Gruha Lakshmi: ಖಾತೆಗೆ 2000ರೂ, ಕೆಲವೆ ದಿನ ಬಾಕಿ; ಗೃಹಲಕ್ಷ್ಮೀ ಯೋಜನೆಗೆ ವಾಟ್ಸಾಪ್‌ನಲ್ಲಿ ಅರ್ಜಿ ಸಲ್ಲಿಸಿ!

Gruha Lakshmi: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ 1 ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯ ಮೊದಲ ಕಂತು ಆ. 27ಕ್ಕೆ ಮನೆ ಯಜಮಾನಿಯ ಖಾತೆ ಸೇರಲಿದೆ. ಈ ಯೋಜನೆಯ ಅರ್ಜಿ…

Gruha Lakshmi

Gruha Lakshmi: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ 1 ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯ ಮೊದಲ ಕಂತು ಆ. 27ಕ್ಕೆ ಮನೆ ಯಜಮಾನಿಯ ಖಾತೆ ಸೇರಲಿದೆ. ಈ ಯೋಜನೆಯ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವು ಇಲ್ಲ. ಆದರೆ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಸುಲಭವಾಗಲಿ ಅನ್ನುವ ದೃಷ್ಟಿಯಿಂದ ಸರ್ಕಾರ Whatsapp ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಇದನ್ನು ಓದಿ: ಈ ಸೋಂಕಿನ ಬಳಿಕ ಹೃದಯಾಘಾತ ಹೆಚ್ಚಳ; ಇವೆ ಹೃದಯಾಘಾತದ ಸೂಚನೆಗಳು

Gruha Lakshmi: ವಾಟ್ಸಾಪ್‌ನಲ್ಲಿ ಗೃಹಲಕ್ಷ್ಮೀ ಅರ್ಜಿ ಸಲ್ಲಿಸಿ

Gruha Lakshmi
Gruha Lakshmi

ಹೌದು, ಮನೆ ಯಜಮಾನಿ ಖಾತೆಗೆ 2000 ರೂ ಸಿಗಲಿರುವ ‘ಗೃಹ ಲಕ್ಷ್ಮೀ’ಗೆ ಅರ್ಜಿ ಸಲ್ಲಿಕೆಗೆ ಈ ಮೊದಲು ಮಹಿಳಯರು ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಸರತಿ ಸಾಲಲ್ಲಿ ಅರ್ಜಿ ಸಲ್ಲಿಸಲು ನಿಲ್ಲಬೇಕಿತ್ತು.ಆದ್ರೆ ಇದೀಗ ಸುಲಭವಾಗಿ ಮನೆಯಲ್ಲೇ ಕೂತು ವಾಟ್ಸಾಪ್‌ ಮೂಲಕ ಅರ್ಜಿ ಹಾಕಬಹುದು.ಈ 8147500500 ನಂಬರ್ ಮೊಬೈಲ್​ನಲ್ಲಿ ಸೇವ್​ ಮಾಡಿ,ಬಳಿಕ ವಾಟ್ಸಾಪ್ ಆ್ಯಪ್​ನಲ್ಲಿತೆರೆದರೆ ಚಾಟ್‌ ಬಾಕ್ಸ್‌ ಓಪನ್‌ ಆಗುತ್ತದೆ. ಕರ್ನಾಟಕ ಸರ್ಕಾರ ಶೀರ್ಷಿಕೆಯಡಿ ‘ಚಾಟ್‌ಬಾಟ್’ ಮೂಲಕ ಅರ್ಜಿಗೆ ಬೇಕಾದ ಮಾಹಿತಿ ಮತ್ತು ದಾಖಲೆ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

Vijayaprabha Mobile App free

ಇದನ್ನು ಓದಿ: ಮೋದಿ ಸರ್ಕಾರದ ಬಂಪರ್.. ಖಾತೆಗೆ 25 ಸಾವಿರ ರೂ., ಇವರಿಗೆ ಮಾತ್ರ!

Gruha Lakshmi: ಏಕಕಾಲಕ್ಕೆ 11 ಸಾವಿರ ಕಡೆ ಉದ್ಘಾಟನೆ

ಕಾಂಗ್ರೆಸ್ ಸರ್ಕಾರ ಪ್ರಮುಖ ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಇದೇ ಆಗಸ್ಟ್ 27ರಂದು ಚಾಲನೆ ನೀಡುವುದಾಗಿ ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ಈ ಯೋಜನೆಯು ಕೇವಲ ಒಂದೇ ಸ್ಥಳದಲ್ಲಿ ಉದ್ಘಾಟನೆ ಮಾಡುವುದಿಲ್ಲ, ಬದಲಾಗಿ ರಾಜ್ಯದ 11 ಸಾವಿರ ಕಡೆಗಳಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗುತ್ತಿದೆ. ಒಂದು ಯೋಜನೆಗೆ ₹35 ಸಾವಿರ ಕೋಟಿ ಮೀಸಲಿಡುತ್ತಿರುವುದು ದೇಶದಲ್ಲಿ ನಮ್ಮ ರಾಜ್ಯ ಮಾತ್ರ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

2,000ರೂ, 1.50 ಕೋಟಿ ಮನೆಯ ಯಜಮಾನಿಯರಿಗೆ ಹಣ ಜಮೆ!

