ಎಟಿಎಂನಿಂದ ರೇಷನ್ (ATM Ration): ಮೊದಲೆಲ್ಲಾ ಬ್ಯಾಂಕಿನಲ್ಲಿ ಹಣ ಹಾಕಲು ಅಥವಾ ಹಣವನ್ನು ಹಿಂಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು.ಆದರೆ, ಕಾಲಾಂತರದಲ್ಲಿ ಎಟಿಎಂ ಸೌಲಭ್ಯ ಪರಿಚಯಿಸಲಾಯಿತು. ಎಟಿಎಂನಿಂದಾಗಿ ಜನರ ಬ್ಯಾಂಕಿಂಗ್ ಕೆಲಸ ಬಹುಮಟ್ಟಿಗೆ ಕಡಿಮೆ ಆಗಿದೆ. ಅದೇ ರೀತಿ, ಇದೀಗ ಪಡಿತರ ಚೀಟಿದಾರರು(ration card holders) ಸಹ ತಿಂಗಳ ಪಡಿತರವನ್ನು ಎಟಿಎಂನಿಂದ ರೇಷನ್ (ATM Ration) ಪಡೆಯುವ ಸಮಯ ಬಂದಿದ್ದು, ಪಡಿತರ ಚೀಟಿದಾರರಿಗೆ ಇದು ಒಳ್ಳೆಯ ಸುದ್ದಿಯಾಗಿದೆ
ಹೌದು, ಉತ್ತರ ಪ್ರದೇಶದಲ್ಲಿ ಪಡಿತರ ATMಗಳು ‘ಅನ್ನಪೂರ್ತಿ’(Annapurti)ಎಂಬ ಹೆಸರಿನಲ್ಲಿ ಲಭ್ಯವಿದ್ದು, ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಮೂರು ಎಟಿಎಂಗಳನ್ನು ಆರಂಭಿಸಿದೆ. ಕೇವಲ 30 ಸೆಕೆಂಡ್‌ಗಳಲ್ಲಿ ಅಕ್ಕಿ ಮತ್ತು ಗೋಧಿಯನ್ನು ಈ ವ್ಯವಸ್ಥೆ ಮೂಲಕ ಪಡೆಯಬಹುದು.
ಇದನ್ನು ಓದಿ: ಕರ್ನಾಟಕದಲ್ಲಿ ಎಷ್ಟು ರೀತಿಯ ಪಡಿತರ ಚೀಟಿಗಳಿವೆ, ಬಿಪಿಎಲ್ ಕಾರ್ಡ್ ಪಡೆಯುವುದು ಹೇಗೆ
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ಉಚಿತ
ಈ ಎಟಿಎಂ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಯಂತ್ರಕ್ಕೆ ಈ ಮೊದಲೇ ಎಷ್ಟು ಪ್ರಮಾಣದಲ್ಲಿ ಅಕ್ಕಿ ನೀಡಬೇಕೆಂಬುದು ಹಾಗೂ ಪಡಿತರ ಚೀಟಿದಾರರ ಮಾಹಿತಿ ದಾಖಲಾಗಿರುತ್ತದೆ. ಅದರಂತೆ, ವ್ಯಕ್ತಿಗೆ ಇಷ್ಟೇ ಆಹಾರ ದಾನ್ಯ ಎಂದು ನಿಗದಿ ಮಾಡಿ ಎಟಿಎಂಗಳಲ್ಲಿ ನೀಡಲಾಗುವುದು. ಪಡಿತರ ಚೀಟಿದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಪಡಿತರ ಚೀಟಿಯಲ್ಲಿ (ration Card) ನಮೂದಿಸಿರುವ ಸಂಖ್ಯೆಯನ್ನು ನಮೂದಿಸುವ ಮೂಲಕ ಆಹಾರ ಧಾನ್ಯವನ್ನು ಪಡೆಯಬಹುದಾಗಿದೆ.
ಇದನ್ನು ಓದಿ: ಮಾರ್ಚ್ 31 ಡೆಡ್ ಲೈನ್: SMS ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಇನ್ನು, ಈ ಯಂತ್ರವು ಸಂಪೂರ್ಣವಾಗಿ ಟಚ್ ಸ್ಕ್ರೀನ್ ಆಗಿರುತ್ತದೆ. ಇದರಲ್ಲಿ ಬಯೋಮೆಟ್ರಿಕ್ ಸೌಲಭ್ಯವೂ ಇರಲಿದ್ದು, ಎಟಿಎಂನಿಂದ ರೇಷನ್ ಪಡೆಯಲು ವಿಶೇಷ ಕೋಡ್ ಅಗತ್ಯವಿದ್ದು ಸಂಬಂಧಪಟ್ಟವರಿಗೆ ವಿಶೇಷ ಕೋಡ್ ಇರುವ ಕಾರ್ಡ್ ನೀಡಲಾಗುವುದು.
ಇದನ್ನು ಓದಿ: ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಕಬ್ಜ ಸಿನಿಮಾ, ಹಳೇ ದಾಖಲೆಗಳು ಧೂಳಿಪಟ