Sai Pallavi: ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ನಿರಾಸೆಯ ನಂತರ, ಬಾಲಿವುಡ್ ನಟ ಅಮೀರ್ ಖಾನ್ ತಾತ್ಕಾಲಿಕವಾಗಿ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದು, ಇದರ ಬೆನ್ನಲ್ಲೇ ಅಮೀರ್ ಪುತ್ರ ಜುನೈದ್ ಖಾನ್ ಅವರ ಚೊಚ್ಚಲ ಚಿತ್ರದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಅಮೀರ್ ಪುತ್ರ ಜುನೈದ್ ಅವರ ಮುಂಬರುವ ಚಿತ್ರದಲ್ಲಿ ಫಿದಾ ಬ್ಯುಟಿ ಸಾಯಿ ಪಲ್ಲವಿ ಮಹಿಳಾ ನಾಯಕಿ ಎಂದು ಖಚಿತಪಡಿಸಲಾಗಿದೆ.

Jawaan Collection: ಜವಾನ್ ಸಿನಿಮಾದಿಂದ ಹೊಸ ದಾಖಲೆ, ಶಾರುಖ್ ಸರಿಸಾಟಿ ಯಾರು ಇಲ್ಲ!
Sai Pallavi: ಯಶ್ ರಾಜ್ ಫಿಲ್ಮ್ಸ್ ನಿಂದ ಸಿನಿಮಾ
ನಿರ್ಮಾಣ
ಕಳೆದ ಕೆಲವು ವರ್ಷಗಳಲ್ಲಿ, ಜುನೈದ್ ಖಾನ್ ಚಿತ್ರರಂಗದಲ್ಲಿ ಚೊಚ್ಚಲ ಪ್ರವೇಶದ ಸುತ್ತ ಸಾಕಷ್ಟು ನಿರೀಕ್ಷೆಗಳಿವೆ, ಅದರಲ್ಲೂ ವಿಶೇಷವಾಗಿ ಅಮೀರ್ ಖಾನ್ ನಟನೆಯಿಂದ ವಿರಾಮ ತೆಗೆದುಕೊಂಡಾಗಿನಿಂದ ಇನ್ನಷ್ಟು ಎಚ್ಚು ಸುದ್ದಿಯಾಗುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಜುನೈದ್ ಅವರ ಮುಂಬರುವ ಚಿತ್ರದ ನಿರ್ಮಿಸುತ್ತಿದೆ.
ಜುನೈದ್ ಮತ್ತು ಸಾಯಿ ಪಲ್ಲವಿ ನಡುವೆ ವಿಭಿನ್ನ ಪ್ರೇಮಕಥೆ
ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿ ಖುಷಿಯೊಂದಿಗೆ ಜುನೈದ್ ಖಾನ್ ನಟಿಸಲಿದ್ದಾರೆ ಎಂದು ಮೊದಲು ಹೇಳಲಾಗಿತ್ತು. ಆದರೆ ಈಗ ಜುನೈದ್ ಅವರಿಗೆ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ನಿರ್ದೇಶಕ ಸುನೀಲ್ ಪಾಂಡೆ ಅವರು ಜುನೈದ್ ಮತ್ತು ಸಾಯಿ ಪಲ್ಲವಿಯನ್ನು ವಿಭಿನ್ನ ಪ್ರೇಮಕಥೆಯಲ್ಲಿ ನಿರ್ದೇಶಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.
ಇನ್ನು, ಜುನೈದ್ ಖಾನ್ ಸ್ಟೇಜ್ ಮೇಲೆ ಹೇಗೆ ನಟಿಸಬೇಕು ಅಂತ ಗೊತ್ತಿದ್ದು, ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಅಮಿರ್ ಖಾನ್ ನಟನೆಯ ‘ಪಿಕೆ’ ಸಿನಿಮಾದಲ್ಲೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
RBI ನಲ್ಲಿ 450 ಹುದ್ದೆಗೆ ಅರ್ಜಿ ಆಹ್ವಾನ – Apply online for RBI Recruitment 2023
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |