Aadhaar-Pan: ಆದಾಯ ತೆರಿಗೆ ಪಾವತಿದಾರರ (Income Tax Payer) ಪ್ಯಾನ್ ಕಾರ್ಡ್ (ಪಾನ್ ಕಾರ್ಡ್) ಅನ್ನು ಆಧಾರ್‌ನೊಂದಿಗೆ ಲಿಂಕ್ (Link PAN Card with Aadhaar) ಮಾಡದಿದ್ದರೆ, ಅವರು ಐಟಿಆರ್ ಅನ್ನು ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕೊನೆಯ ದಿನಾಂಕ ಜೂನ್ 30, 2023 ರವರೆಗೆ ಜನರು ದಂಡದೊಂದಿಗೆ ಅವುಗಳನ್ನು ಲಿಂಕ್ ಮಾಡಬಹುದಾಗಿದ್ದು, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ರೂ.1000 ದಂಡವನ್ನು ಪಾವತಿಸಬೇಕಾಗುತ್ತದೆ.
ಇದನ್ನು ಓದಿ: ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರು, ಜನ್ಮ ದಿನಾಂಕ, ವಿಳಾಸವನ್ನು ಬದಲಿಸಬಹುದು ಗೊತ್ತೇ?
ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಐಟಿಆರ್ ಭರ್ತಿ ಮಾಡುವುದು ಸಾಧ್ಯವಿಲ್ಲ, ನೀವು ಇತರ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಸೌಲಭ್ಯಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ನಾಗರಿಕರಿಗೆ ಸರಕಾರ ಆದೇಶ ನೀಡಿದೆ.
ಅನೇಕ ಜನರು ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಕಾರ್ಯವನ್ನು ಪೂರ್ಣಗೊಳಿಸಿದ್ದರೂ, ಅನೇಕರಿಗೆ ತಮ್ಮ ಆಧಾರ್-ಪ್ಯಾನ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಗೊತ್ತಿಲ್ಲ. ಇದನ್ನು ಗುರುತಿಸುವುದು ಕೂಡ ತುಂಬಾ ಸುಲಭ.
ಇದನ್ನು ಓದಿ: ಗಂಡ ಹೆಂಡತಿಗೆ ಗಿಫ್ಟ್ ಕೊಟ್ಟರೆ ತೆರಿಗೆ ಕಟ್ಟಬೇಕಾ? ಐಟಿ ನಿಯಮಗಳು ಏನು ಹೇಳುತ್ತವೆ?
ಆಧಾರ್-ಪ್ಯಾನ್ ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?
- ಇದಕ್ಕಾಗಿ ಮೊದಲು ಆದಾಯ ತೆರಿಗೆ ಇಲಾಖೆಯ https://www.incometax.gov.in/iec/foportal/ ವೆಬ್‌ಸೈಟ್‌ಗೆ ಹೋಗಬೇಕು.
- ಇದರ ನಂತರ ನೀವು ‘ಲಿಂಕ್ ಆಧಾರ್ ಸ್ಟೇಟಸ್’ (Link Aadhaar Status) ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ ಹೊಸ ವಿಂಡೋ ತೆರೆಯುತ್ತದೆ.
- ಇದರಲ್ಲಿ ‘View Link Aadhaar Status’ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಮುಂದೆ ಒಂದು ಸಂದೇಶ ಕಾಣಿಸುತ್ತದೆ.
- ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದು ಕಾಣಿಸುತ್ತದೆ.
ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?
- ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಲು ಮೊದಲು ಆದಾಯ ತೆರಿಗೆ incometax.gov.in ವೆಬ್‌ಸೈಟ್‌ಗೆ ಹೋಗಬೇಕು.
- ಇದರ ನಂತರ ‘ಲಿಂಕ್ ಆಧಾರ್’ (Link Aadhaar) ಮೇಲೆ ಕ್ಲಿಕ್ ಮಾಡಿ್ದರೆ, ಇಲ್ಲಿ ಲಾಗಿನ್ ಮಾಡಲು ಕೇಳಲಾಗುತ್ತದೆ.
- ಅದರಲ್ಲಿ ಜನ್ಮ ದಿನಾಂಕವನ್ನು ಪ್ಯಾನ್ ಸಂಖ್ಯೆ ಹಾಗು ಬಳಕೆದಾರ ಐಡಿಯೊಂದಿಗೆ ನಮೂದಿಸಬೇಕು.
- ಇದರ ನಂತರ ನಿಮ್ಮ ಖಾತೆಯ ಪ್ರೊಫೈಲ್ ಸೆಟ್ಟಿಂಗ್‌ಗೆ ಹೋಗಿ, ಆಧಾರ್ ಕಾರ್ಡ್ ಲಿಂಕ್ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ (Captcha Code) ನಮೂದಿಸಿ.
- ನೀವು ಕೆಳಗೆ ಆಧಾರ್ ಲಿಂಕ್ ಆಯ್ಕೆಯನ್ನು ಹೊಂದಿರುತ್ತೀರಿ.
- ಅದನ್ನು ಕ್ಲಿಕ್ ಮಾಡಿ. ಇದಾದ ನಂತರ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗುತ್ತದೆ.
ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್, ಈ ಯೋಜನೆಯಡಿ ರೂ.4 ಲಕ್ಷದವರಿಗೆ ಬೆನಿಫಿಟ್ಸ್!