ಕನ್ನಡದ ಖ್ಯಾತ ನಟಿಯ ಸೀಕ್ರೆಟ್‌ ಮದುವೆ; ತೆಲುಗು ನಟನ ಜೊತೆ ನಾಲ್ಕನೇ ಮದುವೆಯಾದ ಪವಿತ್ರಾ..!?

ಇತ್ತೀಚೆಗೆ ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧ ಭಾರೀ ಚರ್ಚೆಯಾಗಿದ್ದು, ಇದೀಗ ನಟ ನರೇಶ್ ಮತ್ತು ನಟಿ ಪವಿತ್ರಾ ಹೊಸ ಜೀವನ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಹೌದು, ಹಿರಿಯ…

ಇತ್ತೀಚೆಗೆ ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧ ಭಾರೀ ಚರ್ಚೆಯಾಗಿದ್ದು, ಇದೀಗ ನಟ ನರೇಶ್ ಮತ್ತು ನಟಿ ಪವಿತ್ರಾ ಹೊಸ ಜೀವನ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

ಹೌದು, ಹಿರಿಯ ನಟರಾದ ನರೇಶ್-ಪವಿತ್ರ ಹೊಸ ಜೀವನ ಆರಂಭಿಸಿದ್ದಾರೆ ಎಂದು ವರದಿಯಾಗಿದ್ದು, ಇತ್ತೀಚೆಗಷ್ಟೇ ಮೈಸೂರಿನಲ್ಲಿ ಕೆಲ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರು ಮದುವೆಯಾದ ಸುದ್ದಿಯಿದೆ. ಕೆಲವು ಸಮಯದಿಂದ ಪವಿತ್ರಾ ಅವರೊಂದಿಗೆ ಸಂಬಂಧದಲ್ಲಿದ್ದ ನರೇಶ್, ಡಿ.31 ರಂದು ಹೊಸ ವರ್ಷದಲ್ಲಿ ಹೊಸ ಜೀವನಕ್ಕೆ ಪ್ರವೇಶಿಸಲಿದ್ದೇನೆ ಎಂದು ಕಿಸ್ಸಿಂಗ್‌ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.

Ramya Raghupathi and Naresh

Vijayaprabha Mobile App free

ಇದನ್ನು ಓದಿ: ನರೇಶ್-ಪವಿತ್ರಾ 50 ಕೋಟಿ ರೂ ಡೇಟಿಂಗ್ ಅಗ್ರಿಮೆಂಟ್..!: ಮತ್ತೆ ಸುದ್ದಿಯಾದ ಖ್ಯಾತ ನಟಿ ಪವಿತ್ರಾ ಲೋಕೇಶ್

ಇನ್ನು, ಟಾಲಿವುಡ್ ಹಿರಿಯ ನಟ ನರೇಶ್‌ ತಮ್ಮ3ನೇ ಪತ್ನಿ ರಮ್ಯಾ ರಘುಪತಿ ಅವರೊಂದಿಗೆ ಭಿನ್ನಾಭಿಪ್ರಾಯ ಮತ್ತು ವಿವಾದಗಳನ್ನು ಹೊಂದಿದ್ದಾರೆ. ಇವರಿಬ್ಬರ ಸಂಬಂಧದಲ್ಲಿ ಸಾಕಷ್ಟು ಬಿರುಕು ಬಂದ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದು, ಈ ವೇಳೆ ನರೇಶ್ ಮತ್ತು ಪವಿತ್ರಾ ನಡುವೆ ಸಂಬಂಧವಿರುವ ವಿಚಾರ ಬೆಳಕಿಗೆ ಬಂದಿತ್ತು.

ತೆಲುಗು ನಟನ ಜೊತೆ ನಾಲ್ಕನೇ ಮದುವೆ:

ನಟ ನರೇಶ್. ಇವರು ಈಗಾಗಲೇ ಮೂರು ಮದುವೆ ಮಾಡಿಕೊಂಡು ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಈಗ ನಟಿ ಪವಿತ್ರ ಲೋಕೇಶ್​​ ಅವರೊಂದಿಗೆ ನಾಲ್ಕನೇ ಮದುವೆಯಾಗಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ನರೇಶ್-ರಮ್ಯಾ-ಪವಿತ್ರಾ ಕೇಸಿಗೆ ಟ್ವಿಸ್ಟ್; ನರೇಶ್ ಮನೆಯಲ್ಲಿ ರಮ್ಯಾ; ನಟಿ ಪವಿತ್ರಾ ಲೋಕೇಶ್ ಎಲ್ಲಿ?

ಹೌದು, ನಟಿ ಪವಿತ್ರಾ ಲೋಕೇಶ್ ಈಗಾಗಲೇ 2007ರಲ್ಲಿ ಖ್ಯಾತ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರನ್ನು 2ನೇ ವಿವಾಹವಾಗಿದ್ದು, ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ.

ಇದನ್ನು ಓದಿ: ಮದುವೆಗೂ ಮುನ್ನ ನಟಿ ರಮ್ಯಾಗೆ ಗರ್ಭಪಾತ?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.