• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

Bengaluru bandh: ಇಂದು ಬೆಂಗಳೂರು ಬಂದ್, ಏನಿರುತ್ತೆ, ಏನಿರಲ್ಲ? ಯಾರಿಗೆಲ್ಲ ಸಮಸ್ಯೆ…!

Bengaluru bandh: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ 32 ಖಾಸಗಿ ವಾಹನಗಳ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿದ್ದು, ಏನಿರುತ್ತೆ, ಏನಿರಲ್ಲ? ಯಾರಿಗೆಲ್ಲ ಸಮಸ್ಯೆ...

VijayaprabhabyVijayaprabha
September 11, 2023
inDina bhavishya, ಪ್ರಮುಖ ಸುದ್ದಿ
0
Bengaluru bandh
0
SHARES
0
VIEWS
Share on FacebookShare on Twitter

Bengaluru bandh: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ 32 ಖಾಸಗಿ ವಾಹನಗಳ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿವೆ. ಪ್ರತಿಭಟನೆಯಲ್ಲಿ 3 ಲಕ್ಷ ಆಟೋ ಹಾಗೂ 5000 ಶಾಲಾ ಬಸ್ ಚಾಲಕರು ಸೇರಿ ಹಲವರು ಭಾಗಿಯಾಗಲಿದ್ದು, ಒಟ್ಟು 7 ಲಕ್ಷಕ್ಕೂ ಹೆಚ್ಚು ವಾಹನಗಳು ಸೇವೆಯನ್ನು ಸ್ಥಗಿತಗೊಳಿಸಲಿವೆ. ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ತೆರಳುವ ಪ್ರತಿಭಟನಾಕಾರರು, ಶಕ್ತಿ ಯೋಜನೆಯ ನಷ್ಟವನ್ನು ಭರಿಸುವಂತೆ ಆಗ್ರಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Bengaluru bandh
Bengaluru bandh

ಬೆಂಗಳೂರು ಬಂದ್‌ ಗೆ ಕಾರಣ, ಬಂದ್‌ ಪ್ಲಾನ್‌ ಏನು?

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಖಾಸಗಿ ಸಾರಿಗೆ ಸಂಸ್ಥೆಯವರು ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಸಾರಿಗೆ ಒಕ್ಕೂಟಗಳ ಬಂದ್‌ ಇಂದು ನಡೆಯಲಿದ್ದು 36 ಸಂಘಟನೆಗಳು ವಿಭಿನ್ನ ಪ್ಲಾನ್‌ ಮಾಡಿಕೊಂಡಿವೆ.

ಬೆಂಗಳೂರು ನಗರದೊಳಗೆ ಬೃಹತ್ ಮೆರವಣಿಗೆಗೆ ಪ್ಲ್ಯಾನ್ ಮಾಡಿರುವ ಸಂಘನೆಗಳು ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ ಮಾಡಲಿವೆ. ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ ಮಾಡಲಾಗಿದೆ. ಯಾವುದೇ ವಾಹನಗಳನ್ನು ರಸ್ತೆಗಿಳಿಸದಂತೆ ಸೂಚಿಸಲಾಗಿದೆ.

constipation digestive problems: ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗೆ ಬೆಲ್ಲ, ಬಾಳೆಹಣ್ಣು ಉತ್ತಮ ಪರಿಹಾರ!

Bengaluru bandh: ಬೇಡಿಕೆಗಳು ಏನು?

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಿದ್ದು, ಬೈಕ್ ಟ್ಯಾಕ್ಸಿಗಳಿಗೆ ನಿಷೇಧ, ಚಾಲಕರಿಗೆ 10,000 ರೂ., ಬೆಂಬಲ ನಿಗಮ, ಕಡಿಮೆ ಬಡ್ಡಿದರದ ಸಾಲ, ವೈಟ್ ಬೋರ್ಡ್ ವಾಹನಗಳ ತಡೆ, ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳನ್ನು ನಿಷೇಧಿಸಬೇಕು, ಅಧಿಕ ಬಡ್ಡಿ ವಿಧಿಸುವ ಹಣಕಾಸು ಕಂಪನಿಗಳ ಮೇಲೆ ಕಡಿವಾಣ ಹಾಕಬೇಕು.

