Vishwakarma Yojana: ಮೋದಿ ಸರ್ಕಾರದ ಯೋಜನೆ ; ಇವರಿಗೆ ರೂ.2 ಲಕ್ಷ ಸಾಲ, ರೂ.15 ಸಾವಿರ ಆರ್ಥಿಕ ನೆರವು!

Vishwakarma Yojana: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಪ್ರಮುಖ ಘೋಷಣೆ ಮಾಡಿದ್ದು, ಕರಕುಶಲ ಕಾರ್ಮಿಕರನ್ನು ಬೆಂಬಲಿಸಲು ತಂದ ಈ ಯೋಜನೆಗೆ…

Vishwakarma Yojana

Vishwakarma Yojana: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಪ್ರಮುಖ ಘೋಷಣೆ ಮಾಡಿದ್ದು, ಕರಕುಶಲ ಕಾರ್ಮಿಕರನ್ನು ಬೆಂಬಲಿಸಲು ತಂದ ಈ ಯೋಜನೆಗೆ ರೂ. 13 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಸಂಪುಟ ಸಭೆಯ ನಿರ್ಧಾರಗಳನ್ನು ಬಹಿರಂಗಪಡಿಸಿದ್ದು,ಸಾಂಪ್ರದಾಯಿಕ ಕರಕುಶಲ ಕೌಶಲ್ಯಗಳ ಅಭಿವೃದ್ಧಿಗೆ ಸರ್ಕಾರವು ಆರ್ಥಿಕ ನೆರವು ನೀಡುತ್ತದೆ. ವಿಶ್ವಕರ್ಮ ಯೋಜನೆಯಡಿ ಸುಮಾರು 30 ಲಕ್ಷ ಕುಟುಂಬಗಳು ಪ್ರಯೋಜನ ಪಡೆಯಲಿವೆ ಎಂದರು.

Vishwakarma Yojana
Vishwakarma Yojana

Vishwakarma Yojana ಯೋಜನೆಯಡಿ ಕೇಂದ್ರದಿಂದ ಒಂದು ಲಕ್ಷ ರೂ. ಸಾಲ

‘ಪಿಎಂ ವಿಶ್ವಕರ್ಮ’ ಯೋಜನೆಯಡಿ, ಕೇಂದ್ರ ಸರ್ಕಾರವು 18 ವರ್ಗದ ಒಬಿಸಿಗಳಿಗೆ ಶೇಕಡಾ 5ರ ಬಡ್ಡಿ ಸಬ್ಸಿಡಿಯೊಂದಿಗೆ 1 ಲಕ್ಷ ರೂ. ವರೆಗೆ ಸಲ ಸೌಲಭ್ಯ ನೀಡುತ್ತಿದೆ. ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲ ನೀಡಲಾಗುವುದು. ಬಡಗಿಗಳು, ದೋಣಿ ತಯಾರಕರು, ಕಮ್ಮಾರರು, ಕಬ್ಬಿಣದ ಉಪಕರಣ ತಯಾರಕರು, ಬೀಗದ ಕೆಲಸಗಾರರು, ಕುಂಬಾರರು, ಚರ್ಮಕಾರರು, ಮೇಸ್ತ್ರಿಗಳು, ವಿಗ್ರಹ ತಯಾರಕರು, ಕ್ಷೌರಿಕರು, ಹೂವಿನ ಮಾಲೆ ತಯಾರಕರು, ಟೈಲರ್‌ಗಳು, ಕಸೂತಿಗಾರರು, ಬಲೆ ತಯಾರಕರು ಈ ಸಾಲಗಳಿಗೆ ಅರ್ಹರು.

ಇದನ್ನು ಓದಿ: ಸಿಮ್ ಕಾರ್ಡ್ ಬಗ್ಗೆ ಕೇಂದ್ರದ ಮಹತ್ವದ ನಿರ್ಧಾರ; ಈ ನಿಯಮಗ ಉಲ್ಲಂಘಿಸಿದರೆ 10 ಲಕ್ಷ ರೂ ದಂಡ!

Vijayaprabha Mobile App free

Vishwakarma Yojana: ರೂ.500 ದೈನಂದಿನ ಸ್ಟೈಫಂಡ್..ರೂ.15 ಸಾವಿರ ಆರ್ಥಿಕ ನೆರವು

ಮತ್ತೊಂದೆಡೆ, ಕರಕುಶಲ ಕಲೆಗಳನ್ನು ಕಲಿಯಲು ಆಸಕ್ತಿ ಹೊಂದಿರುವವರಿಗೆ ಎರಡು ತರಬೇತಿ ಕಾರ್ಯಕ್ರಮಗಳನ್ನು ಈ ಯೋಜನೆಯಡಿ ತರಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದರು. ಈ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದವರಿಗೆ ರೂ. 500 ಸ್ಟೈಫಂಡ್, ಉತ್ತಮ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ಸಲಕರಣೆ ಖರೀದಿಗೆ ರೂ. 15 ಸಾವಿರ ಆರ್ಥಿಕ ನೆರವು ನೀಡಲಾಗುವುದು ಎಂದರು.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ

ಇದನ್ನು ಓದಿ: ಇಂದಿನಿಂದ ಮತ್ತೆ 3 ದಿನ ಭಾರೀ ಮಳೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.