ಎಲ್ಲರ ಅನುಕೂಲಕ್ಕೆ ಅನುಗುಣವಾಗಿ ಆಗಷ್ಟ್‌ 20ರ ಬದಲಿಗೆ ಆ. 27ರಂದು ರಾಜ್ಯದ 11 ಸಾವಿರ ಕಡೆಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಬೃಹತ್ ಮಟ್ಟದಲ್ಲಿ ಚಾಲನೆ ನೀಡಲು ತೀರ್ಮಾನಿಸಿದ್ದು, ಈ ಯೋಜನೆಯಲ್ಲಿ ನೋಂದಣಿಯಾಗಿರುವ 1.50 ಕೋಟಿ ಫಲಾನುಭವಿಗಳಿಗೆ (ಮನೆ ಯಜಮಾನಿಯರಿಗೆ) ಆಗಸ್ಟ್ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಇದನ್ನು ಓದಿ: ರೈತರಿಗೆ ತಿಂಗಳಿಗೆ 3,000 ವರ್ಷಕ್ಕೆ ರೂ.36,000… ಇದೇ ಕೇಂದ್ರ ಸರ್ಕಾರದ ಯೋಜನೆ

ಇದೇ ದಿನ ಮಹಿಳೆಯರ ಖಾತೆಗೆ 2, 000 ರೂ. ಹಣ ಜಮೆ!!

ಮಹಿಳೆಯರು ಕಾತುರದಿಂದ ಕಾಯುತ್ತಿರುವ ಗೃಹಲಕ್ಷ್ಮೀ ಯೋಜನೆಯ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಬೆಳಗಾವಿಯಲ್ಲಿ ಇದೇ ಆಗಸ್ಟ್ 27ಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದ್ದು, ಅದೇ ದಿನ 1 ಕೋಟಿಗೂ ಅಧಿಕ ಮಹಿಳೆಯರಿಗೆ 2,000 ರೂ. ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ.

ಇದನ್ನು ಓದಿ: ರೈತರಿಗೆ ತಿಂಗಳಿಗೆ 3,000 ವರ್ಷಕ್ಕೆ ರೂ.36,000… ಇದೇ ಕೇಂದ್ರ ಸರ್ಕಾರದ ಯೋಜನೆ

ಗೃಹಲಕ್ಷ್ಮಿ ಯೋಜನೆಯು ರಾಜ್ಯದ 11 ಸಾವಿರ ಕಡೆ ಏಕಕಾಲಕ್ಕೆ ಚಾಲನೆ ಸಿಗಲಿದ್ದು, ಎಲ್ಲಾ ಗ್ರಾಮ ಪಂಚಾಯ್ತಿ, ನಗರಸಭೆ, ಪುರಸಭೆಗಳಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು. ಪಂಚಾಯ್ತಿಗೊಬ್ಬರು ನೋಡೆಲ್ ಆಫಿಸರ್‌ಗಳ ನೇಮಕ‌ ಮಾಡಿದ್ದು, ಪಕ್ಷಾತೀತವಾಗಿ ಕಾರ್ಯಕ್ರಮ ಆಯೋಜನೆ, ಎಲ್ಲರೂ ಭಾಗವಹಿಸಬೇಕು ಎಂದು ಸಚಿವೆ ಲಕ್ಷಿ ಹೆಬ್ಬಾಳ್ಕರ್ ಗುರುವಾರ ಕರೆ ನೀಡಿದ್ದಾರೆ.

ಇದನ್ನು ಓದಿ: ಲೋ ಬಿಪಿ ಲಕ್ಷಣಗಳೇನು? BP ಲೋ ಆದಾಗ ತಕ್ಷಣ ಏನು ಮಾಡಬೇಕು?

2000 ರೂ. ಸಿಗೋಕೆ ಕೆಲವೆ ದಿನ ಬಾಕಿ:ಬೇಗ ಅರ್ಜಿ ಹೀಗೆ ಸಲ್ಲಿಸಿ!

ಇನ್ನು, ರೇಷನ್‌ ಕಾರ್ಡ್‌ನಲ್ಲಿ ಗುರುತಿಸಿರುವ ಮನೆಯೊಡತಿಗೆ ನೀಡಿರುವ ಮೊಬೈಲ್ ಆಧರಿಸಿ, ಅವರು ನೋಂದಣಿ ಮಾಡಬೇಕಾದ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರ ಇ-ಆಡಳಿತ ಇಲಾಖೆ ಮೂಲಕ ತಿಳಿಸಲಾಗುತ್ತದೆ. ಅದೇ ಸಂದೇಶದಲ್ಲಿ ಸೂಚಿಸಿದ ಸಮಯಕ್ಕೆ ಗ್ರಾಮೀಣರು ನಿಗದಿತ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರದವರು ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಬಹುದು.

ಇದನ್ನು ಓದಿ:  ಶೀಘ್ರದಲ್ಲೇ Ration card ಅರ್ಜಿ ಸಲ್ಲಿಕೆ ಆರಂಭ; ಹೊಸ ರೇಷನ್‌ ಕಾರ್ಡ್‌ ಪಡೆಯಲು ನೀವು ಅರ್ಹರಾ ಚೆಕ್‌ ಮಾಡಿ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.