Bengaluru bandh: ಇಂದು ಬೆಂಗಳೂರು ಬಂದ್, ಏನಿರುತ್ತೆ, ಏನಿರಲ್ಲ? ಯಾರಿಗೆಲ್ಲ ಸಮಸ್ಯೆ…!

Vijayaprabha

Bengaluru bandh: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ 32 ಖಾಸಗಿ ವಾಹನಗಳ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿವೆ. ಪ್ರತಿಭಟನೆಯಲ್ಲಿ 3 ಲಕ್ಷ ಆಟೋ ಹಾಗೂ 5000 ಶಾಲಾ ಬಸ್ ಚಾಲಕರು ಸೇರಿ ಹಲವರು ಭಾಗಿಯಾಗಲಿದ್ದು, ಒಟ್ಟು 7 ಲಕ್ಷಕ್ಕೂ ಹೆಚ್ಚು ವಾಹನಗಳು ಸೇವೆಯನ್ನು ಸ್ಥಗಿತಗೊಳಿಸಲಿವೆ. ಮೆಜೆಸ್ಟಿಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ತೆರಳುವ ಪ್ರತಿಭಟನಾಕಾರರು, ಶಕ್ತಿ ಯೋಜನೆಯ ನಷ್ಟವನ್ನು ಭರಿಸುವಂತೆ ಆಗ್ರಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Bengaluru bandh

ಬೆಂಗಳೂರು ಬಂದ್‌ ಗೆ ಕಾರಣ, ಬಂದ್‌ ಪ್ಲಾನ್‌ ಏನು?

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ವಿರೋಧಿಸಿ ಬೆಂಗಳೂರಿನ ಖಾಸಗಿ ಸಾರಿಗೆ ಸಂಸ್ಥೆಯವರು ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಸಾರಿಗೆ ಒಕ್ಕೂಟಗಳ ಬಂದ್‌ ಇಂದು ನಡೆಯಲಿದ್ದು 36 ಸಂಘಟನೆಗಳು ವಿಭಿನ್ನ ಪ್ಲಾನ್‌ ಮಾಡಿಕೊಂಡಿವೆ.

ಬೆಂಗಳೂರು ನಗರದೊಳಗೆ ಬೃಹತ್ ಮೆರವಣಿಗೆಗೆ ಪ್ಲ್ಯಾನ್ ಮಾಡಿರುವ ಸಂಘನೆಗಳು ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ ಮಾಡಲಿವೆ. ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ ಮಾಡಲಾಗಿದೆ. ಯಾವುದೇ ವಾಹನಗಳನ್ನು ರಸ್ತೆಗಿಳಿಸದಂತೆ ಸೂಚಿಸಲಾಗಿದೆ.

constipation digestive problems: ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗೆ ಬೆಲ್ಲ, ಬಾಳೆಹಣ್ಣು ಉತ್ತಮ ಪರಿಹಾರ!

Bengaluru bandh: ಬೇಡಿಕೆಗಳು ಏನು?

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಂದ್ ಗೆ ಕರೆ ನೀಡಿದ್ದು, ಬೈಕ್ ಟ್ಯಾಕ್ಸಿಗಳಿಗೆ ನಿಷೇಧ, ಚಾಲಕರಿಗೆ 10,000 ರೂ., ಬೆಂಬಲ ನಿಗಮ, ಕಡಿಮೆ ಬಡ್ಡಿದರದ ಸಾಲ, ವೈಟ್ ಬೋರ್ಡ್ ವಾಹನಗಳ ತಡೆ, ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್‌ಗಳನ್ನು ನಿಷೇಧಿಸಬೇಕು, ಅಧಿಕ ಬಡ್ಡಿ ವಿಧಿಸುವ ಹಣಕಾಸು ಕಂಪನಿಗಳ ಮೇಲೆ ಕಡಿವಾಣ ಹಾಕಬೇಕು.

Dina bhavishya: ಈ ರಾಶಿಯವರು ಇಂದು ರಹಸ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರಿ…!

ಏನಿರುತ್ತೆ, ಏನಿರಲ್ಲ?

  • ಅಲಭ್ಯ: ವಿಮಾನ ನಿಲ್ದಾಣಕ್ಕೆ ತೆರಳುವ ಟ್ಯಾಕ್ಸಿಗಳು, ಶಾಲಾ ಬಸ್ ಸೇರಿದಂತೆ ಖಾಸಗಿ ಬಸ್ ಗಳು, ಕ್ಯಾಬ್ ಗಳು, ಆಟೋ ಹಾಗೂ ಸರಕು ಸಾಗಣೆ ವಾಹನಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ. ಇನ್ನು ಹೊರ ಜಿಲ್ಲೆಗಳಿಂದ ಮಹಾನಗರ ಪ್ರವೇಶಿಸುವ ವಾಹನಗಳಿಗೆ ತಡೆ ಬೀಳುವ ಸಾಧ್ಯತೆ ಇದೆ.
  • ಲಭ್ಯ: KSRTC, BMTC, ನಮ್ಮ ಮೆಟ್ರೋ, ಖಾಸಗಿ ಆಂಬುಲನ್ಸ್ ಸೇವೆ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳು ಸಿಗಲಿವೆ.

