ಖ್ಯಾತ ನಟಿ ಪವಿತ್ರಾ ಲೋಕೇಶ್ ಲವ್ವಿ ಡವ್ವಿ ವಿಚಾರ ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ಹೊಸ ಟ್ವಿಸ್ಟೊಂದು ಸಿಕ್ಕಿದ್ದು, ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಹೌದು, ನಟ ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ ಸಂಬಂಧದಲ್ಲಿ ಸಾಕಷ್ಟು ಬಿರುಕು ಬಂದ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದು, ಈ ವೇಳೆ ನರೇಶ್ ಮತ್ತು ಪವಿತ್ರಾ ನಡುವೆ ಸಂಬಂಧವಿರುವ ವಿಚಾರ ಬೆಳಕಿಗೆ ಬಂದಿತ್ತು.
ಬೆಂಗಳೂರಿನಲ್ಲಿ ಸಾಕಷ್ಟು ರಂಪಾಟದ ನಂತರ ಮೈಸೂರು ಹೋಟೆಲ್‌ವೊಂದರಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮೂವರು ಸೈಲೆಂಟ್ ಆಗಿದ್ದರು.
ಇದೀಗ ಮತ್ತೆ ನರೇಶ್ ಮನೆಗೆ ರಮ್ಯಾ ರಘುಪತಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೆಲ್ಲಾ ಗಲಾಟೆಯ ನಂತರ ನಟ ನರೇಶ್ ಈಗ ಪತ್ನಿ ರಮ್ಯಾ ಅವರನ್ನ ಮನೆಗೆ ಸೇರಿಸಿಕೊಂಡಿದ್ದಾರೆ. ಪತಿ ನರೇಶ್ ಮನೆಗೆ ರಮ್ಯಾ ಎಂಟ್ರಿ ಕೊಟ್ಟರು ಕೂಡ ಕಾನೂನು ಸಮರ ನಿಲ್ಲಿಸಿಲ್ಲ.