಾ-ಕಾಲೇಜು, ಅಂಗನವಾಡಿ ಶಾಲೆಗಳಿಗೂ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಇದನ್ನು ಓದಿ: 14ನೇ ಕಂತು ಬಿಡುಗಡೆಗೆ ದಿನಾಂಕ ನಿಗದಿ; ಈ ದಾಖಲೆ ಇದ್ರೆ ಮಾತ್ರ ನಿಮ್ಮ ಖಾತೆಗೆ ಹಣ; ಪಟ್ಟಿಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ
ಇದಲ್ಲದೆ ಚಿತ್ರದುರ್ಗ, ಧಾರವಾಡ, ವಿಜಯನಗರ, ಉಡುಪಿ, ಬಳ್ಳಾರಿ, ರಾಯಚೂರು, ಬೆಳಗಾವಿ, ದಾವಣಗೆರೆ ಸೇರಿ ಚಿಕ್ಕಮಗಳೂರಿನ 5 ತಾಲೂಕು, ದಕ್ಷಿಣ ಕನ್ನಡದಲ್ಲಿ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದರ ಜೊತೆ ಪರಿಸ್ಥಿತಿ ನೋಡಿಕೊಂಡು ಕೆಲ ಜಿಲ್ಲೆಗಳು ಹಾಗೂ ತಾಲೂಕಿನಲ್ಲಿ ರಜೆ ಘೋಷಿಸಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.
heavy rain: ನಿರಂತರ ಮಳೆ ಈ ಜಿಲ್ಲೆಯಲ್ಲೂ ಶಾಲಾ-ಕಾಲೇಜಿಗೆ ರಜೆ ಘೋಷಣೆ!
ಕೊಪ್ಪಳ ಜಿಲ್ಲೆಯಲ್ಲಿ ನಿರಂತರ ಮಳೆ (heavy rain) ಸುರಿಯುತಿದ್ದು, ಇಂದು (ಗುರುವಾರ) ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ಆದೇಶಿಸಿದ್ದಾರೆ. ಹವಾಮಾನ ಇಲಾಖೆ ವರದಿ ಅನುಸಾರ ಇನ್ನು ಮೂರ್ನಾಲ್ಕು ದಿನ ನಿರಂತರ ಮಳೆ ಸಾಧ್ಯತೆಯಿದ್ದು, ಮುಂಜಾಗ್ರತ ಕ್ರಮವಾಗಿ ಹಾಗೂ ಮಕ್ಕಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಇಂದು ಜಿಲ್ಲಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಇದನ್ನು ಓದಿ: ಕಾರ್ಮಿಕ ಇಲಾಖೆ ಪಿಂಚಣಿ ಪಡೆಯುತ್ತಿದ್ದರೆ 3,000 ಪಿಂಚಣಿ, 5 ಲಕ್ಷದವರೆಗೆ ಪರಿಹಾರ ಸೌಲಭ್ಯ; ಇವರಿಗೆ ಕೂಡ 1000 ರೂ ಪಿಂಚಣಿ!
heavy rain: ಮುಂಬೈನಲ್ಲಿ ಭಾರೀ ಮಳೆ: ಶಾಲಾ-ಕಾಲೇಜಿಗೆ ರಜೆ
ಇನ್ನು, ಭಾರೀ ಮಳೆ (heavy rain) ಯಿಂದಾಗಿ ಮುಂಬೈ ನಗರ ತತ್ತರಿಸಿದ್ದು, ಗುರುವಾರ (ಜುಲೈ 27) ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಹಿನ್ನೆಲೆ ಬಿಎಂಸಿ (ಮಹಾನಗರ ಪಾಲಿಕೆ) ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈ ಮತ್ತು ಥಾಣೆ ನಗರಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದೆ.
ಇದನ್ನು ಓದಿ: ಆಧಾರ್-ರೇಷನ್ ಕಾರ್ಡ್ ಲಿಂಕ್ ಲಾಸ್ಟ್ ಡೇಟ್; ಈ ವೆಬ್ಸೈಟ್ನಿಂದ ರೇಷನ್ಕಾರ್ಡ್ಗೆ ಆಧಾರ್ ಲಿಂಕ್ ಸುಲಭವಾಗಿ ಮಾಡಿ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |