ಖ್ಯಾತ ನಟಿ ಪವಿತ್ರಾ ಲೋಕೇಶ್, ನರೇಶ್‌ ಲವ್ವಿಡವ್ವಿ, ಮದುವೆ, ಹನಿಮೂನ್‌ ಬಣ್ಣ ಬಯಲು; ಇದಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ..?

ಖ್ಯಾತ ನಟಿ ಪವಿತ್ರಾ ಲೋಕೇಶ್‌ ಮತ್ತು ತೆಲುಗು ಹಿರಿಯ ನಟ ನರೇಶ್‌ ನಡುವಿನ ಹಲವು ದಿನಗಳ ಲವ್ವಿಡವ್ವಿ, ಮದುವೆ, ಹನಿಮೂನ್‌ನ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಹೌದು, ಇತ್ತೀಚೆಗೆ ಹಿರಿಯ ನಟ ನರೇಶ್ ಹಾಗೂ…

Pavitra Lokesh

ಖ್ಯಾತ ನಟಿ ಪವಿತ್ರಾ ಲೋಕೇಶ್‌ ಮತ್ತು ತೆಲುಗು ಹಿರಿಯ ನಟ ನರೇಶ್‌ ನಡುವಿನ ಹಲವು ದಿನಗಳ ಲವ್ವಿಡವ್ವಿ, ಮದುವೆ, ಹನಿಮೂನ್‌ನ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ.

ಹೌದು, ಇತ್ತೀಚೆಗೆ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧ ಭಾರೀ ಚರ್ಚೆಯಾಗಿದ್ದು, ಮೈಸೂರಿನಲ್ಲಿ ಕೆಲ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರು ಮದುವೆಯಾಗಿ, ಇಬ್ಬರು ಹೊಸ ಜೀವನ ಆರಂಭಿಸಿದ್ದಾರೆ ಎಂದು ವರದಿಯಾಗಿತ್ತು.

ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಮಕ್ಕಳ ತಂದೆ ಇವರಲ್ಲ..!

Vijayaprabha Mobile App free

Pavitra Lokesh, Naresh marriage

ಆದರೆ, ಇವೆಲ್ಲವೂ ಖಾಸಗಿ ಬದುಕಿನ ವಿಚಾರವಲ್ಲ, ಬದಲಿಗೆ ತಮ್ಮಿಬ್ಬರ ಲವ್‌ ಸ್ಟೋರಿ ಆಧರಿಸಿದ ಸಿನಿಮಾದ ದೃಶ್ಯಗಳು ಎಂದು ನಿರ್ದೇಶಕ ಎಂಎಸ್‌ ರಾಜು ಹೇಳಿದ್ದಾರೆ. ಅವರಿಬ್ಬರೂ ತಮ್ಮ ಪಾತ್ರಗಳನ್ನು ಮಾಡಿದ್ದು ನರೇಶ್‌ ಇದರ ನಿರ್ಮಾಪಕರು ಕೂಡ. ಚಿತ್ರಕ್ಕೆ ಸೆಕೆಂಡ್‌ ಇನ್ನಿಂಗ್ಸ್‌ ಎಂದು ಹೆಸರಿಡಲಾಗಿದ್ದು ಶೀಘ್ರದಲ್ಲೇ ನರೇಶ್‌ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ವಿಚ್ಛೆದಿತ ಖ್ಯಾತ ನಟನೊಂದಿಗೆ ಪತಿ ಕಳೆದುಕೊಂಡ ಖ್ಯಾತ ನಟಿಯ ಮದುವೆ: ಧನುಷ್,ಮೀನಾ ಮದುವೆ ಬಗ್ಗೆ ಸ್ಪೋಟಕ ಮಾಹಿತಿ..!

Ramya Raghupathi and Naresh

ಇನ್ನು, ನಟ ನರೇಶ್‌ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರೊಂದಿಗೆ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ಹೊಂದಿದ್ದು, ಇವರಿಬ್ಬರ ಸಂಬಂಧದಲ್ಲಿ ಸಾಕಷ್ಟು ಬಿರುಕು ಬಂದ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ನರೇಶ್ ಮತ್ತು ಪವಿತ್ರಾ ನಡುವೆ ಸಂಬಂಧವಿರುವ ವಿಚಾರ ಬೆಳಕಿಗೆ ಬಂದಿತ್ತು.

ಇದನ್ನು ಓದಿ: ವೀಕೆಂಡ್ ವಿತ್ ರಮೇಶ್​ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್

1500 ಕೋಟಿ ಆಸ್ತಿ ಕಬಳಿಸಲು ನಟಿ ಪವಿತ್ರಾ ಲೋಕೇಶ್ Love ಟ್ರ್ಯಾಕ್‌:

Pavitra Lokesh, Naresh, Suchendra prasad

ಅಷ್ಟೇ ಅಲ್ಲ, ನಟಿ ಪವಿತ್ರಾ ಲೋಕೇಶ್ ಮಾಜಿ ಪತಿ ನಟ, ನಿರ್ದೇಶಕ ಸಚೇಂದ್ರ ಪ್ರಸಾದ್‌ ಅವರು, ಪವಿತ್ರಾ ಐಷಾರಾಮಿ ಜೀವನ ಇಷ್ಟಪಡುತ್ತಾಳೆ, ಆ ಜೀವನಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ ಎಂದು ಹೇಳಿದ್ದಾರೆ. ಅವಕಾಶವಾದಿಯಾಗಿರುವ ಪವಿತ್ರಾ, ತೆಲುಗು ನಟ ನರೇಶ ಅವರ 1500 ಕೋಟಿ ಆಸ್ತಿ ಕಬಳಿಸಲು Love ಟ್ರ್ಯಾಕ್‌ ಶುರುಮಾಡಿದ್ದಾಳೆ. ಹಣಕ್ಕಾಗಿ ಪವಿತ್ರಾ ನನಗೆ ಡಿವೋರ್ಸ್‌ ನೀಡಿದ್ದು,.ಇದು ನರೇಶ್‌ಗೆ ಶೀಘ್ರದಲ್ಲೇ ಅರ್ಥವಾಗಲಿದೆ ಎಂದು ನಟ, ನಿರ್ದೇಶಕ ಸಚೇಂದ್ರ ಪ್ರಸಾದ್‌ ಅವರು ಪವಿತ್ರ ವಿರುದ್ಧ ಕಿಡಿಕಾರಿದ್ದರು.

ಇದನ್ನು ಓದಿ: ಯುವಶಕ್ತಿ ಯೋಜನೆಗೆ ಇಂದು ಸಿಎಂ ಚಾಲನೆ: ಈ ಯೋಜನೆಯಡಿ 10 ಸಾವಿರ ರೂ ನಿಧಿ, 5 ಲಕ್ಷ ಸಾಲಕ್ಕೆ,1 ಲಕ್ಷ ಸಬ್ಸಿಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.