ಒಬ್ಬ ವ್ಯಕ್ತಿಯು ಮೃತಪಟ್ಟು ಮರಣ ಪ್ರಮಾಣ ಪತ್ರ ವಿತರಣೆಯಾದರೆ ಆತನ ಆಧಾರ್ ಕಾರ್ಡ್ ಕೂಡ ನಿಷ್ಕ್ರೀಯವಾಗುವ ವ್ಯವಸ್ಥೆ ಶೀಘ್ರವೇ ಬರಲಿದೆ. ಈ ಕ್ರಮವನ್ನು ಅನುಷ್ಠಾನಕ್ಕೆ ತರಲು ಯುಐಡಿಎಐ ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್ ಕ್ರಮ ಕೈಗೊಳ್ಳುತ್ತಿದೆ.
ಇದನ್ನು ಓದಿ: ಮಾರ್ಚ್ 31 ಡೆಡ್ ಲೈನ್: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಹೌದು, ಒಬ್ಬ ವ್ಯಕ್ತಿಯು ಮೃತಪಟ್ಟರೆ, ಅವರ ಮರಣ ಪ್ರಮಾಣ ಪತ್ರ ಪಡೆಯಲು ಮೃತ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಕುಟುಂಬಸ್ಥರು ನೀಡಬೇಕು. ಮರಣ ಪತ್ರ ನೀಡಿದ ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ಆಧಾರ್‌ನ್ನು ನಿಷ್ಕ್ರೀಯಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ವಿಚ್ಛೆದಿತ ಖ್ಯಾತ ನಟನೊಂದಿಗೆ ಪತಿ ಕಳೆದುಕೊಂಡ ಖ್ಯಾತ ನಟಿಯ ಮದುವೆ: ಧನುಷ್,ಮೀನಾ ಮದುವೆ ಬಗ್ಗೆ ಸ್ಪೋಟಕ ಮಾಹಿತಿ..!
ಸಾವಿನ ನಂತರ ಆಧಾರ್, ಪಾನ್ ಕಾರ್ಡ್, ವೋಟರ್ ಐಡಿ ಏನಾಗುತ್ತದೆ?
☞ ಆಧಾರ್ ಕಾರ್ಡ್ – ಸಾವಿನ ನಂತರ ಆಧಾರ್ ಕಾರ್ಡ್ ಅನ್ನು ರದ್ದುಗೊಳಿಸುವ ಯಾವುದೇ ವ್ಯವಸ್ಥೆ ಈಗ ಇಲ್ಲ.
☞ PAN ಕಾರ್ಡ್ – ವ್ಯಕ್ತಿಯ ಮರಣದ ನಂತರ PAN ಅನ್ನು ಕ್ಲೋಸ್ ಮಾಡುವುದು ಅವಶ್ಯಕ.
☞ ವೋಟರ್ ಐಡಿ – ಸಾವಿನ ನಂತರ ಅದನ್ನು ರದ್ದುಗೊಳಿಸಿ. ಇಲ್ಲದಿದ್ದರೆ ನಕಲಿ ಮತ ಹಾಕುವ ಸಾಧ್ಯತೆಯಿರುತ್ತದೆ.
☞ ಪಾಸ್‌ಪೋರ್ಟ್ – ಅವಧಿ ಮುಗಿದ ನಂತರ ಅದು ತನ್ನಿಂದತಾನೇ ಅಮಾನ್ಯವಾಗುತ್ತದೆ.
ಇದನ್ನು ಓದಿ: ವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್