ಬೆಂಗಳೂರು ಬಂದ್: ಸಂಚಾರ ಬದಲಾವಣೆ

  • ಖೋಡೆ ವೃತ್ತಕ್ಕೆ ಬರುವ ವಾಹನಗಳು ಆರ್.ಆರ್.ಜಂಕ್ಷನ್ ಮೂಲಕ ಮಲ್ಲೇಶ್ವರಂ ತಲುಪಬೇಕಿದೆ.
  • ಗೂಡ್ ಶೆಡ್ ರಸ್ತೆಯ ವಾಹನಗಳು ಬಿ.ಟಿ.ರಸ್ತೆ, ಸುಜಾತ ಮುಖೇನ ತೆರಳಬೇಕಿದೆ.
  • ಆನಂದರಾವ್ ವೃತ್ತದ ವಾಹನಗಳು ಹಳೆ ಜೆಡಿಎಸ್ ಕಚೇರಿ & ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
  • ಮೈಸೂರು ಬ್ಯಾಂಕ್ ಕಡೆಯಿಂದ ಬರುವ ವಾಹನಗಳು ಪ್ಯಾಲೇಸ್ ರಸ್ತೆ, ಮಹಾರಾಣಿ ಕಾಲೇಜು ಅಂಡರ್ ಪಾಸ್, ಬಸವೇಶ್ವರ ಸರ್ಕಲ್ ಮುಖೇನ ಸಚರಿಸಬೇಕಿದೆ.

Jawaan Collection: ಜವಾನ್ ಸಿನಿಮಾದಿಂದ ಹೊಸ ದಾಖಲೆ, ಶಾರುಖ್ ಸರಿಸಾಟಿ ಯಾರು ಇಲ್ಲ!

ಯಾರಿಗೆಲ್ಲ ಸಮಸ್ಯೆ

ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ ಗೆ ಮುಂದಾಗಿದ್ದು, ಈ ಹಿನ್ನೆಲೆ ಇಂದು ಆಟೋ, ಕ್ಯಾಬ್, ಖಾಸಗಿ ಬಸ್ಸುಗಳು, ಇತರೆ ಖಾಸಗಿ ವಾಹನಗಳು ರಸ್ತೆಗಿಳಿಯುವುದಿಲ್ಲ. ಈ ಹಿನ್ನೆಲೆ ಏರ್ಪೋರ್ಟ್ ಗೆ ತೆರಳುವ, ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವವರಿಗೆ ಮತ್ತು ಖಾಸಗಿ ವಾಹನಗಳನ್ನು ಅವಲಂಬಿಸಿರುವವರಿಗೆ ಹೆಚ್ಚು ತೊಂದರೆಯಾಗಲಿದೆ. ಅಲ್ಲದೆ ಯಾವುದೇ ಗೂಡ್ಸ್ ವಾಹನಗಳೂ ಸಿಗದೇ ಇರಬಹುದು. ಇಂದು ಒಟ್ಟು 5 ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿಯದಿರುವ ಸಾಧ್ಯತೆ ಇದೆ.

PM Jan Dhan Yojana: ಅಕೌಂಟ್ ನಲ್ಲಿ ಹಣ ಇಲ್ಲದಿದ್ದರೂ, ರೂ.10 ಸಾವಿರದವರೆಗೆ ವಿತ್ ಡ್ರಾ..!

ಶಾಲೆಗಳಿಗೆ ರಜೆ ಘೋಷಣೆ

ಇಂದು ಖಾಸಗಿ ಸಾರಿಗೆ ಒಕ್ಕೂಟ ಬಂದ್​ಗೆ ಕರೆ ನೀಡಿದ್ದು, ಈ ಬಂದ್‌ಗೆ ಶಾಲಾ ವಾಹನಗಳ ಮಾಲೀಕರೂ ಬೆಂಬಲ ನೀಡಿದ್ದಾರೆ. ಹೀಗಾಗಿ ಶಾಲೆಗೆ ಬರಲು ಮಕ್ಕಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆರ್ಕಿಡ್‌ ಸೇರಿದಂತೆ 6-7 ಶಾಲೆಗಳು ರಜೆ ಘೋಷಿಸಿದ್ದು, ಬಹುತೇಕ ಖಾಸಗಿ ಶಾಲೆಗಳು ರಜೆ ಘೋಷಿಸಿವೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version