ಬೆಂಗಳೂರು-ಅರಸೀಕೆರೆ ಮಾರ್ಗದ ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್‌ನಲ್ಲಿ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ರೈಲುಗಳ ಸೇವೆಯಲ್ಲಿ ಬದಲಾವಣೆ, ನಿಯಂತ್ರಣ ಹಾಗೂ ಭಾಗಶಃ ರದ್ದು ಮಾಡಲಾಗಿದೆ ನೈಋತ್ಯ ರೈಲ್ವೆ ತಿಳಿಸಿದೆ.
ಜ.2 ಮತ್ತು 9ರಂದು ಬೆಂಗಳೂರು-ಧಾರವಾಡ ಸಿದ್ಧಗಂಗಾ ಸೂಪರ್ ಫಾಸ್ಟ್ ಎಕ್ಸಪ್ರೆಸ್ ಪ್ರೆಸ್ (12725), ಬೆಂಗಳೂರು-ಅರಸೀಕೆರೆ ನಿಲ್ದಾಣಗಳ ನಡುವೆ, ಧಾರವಾಡ-ಬೆಂಗಳೂರು ಸಿದ್ಧಗಂಗಾ ಎಕ್ಸ್‌ಪ್ರೆಸ್ (12726) ಅರಸೀಕೆರೆ-ಬೆಂಗಳೂರು ನಿಲ್ದಾಣಗಳ ನಡುವೆ ಸಂಚಾರ ರದ್ದುಗೊಳಿಸಲಾಗಿದೆ.
ಜ.2 ಮತ್ತು 9ರಂದು ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಿಕ್ಕಮಗಳೂರು-ಯಶವಂತಪುರ (16239), ಯಶವಂತಪುರ-ಚಿಕ್ಕಮಗಳೂರು (16240), ತುಮಕೂರು-ಬೆಂಗಳೂರು-ತುಮಕೂರ ಮೆಮು ಸ್ಪೆಷಲ್ (06576/75), ಯಶವಂತಪುರ -ಯಶವಂತಪುರ (16579/80) ರೈಲುಗಳ ಸಂಚಾರ ತಾತ್ಕಾಲಿಕ ರದ್ದಾಗಲಿದೆ.
ಮಾರ್ಗ ಬದಲಾವಣೆ
ಜ.1 ಮತ್ತು 8ರಂದು ವಾಸ್ಕೋ ಡ ಗಾಮಾ-ಯಶವಂತಪುರ (17310) ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರ ತಲುಪಲಿದೆ. ಮೈಸೂರು-ವಾರಾಣಾಸಿ (226870) ಹಾಗೂ ಯಶವಂತಪುರ-ಜೈಪುರ (20667), ಮೈಸೂರು-ಉದಯಪುರ ಸಿಟಿ (19668), ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (17326) ರೈಲುಗಳು ಜ.2 ಮತ್ತು 9ರಂದು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದೆ.
ರೈಲುಗಳ ನಿಯಂತ್ರಣ
ಡಿ 31 ಮತ್ತು ಜ.7ರಂದು ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ (16588) ರೈಲನ್ನು ಈ ಮಾರ್ಗ ಮಧ್ಯದಲ್ಲಿ 120 ನಿಮಿಷ ನಿಯಂತ್ರಿಸಲಾಗುವುದು.
ಜ.2 ಮತ್ತು 9ರಂದು ಯಶವಂತಪುರ-ಹಜರತ್ ನಿಜಾಮುದ್ದೀನ್ ದ್ವಿ-ಸಾಪ್ತಾಹಿಕ ಸೂಪರ್ ಫಾಸ್ಟ್ (12629) ರೈಲನ್ನು 50 ನಿಮಿಷ, ರೈಲು ಸಂಖ್ಯೆ 20651 ಬೆಂಗಳೂರು-ತಾಳಗುಪ್ಪ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ 10 ನಿಮಿಷ, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ (17325) 30 ನಿಮಿಷ ಮತ್ತು ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲು (07345) 120 ನಿಮಿಷ ನಿಯಂತ್ರಿಸಲಾಗುವುದು.
ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲು(17309) ಜ.2 ಮತ್ತು 9ರಂದು ಯಶವಂತಪುರದಿಂದ 30 ನಿಮಿಷ ತಡವಾಗಿ ಹೊರಡಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.