Gruhalakshmi: ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಗ್ಯಾರೆಂಟಿ ಯೋಜನೆ ಗೃಹಲಕ್ಷ್ಮಿ ಇಂದು ಮೈಸೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಈ ಸಮಾರಂಭದ ಬಳಿಕ ಮನೆಯ ಯಜಮಾನಿ ಖಾತೆಗೆ ಇಂದೇ ₹2000 ಜಮೆಯಾಗಲಿದೆ. ಸರ್ಕಾರ ಈಗಾಗಲೇ ಡಿಬಿಟಿಗೆ ವ್ಯವಸ್ಥೆ ಮಾಡಿಕೊಂಡಿದ್ದು ಮೊದಲ ಕಂತು ಇಂದೇ ಯಜಮಾನಿಯ ಕೈಗೆ ಸಿಗಲಿದೆ. ರಾಜ್ಯದಾದ್ಯಂತ ಸುಮಾರು 1.1 ಕೋಟಿ ಮಹಿಳೆಯರು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಹಣದ ನಿರೀಕ್ಷೆಯಲ್ಲಿದ್ದಾರೆ.
Gruhalakshmi: ನಾಳೆ ಗೃಹಲಕ್ಷ್ಮೀ ಉದ್ಘಾಟನೆ; 2000 ರೂ ನೀಡುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಚೆಕ್ ಮಾಡಿ
Gruhalakshmi: ಗೃಹಲಕ್ಷ್ಮೀ ಉದ್ಘಾಟನೆಗೆ ಸಜ್ಜು
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಇಂದು ಮೈಸೂರಿನಲ್ಲಿ ಉದ್ಘಾಟನೆಯಾಗಲಿದ್ದು, ಇಡೀ ಸರ್ಕಾರವೇ ಮುಂದೆ ನಿಂತು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, .ಮುನಿಯಪ್ಪ, ಕೆ.ವೆಂಕಟೇಶ್, ಎನ್. ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ, ಎಸ್.ಎಸ್. ಬೋಸರಾಜು, ಮೇಯರ್ ಶಿವಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಎಲ್ಲೆಡೆಯಿಂದ ಸುಮಾರು ಒಂದೂವರೆ ಲಕ್ಷ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 10,000 ಅಧಿಕ ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಎಲ್‌ಇಡಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
ಗೃಹಲಕ್ಷ್ಮಿ: ಅಂಕಿಅಂಶ
- 32,0000: ಈ ಯೋಜನೆಯ ವಾರ್ಷಿಕ ವೆಚ್ಚ
- 20,0000: ಈ ವರ್ಷ ಉಳಿದ ೮ ತಿಂಗಳಲ್ಲಿ ಯೋಜನೆ ಜಾರಿಗೆ ಬೇಕಾದ ಮೊತ್ತ
- 2220: ಕೋಟಿ ರೂ ಈ ತಿಂಗಳು ಖಾತೆಗೆ ಜಮೆಯಾಗುವ ಮೊತ್ತ
- 1.11 ಕೋಟಿ ಸ್ತ್ರೀಯರು ಹಣ ಪಡೆಯುವ ನಿರೀಕ್ಷೆ
- 1.30 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ
- 2000: ರಾಜ್ಯದಾದ್ಯಂತ ಮೈಸೂರಿಗೆ ಫಲಾನುಭವಿಗಳನ್ನು ಕರೆ ತರಲು ಬಸ್‌ಗಳ ನಿಯೋಜನೆ
- 10400: ರಾಜ್ಯದಾದ್ಯಂತ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ
India Post: ಕೇವಲ ರೂ.299ಕ್ಕೆ ರೂ.10 ಲಕ್ಷ ವಿಮೆ.. ಪೋಸ್ಟ್ ಆಫೀಸ್ ಅದ್ಬುತ ಯೋಜನೆ..ಈಗಲೇ ಸೇರಿ!
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |