ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಬಹಳ ಉಪಯೋಗಕಾರಿ ಯೋಜನೆಯಾಗಿದ್ದು, ರೈತರು ಕೆಸಿಸಿ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಪಡೆಯಬಹುದಾಗಿದ್ದು, ಗ್ರಾಮೀಣ ಬ್ಯಾಂಕ್ ಅಥವಾ ಯಾವುದೇ ಸರ್ಕಾರಿ ಬ್ಯಾಂಕ್ಗಳು ಸುಲಭವಾಗಿ ಸಾಲ ಸೌಲಭ್ಯ ನೀಡುತ್ತವೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ರೈತರಿಗೆ 5 ವರ್ಷಗಳಲ್ಲಿ ₹ 3 ಲಕ್ಷ ಸಾಲ ಸೌಲಭ್ಯವಿದ್ದು, ಯಾವುದೇ ಗ್ಯಾರಂಟಿ ಇಲ್ಲದೆ ₹ 1 ಲಕ್ಷದ 60 ಸಾವಿರ ತನಕ ಸಾಲ ಪಡೆಯಬಹುದು.
3 ಲಕ್ಷ ರೂಪಾಯಿ ಸಾಲ..!
ಇನ್ನು, ಕೇಂದ್ರ ಬಜೆಟ್ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವತ್ತ ಸರ್ಕಾರ ಗಮನ ಹರಿಸಿದ್ದು, ಕೇಂದ್ರ ಸರ್ಕಾರದ ಯೋಜನೆಯಾದ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕೃಷಿ, ಮೀನುಗಾರಿಗೆ ಮತ್ತು ಪಶುಸಂಗೋಪನೆ ಕ್ಷೇತ್ರದ ರೈತರು ಅಗತ್ಯ ಕೃಷಿ ಸಾಲವನ್ನು ಪಡೆಯಬಹುದು. ಈ ಮೂಲಕ ರೈತರು ಗರಿಷ್ಠ 3 ಲಕ್ಷ ರೂ ಸಾಲ ಪಡೆಯಬಹುದಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.