Dina bhavishya: ಈ ರಾಶಿಯವರು ಇಂದು ರಹಸ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರಿ…!

ಏನಿರುತ್ತೆ, ಏನಿರಲ್ಲ?

  • ಅಲಭ್ಯ: ವಿಮಾನ ನಿಲ್ದಾಣಕ್ಕೆ ತೆರಳುವ ಟ್ಯಾಕ್ಸಿಗಳು, ಶಾಲಾ ಬಸ್ ಸೇರಿದಂತೆ ಖಾಸಗಿ ಬಸ್ ಗಳು, ಕ್ಯಾಬ್ ಗಳು, ಆಟೋ ಹಾಗೂ ಸರಕು ಸಾಗಣೆ ವಾಹನಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ. ಇನ್ನು ಹೊರ ಜಿಲ್ಲೆಗಳಿಂದ ಮಹಾನಗರ ಪ್ರವೇಶಿಸುವ ವಾಹನಗಳಿಗೆ ತಡೆ ಬೀಳುವ ಸಾಧ್ಯತೆ ಇದೆ.
  • ಲಭ್ಯ: KSRTC, BMTC, ನಮ್ಮ ಮೆಟ್ರೋ, ಖಾಸಗಿ ಆಂಬುಲನ್ಸ್ ಸೇವೆ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳು ಸಿಗಲಿವೆ.
Parineeti Chopra Raghav Chadha share wedding photos, Priyanka Chopra blessed
Parineeti Chopra Raghav Chadha share wedding photos, Priyanka Chopra blessed
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?

ಬೆಂಗಳೂರು ಬಂದ್: ಸಂಚಾರ ಬದಲಾವಣೆ

  • ಖೋಡೆ ವೃತ್ತಕ್ಕೆ ಬರುವ ವಾಹನಗಳು ಆರ್.ಆರ್.ಜಂಕ್ಷನ್ ಮೂಲಕ ಮಲ್ಲೇಶ್ವರಂ ತಲುಪಬೇಕಿದೆ.
  • ಗೂಡ್ ಶೆಡ್ ರಸ್ತೆಯ ವಾಹನಗಳು ಬಿ.ಟಿ.ರಸ್ತೆ, ಸುಜಾತ ಮುಖೇನ ತೆರಳಬೇಕಿದೆ.
  • ಆನಂದರಾವ್ ವೃತ್ತದ ವಾಹನಗಳು ಹಳೆ ಜೆಡಿಎಸ್ ಕಚೇರಿ & ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
  • ಮೈಸೂರು ಬ್ಯಾಂಕ್ ಕಡೆಯಿಂದ ಬರುವ ವಾಹನಗಳು ಪ್ಯಾಲೇಸ್ ರಸ್ತೆ, ಮಹಾರಾಣಿ ಕಾಲೇಜು ಅಂಡರ್ ಪಾಸ್, ಬಸವೇಶ್ವರ ಸರ್ಕಲ್ ಮುಖೇನ ಸಚರಿಸಬೇಕಿದೆ.

Jawaan Collection: ಜವಾನ್ ಸಿನಿಮಾದಿಂದ ಹೊಸ ದಾಖಲೆ, ಶಾರುಖ್ ಸರಿಸಾಟಿ ಯಾರು ಇಲ್ಲ!

