Gruha Lakshmi: ಗೃಹಲಕ್ಷ್ಮೀ ಯೋಜನೆ ಜಾರಿ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಜುಲೈ 19ರಂದು ಯೋಜನೆ ಜಾರಿ ಮಾಡಲಾಗುವುದು. ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ ಎಂದು ಘೋಷಿಸಿದರು. ಯೋಜನೆಗೆ ಚಾಲನೆ ನೀಡಲು ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಅಹ್ವಾನ ನೀಡುತ್ತೇವೆ. ಈ ಸಂಬಂಧ ನಾಯಕರಿಗೆ ಪತ್ರ ಬರೆಯಲಾಗಿದ್ದು, ಇಂದು ನಾಯಕರ ಆಗಮನದ ಕುರಿತು ಖಚಿತವಾಗಲಿದೆ ಎಂದರು.
ಇದನ್ನು ಓದಿ: ಕೇಂದ್ರದಿಂದ ಗಂಡ-ಹೆಂಡತಿಗೆ ವಾರ್ಷಿಕ ರೂ.72 ಸಾವಿರ; ತಿಂಗಳಿಗೆ ರೂ. 200 ಕಟ್ಟಿದರೆ ಸಾಕು..!
Gruha Lakshmi: ಗೃಹಲಕ್ಷ್ಮೀ ಯೋಜನೆಗೆ ಯಾರು ಅರ್ಹರು?
- ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
- ಸಚಿವರ ಮಾಹಿತಿ ಪ್ರಕಾರ, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮನೆಯ ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ಟಿ ಪಾವತಿದಾರರಾಗಿರಬಾರದು.
- ಅರ್ಜಿ ಸಲ್ಲಿಸುವ ಮಹಿಳೆಯ ಬ್ಯಾಂಕ್ ಪಾಸ್ ಬುಕ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
- ಬೆಂಗಳೂರು ಒನ್, ಗ್ರಾಮ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಹಣ ಮಂಜೂರಾತಿ ಸಂದೇಶ ರವಾನೆ ಮಾಡಲಾಗುತ್ತದೆ.
ಇದನ್ನು ಓದಿ: ಬಿಪಿಎಲ್ ಕಾರ್ಡ್ ಇದ್ರೂ ಇವರಿಗೆ ಅಕ್ಕಿ ಹಣ ಸಿಗಲ್ಲ; ಅನ್ನಭಾಗ್ಯ ಹಣ ಪಡೆಯಲು ಹೀಗೆ ಮಾಡಲೇಬೇಕು…!
Gruha Lakshmi: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಕಾಲ ಮಿತಿಯಿಲ್ಲ
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 17 ಅಥವಾ 19ರಂದು ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೋಂದಣಿ ಸ್ಥಳದ ವಿವರ ಎಸ್ಎಂಎಸ್ ಮೂಲಕ ರವಾನೆ ಮಾಡಲಾಗುವುದು. ಫಲಾನುಭವಿಯು ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ 1902 ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
Gruha Lakshmi: ಗೃಹ ಲಕ್ಷ್ಮೀ ಅರ್ಜಿಗೆ ರೆಡಿ ಮಾಡಿ, ತಗೋಳಕೆ ನಿಮ್ಮ ಮನೆ ಬಾಗಲಿಗೆ ಬರ್ತಾರೆ ಇವ್ರು
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಕೆ ಸುಲಭವಾಗಿಸಲು ಪ್ರಜಾಪ್ರತಿನಿಧಿಗಳ ನೇಮಕದ ಬಗ್ಗೆ ಈಗಾಗಲೇ ತಿಳಿಸಿತ್ತು. ಇದೀಗ ಪ್ರಜಾ ಪ್ರತಿನಿಧಿಗಳು, ಯೋಜನೆಗೆ ಅರ್ಜಿಗೆ ತಂತ್ರಜ್ಞಾನ ಅಡೆತಡೆ ಎದುರಿಸುತ್ತಿರುವವರಿಗೆ ಸಹಾಯ ಮಾಡುತ್ತಾರೆ ಎಂದು ಸರ್ಕಾರ ಆದೇಶಿಸಿದೆ. ಇನ್ನು ಪ್ರಜಾ ಪ್ರತಿನಿಧಿಗಳು ಫನುಭವಿಗಳ ಮನೆಗೆ ಭೇಟಿ ನೀಡಿ,ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ. ಇನ್ನು ಇದಕ್ಕಾಗಿ ಅವ್ರಿಗೆ ಯಾವುದೇ ಶುಲ್ಕ ನೀಡಬೇಕಿಲ್ಲ.
ಇದನ್ನು ಓದಿ: ಜುಲೈ 10 ರಿಂದ ನಿಮ್ಮ ಖಾತೆಗೆ ಹಣ; ಈ ಯೋಜನೆಯಡಿ 170 ರೂ., 340 ರೂ., 850 ರೂ. ಹೀಗೆ ಸಿಗುತ್ತೇ..ಅಕ್ಕಿ ಹಣ..
Gruha Lakshmi: ಪೂರ್ಣ ಮಾಹಿತಿಗೆ ಈ ನಂಬರ್ಗೆ ಕರೆ ಮಾಡಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಮಾತನಾಡಿ ಇನ್ನೂ ಆಗಸ್ಟ್ 19 ಕ್ಕೆ 2000 ರೂ. ನಗದು ಹಣ ಮನೆ ಯಜಮಾನಿ ಖಾತೆಗೆ ನೇರವಾಗಿ ಜಮೆ ಆಗುತ್ತದೆ ಎಂದು ತಿಳಿಸಿದ್ರು. ಕರ್ನಾಟಕ್ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು,ಯೋಜನೆ ಬಗ್ಗೆ ಮಾಹಿತಿ/ ಗೊಂದಲಗಳಿದ್ದಲ್ಲಿ 1902/8147500500 ಗೆ ಕರೆ ಮಾಡಿ.
ಇದನ್ನು ಓದಿ: ಇಂದು ಭಾರೀ ಮಳೆ; ಈ ಜಿಲ್ಲೆಗಳಲ್ಲಿ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |