PM Kisan: ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಒಂದು ಕುಟುಂಬದಲ್ಲಿ ಎಷ್ಟು ಜನರು ಪಡೆಯಬಹುದು?

PM Kisan: ಮೋದಿ ಸರಕಾರ ರೈತರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ(Pradhan Mantri Kisan Yojana) ಪ್ರಾರಂಭಿಸಿದೆ. ಪ್ರಧಾನ…

Farmer

PM Kisan: ಮೋದಿ ಸರಕಾರ ರೈತರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆ(Pradhan Mantri Kisan Yojana) ಪ್ರಾರಂಭಿಸಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಮುಖ್ಯ ಉದ್ದೇಶವು ಅರ್ಹ ರೈತರಿಗೆ ಮೂರು ಕಂತುಗಳ ಮೂಲಕ 2000 ರೂಗಳಂತೆ ವಾರ್ಷಿಕವಾಗಿ ರೂ 6000 ಗಳನ್ನೂ ರೈತರ ಖಾತೆಗೆ ಜಮಾ ಮಾಡಲಾಗುವುದು.

ಇದನ್ನು ಓದಿ: ತಪ್ಪಾದ ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಮಾಡಿದ್ದೀರಾ? ಟೆನ್ಶನ್ ಬೇಡ.. ಹೀಗೆ ಡಿಲಿಂಕ್ ಮಾಡಿ!

ಪ್ರಧಾನಮಂತ್ರಿ ಕಿಸಾನ್ ಯೋಜನೆ (Pradhan Mantri Kisan Yojana) ಯಡಿ ಕೇಂದ್ರ ಸರ್ಕಾರ (Central Govt) ಇದುವರೆಗೆ 13 ಕಂತುಗಳನ್ನು ರೈತರಿಗೆ (Farmer) ಖಾತೆಗೆ ಜಮಾ ಮಾಡಿದ್ದು, ಇನ್ನು, 14ನೇ ಕಂತಿನ ರೂ. 2000 ಗಳ ಸಹಾಯಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಕೆಲವು ರೈತರು 2 ಕಂತುಗಳ ಸಹಾಯವನ್ನು ಪಡೆದಿದ್ದು, ರೂ 4000 ಒಮ್ಮೆಗೆ ಸಿಗುತ್ತದೆ.

Vijayaprabha Mobile App free

ಒಂದು ಕುಟುಂಬದಲ್ಲಿ ಎಷ್ಟು ಜನರು ಪ್ರಯೋಜನ ಪಡೆಯಬಹುದು

farmer vijayaprabha news1
PM Kisan

ಆದರೆ, ಒಂದು ಕುಟುಂಬದಲ್ಲಿ ಎಷ್ಟು ರೈತರು ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ ಎಂಬುದು ರೈತರಿಗೆ ಮುಖ್ಯವಾಗಿದೆ. ಇದಕ್ಕೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಿದೆ. ಈ ಯೋಜನೆಯಡಿ ಸರ್ಕಾರವು ವರ್ಷಕ್ಕೆ ಮೂರು ಕಂತುಗಳ ಮೂಲಕ 2000 ರೂಗಳಂತೆ ವಾರ್ಷಿಕವಾಗಿ ರೂ 6000 ಗಳನ್ನೂ ರೈತರ ಖಾತೆಗೆ ಜಮಾ ಮಾಡಲಾಗುವುದು.

ಇದನ್ನು ಓದಿ: 02 ಮೇ 2023 ಈ ದಿನ ಕರ್ಕಾಟಕ ಮತ್ತು ಕನ್ಯಾ ರಾಶಿ ಸೇರಿದಂತೆ ಈ 6 ರಾಶಿಯವರಿಗೆ ಹನುಮಂತನ ಆಶೀರ್ವಾದ ಸಿಗಲಿದೆ..!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (Pradhan Mantri Kisan Samman Nidhi Yojana) ಸಂಪೂರ್ಣ ಪ್ರಯೋಜನವನ್ನು ರೈತ ಕುಟುಂಬಕ್ಕೆ ಒದಗಿಸಲಾಗಿದ್ದು,ಈ ಕುಟುಂಬದಲ್ಲಿ, ಪತಿ, ಪತ್ನಿ ಮತ್ತು ಅವರ ಮಕ್ಕಳು ಈ ಯೋಜನೆಯಲ್ಲಿ ಸೇರಿದ್ದಾರೆ. ಈ ಯೋಜನೆಯ ಲಾಭವನ್ನು ಪಡೆಯಲು ಪತಿ, ಪತ್ನಿ ಇಬ್ಬರಿಗೂ ಪ್ರತ್ಯೇಕವಾಗಿ ನೀಡಬೇಕೆಂಬ ನಿಯಮವಿಲ್ಲ.

ಇದನ್ನು ಓದಿ: ದಿನಕ್ಕೆ ಕೇವಲ 333 ರೂ ಉಳಿತಾಯ ಮಾಡಿದರೆ ಕೈಗೆ 16 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂರು ಕಂತುಗಳನ್ನು ಏಪ್ರಿಲ್‌ನಿಂದ ಜುಲೈವರೆಗೆ, ಆಗಸ್ಟ್‌ನಿಂದ ನವೆಂಬರ್‌ವರೆಗೆ ಮತ್ತು ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದಲ್ಲದೆ, ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆ (Pradhan Mantri Kisan Yojana) ಯಡಿ 14ನೇ ಕಂತು ಮೇ ತಿಂಗಳಲ್ಲಿ ಬರುವ ಸಾಧ್ಯತೆ ಇದೆ.

ಇನ್ನು, ರೈತರು pmkisan.gov.in ಗೆ ಭೇಟಿ ನೀಡುವ ಮೂಲಕ ಈ 14 ನೇ ಕಂತಿನ ಸ್ಥಿತಿಯನ್ನು ಪರಿಶೀಲಿಸಬಹುದಾಗಿದ್ದು, ಈ ಲಿಂಕ್‌ಗೆ ಭೇಟಿ ನೀಡಿದ ನಂತರ, ಫಲಾನುಭವಿಯು ಸ್ಥಿತಿ ಆಯ್ಕೆಗೆ ಹೋಗುವ ಮೂಲಕ ಮುಂದಿನ ಕಂತಿನ ನವೀಕರಣವನ್ನು ಪರಿಶೀಲಿಸಬಹುದು.

ಇದನ್ನು ಓದಿ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‌ ಲಿಂಕ್ ಆಗಿದೆಯೇ? ಸ್ಥಿತಿ ಪರಿಶೀಲಿಸುವ ಸರಳ ಪ್ರಕ್ರಿಯೆ ಇಲ್ಲಿದೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.