ಯಾರಿಗೆಲ್ಲ ಸಮಸ್ಯೆ

ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ ಗೆ ಮುಂದಾಗಿದ್ದು, ಈ ಹಿನ್ನೆಲೆ ಇಂದು ಆಟೋ, ಕ್ಯಾಬ್, ಖಾಸಗಿ ಬಸ್ಸುಗಳು, ಇತರೆ ಖಾಸಗಿ ವಾಹನಗಳು ರಸ್ತೆಗಿಳಿಯುವುದಿಲ್ಲ. ಈ ಹಿನ್ನೆಲೆ ಏರ್ಪೋರ್ಟ್ ಗೆ ತೆರಳುವ, ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವವರಿಗೆ ಮತ್ತು ಖಾಸಗಿ ವಾಹನಗಳನ್ನು ಅವಲಂಬಿಸಿರುವವರಿಗೆ ಹೆಚ್ಚು ತೊಂದರೆಯಾಗಲಿದೆ. ಅಲ್ಲದೆ ಯಾವುದೇ ಗೂಡ್ಸ್ ವಾಹನಗಳೂ ಸಿಗದೇ ಇರಬಹುದು. ಇಂದು ಒಟ್ಟು 5 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿಯದಿರುವ ಸಾಧ್ಯತೆ ಇದೆ.

PM Jan Dhan Yojana: ಅಕೌಂಟ್ ನಲ್ಲಿ ಹಣ ಇಲ್ಲದಿದ್ದರೂ, ರೂ.10 ಸಾವಿರದವರೆಗೆ ವಿತ್ ಡ್ರಾ..!

ಶಾಲೆಗಳಿಗೆ ರಜೆ ಘೋಷಣೆ

ಇಂದು ಖಾಸಗಿ ಸಾರಿಗೆ ಒಕ್ಕೂಟ ಬಂದ್​ಗೆ ಕರೆ ನೀಡಿದ್ದು, ಈ ಬಂದ್‌ಗೆ ಶಾಲಾ ವಾಹನಗಳ ಮಾಲೀಕರೂ ಬೆಂಬಲ ನೀಡಿದ್ದಾರೆ. ಹೀಗಾಗಿ ಶಾಲೆಗೆ ಬರಲು ಮಕ್ಕಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆರ್ಕಿಡ್‌ ಸೇರಿದಂತೆ 6-7 ಶಾಲೆಗಳು ರಜೆ ಘೋಷಿಸಿದ್ದು, ಬಹುತೇಕ ಖಾಸಗಿ ಶಾಲೆಗಳು ರಜೆ ಘೋಷಿಸಿವೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
Tags: bandhBengaluru bandhBengaluru bandh todayToday Bengaluru bandhಇಂದು ಬೆಂಗಳೂರು ಬಂದ್ಬಂದ್ಬೆಂಗಳೂರು ಬಂದ್
Previous Post

constipation digestive problems: ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗೆ ಬೆಲ್ಲ, ಬಾಳೆಹಣ್ಣು ಉತ್ತಮ ಪರಿಹಾರ!

Next Post

heavy rain: ಸೆ.16 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ; ಮೀನುಗಾರಿಕೆಗೆ ಬ್ರೇಕ್!

Next Post
heavy rain

heavy rain: ಸೆ.16 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ; ಮೀನುಗಾರಿಕೆಗೆ ಬ್ರೇಕ್!

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Bengaluru Bandh: ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಬಂದ್; ಏನಿರುತ್ತೆ, ಏನಿರಲ್ಲ?
  • saffron water: ಆರೋಗ್ಯವೇ ಭಾಗ್ಯ, ಕೇಸರಿ ನೀರಿನ ಅದ್ಬುತ ಪ್ರಯೋಜನಗಳು
  • Dina bhavishya: ಇಂದಿನ ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಕೆಲಸದಲ್ಲಿ ಉತ್ತಮ ಯಶಸ್ಸು, ಜೀವನದಲ್ಲಿ ಪ್ರಗತಿ..!
  • KPSC Recruitment 2023: 230 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ; ಸೆಪ್ಟೆಂಬರ್ 30 ಕೊನೆ ದಿನ
  • ಅಕ್ಟೋಬರ್ 1ರಿಂದ ಈ ನಿಯಮಗಳಲ್ಲಿ ಬದಲು; ಈಗಲೇ ಈ ಕೆಲಸ ಪೂರ್ಣಗೊಳಿಸಿ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    Parineeti Chopra Raghav Chadha share wedding photos, Priyanka Chopra blessedಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರುಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?