Tomato: ಟೊಮೆಟೊ ಬೆಲೆ ಇಳಿಕೆ; ಆದರೆ ತರಕಾರಿ ಬೆಲೆ ಏರಿಕೆ?!

Vijayaprabha

Tomato: ಅನೇಕ ರಾಜ್ಯಗಳು ಸೇರಿದಂತೆ ದೆಹಲಿ-ಎನ್‌ಸಿಆರ್‌ನಲ್ಲಿ ಟೊಮೆಟೊ ಅಗ್ಗವಾಗಿದ್ದು, ಟೊಮೆಟೊ ಬೆಲೆ ಕೆಜಿಗೆ 100-120 ರೂ.ಗೆ ತಲುಪಿದೆ. ಆದರೆ, ತರಕಾರಿಗಳ ಬೆಲೆಯೂ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಇದೀಗ ಕ್ರಮೇಣ ಪರಿಸ್ಥಿತಿ ಸಹಜವಾಗತೊಡಗಿದೆ.

ಈ ಹಿಂದೆ ಟೊಮೆಟೊ ಕೆಜಿಗೆ 200-250-300 ರೂ.ಗೆ ಮಾರಾಟವಾಗುತ್ತಿತ್ತು.ಈಗ ಅದೇ ಟೊಮೆಟೊ ಕೆಜಿಗೆ 100 ರೂ.ಗೆ ತಲುಪಿದೆ. ಇನ್ನು, ತರಕಾರಿಗಳ ಬೆಲೆ ಏರಿಕೆ ಕಂಡಿದೆ. ಹಸಿರು ತರಕಾರಿಗಳ ಬೆಲೆ ಕೆಜಿಗೆ 20 ರೂ.ನಿಂದ 40 ರೂ.ಗೆ ಏರಿಕೆಯಾಗಿದೆ.

ಇದನ್ನು ಓದಿ: ಇಂದು ಈ ಜಿಲ್ಲೆಗಳಲ್ಲಿ ಮಳೆ? ಇಲ್ಲಿದೆ ಹವಾಮಾನ ವರದಿ..

Tomato: 20-30 ರೂ.ಗಳಿಗೆ ಸಿಗುತ್ತಾ ಟೊಮೆಟೊ?

ಉತ್ತರ ಭಾರತದ ಅತಿದೊಡ್ಡ ಟೊಮೆಟೊ ಮಾರುಕಟ್ಟೆಯಾದ ನಾಸಿಕ್‌ ಮಾರುಕಟ್ಟೆ ಆಗಸ್ಟ್‌ 15ರ ಬಳಿಕ ಆರಂಭವಾಗುವ ಸಾಧ್ಯತೆಗಳಿವೆ. ಆಗ ದರ ಕ್ರೇಟ್‌ಗೆ 200-500 ರೂ.ಗಳಿಗೆ ಕುಸಿಯುವ ಸಾಧ್ಯತೆಗಳಿದ್ದು, ಗ್ರಾಹಕರಿಗೆ 20-30 ರೂ.ಗಳಿಗೆ ಟೊಮೆಟೊ ದೊರೆಯಲಿದೆ ಎನ್ನುತ್ತಾರೆ ತರಕಾರಿ ಮಂಡಿ ಮಾಲೀಕರು.

ಅಂಗಡಿಗಳಲ್ಲಿ ಬಂಗಾರ ತೂಕ ಹಾಕಿದಂತೆ ಟೊಮೆಟೊ ತೂಕ ಹಾಕುತ್ತಿದ್ದರು. ಈಗ ಸ್ವಲ್ಪ ಬೆಲೆ ಕಡಿಮೆ ಆಗಿರುವ ಕಾರಣ ನಿರಾಳವಾಗಿ ಖರೀದಿಸಬಹುದಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ಮಾಡಿ

ಇದನ್ನು ಓದಿ: ಖಾತೆಗೆ 2000ರೂ, ಕೆಲವೆ ದಿನ ಬಾಕಿ; ಗೃಹಲಕ್ಷ್ಮೀ ಯೋಜನೆಗೆ ವಾಟ್ಸಾಪ್‌ನಲ್ಲಿ ಅರ್ಜಿ ಸಲ್ಲಿಸಿ!

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version