ಇಂದು WPL 2025 ಫೈನಲ್ಸ್: ಮುಂಬೈ ಮತ್ತು ಡೆಲ್ಲಿ‌ ನಡುವೆ ಜಿದ್ದಾಜಿದ್ದಿನ ಕಾಳಗ

ಮಹಿಳಾ ಪ್ರೀಮಿಯರ್ ಲೀಗ್ (WPL) 2025 ಲೀಗ್ ನಾ ಕೊನೆಯ ಪಂದ್ಯವನ್ನು ತಲುಪಿದ್ದು ಇಂದು ಮುಂಬೈ ಮತ್ತು ಡೆಲ್ಲಿ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಮುಂಬೈ ಇಂಡಿಯನ್ಸ್ (MI) ನ್ಯಾಟ್ ಸಿವರ್-ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್…

ಮಹಿಳಾ ಪ್ರೀಮಿಯರ್ ಲೀಗ್ (WPL) 2025 ಲೀಗ್ ನಾ ಕೊನೆಯ ಪಂದ್ಯವನ್ನು ತಲುಪಿದ್ದು ಇಂದು ಮುಂಬೈ ಮತ್ತು ಡೆಲ್ಲಿ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ.

ಮುಂಬೈ ಇಂಡಿಯನ್ಸ್ (MI) ನ್ಯಾಟ್ ಸಿವರ್-ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್ ಅವರ ಉತ್ತಮ ಪ್ರದರ್ಶನದಿಂದ ಫೈನಲ್ ಪ್ರವೇಶಿಸಿದೆ. ಅವರ ಎದುರಾಳಿಗಳಾದ ಡೆಲ್ಲಿ ಕ್ಯಾಪಿಟಲ್ಸ್ (DC), ಪುರುಷ ಮತ್ತು ಮಹಿಳಾ ಲೀಗ್‌ಗಳಲ್ಲಿ ತಮ್ಮ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಮತ್ತು ತಮ್ಮ ಮೊದಲ WPL ಕಿರೀಟವನ್ನು ಪಡೆಯಲು ಉತ್ಸುಕರಾಗಿರಾಗಿದ್ದಾರೆ.

ಶನಿವಾರ ಬ್ರಬೋರ್ನ್ ಕ್ರೀಡಾಂಗಣದಲ್ಲಿ ರೋಮಾಂಚಕ ಹಣಾಹಣಿಗೆ ಸಜ್ಜಾಗಿರುವ ಫೈನಲ್ ಪಂದ್ಯವು ಉತ್ತಮ ಕ್ರಿಕೆಟ್‌ ಪಂದ್ಯಕ್ಕೆ ಸಾಕ್ಷಿಯಾಗಲಿದೆ, ಏಕೆಂದರೆ ಮುಂಬೈನ ಬ್ಯಾಟಿಂಗ್ ಫೈರ್‌ಪವರ್ ಡೆಲ್ಲಿಯ ಅಸಾಧಾರಣ ಬೌಲಿಂಗ್ ಪಡೆಯ ದಾಳಿಯನ್ನು ಎದುರಿಸುತ್ತಿದೆ.

Vijayaprabha Mobile App free

ಸೈವರ್-ಬ್ರಂಟ್ ಮತ್ತು ಮ್ಯಾಥ್ಯೂಸ್ ಜೋಡಿ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆ. ಸೈವರ್-ಬ್ರಂಟ್ 493 ರನ್ ಗಳಿಸಿದ್ದಾರೆ ಮತ್ತು 9 ವಿಕೆಟ್‌ಗಳನ್ನು ಪಡೆದಿದ್ದಾರೆ, ಬ್ಯಾಟಿಂಗ್ ಮತ್ತು ಬಾಲ್ ಎರಡರಲ್ಲೂ ಪಂದ್ಯ ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮ್ಯಾಥ್ಯೂಸ್ 17 ವಿಕೆಟ್‌ಗಳೊಂದಿಗೆ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಬ್ಯಾಟಿಂಗ್‌ನಲ್ಲಿ 304 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆ ತಂಡವು ಸರ್ವತೋಮುಖ ಉತ್ತಮ ಪ್ರದರ್ಶನದಿಂದ 2ನೇ ಬಾರಿಗೆ ಫೈನಲ್ಸ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಂತಕಥೆ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ಚೊಚ್ಚಲ WPL ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಈಗಾಗಲೇ ಶ್ರೇಷ್ಠ ನಾಯಕಿಯರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಲ್ಯಾನಿಂಗ್, ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ತನ್ನ ಶ್ರೇಷ್ಠ ವೃತ್ತಿಜೀವನಕ್ಕೆ WPL ಟ್ರೋಫಿಯನ್ನು ಸೇರಿಸಲು ದೃಢನಿಶ್ಚಯ ಹೊಂದಿದ್ದಾರೆ.

DC ಪ್ಲೇಯಿಂಗ್ 11 (ಸಂಭಾವ್ಯ): ಮೆಗ್ ಲ್ಯಾನಿಂಗ್ (C), ಶಫಾಲಿ ವರ್ಮಾ, ಜೆಸ್ ಜೊನಾಸ್ಸೆನ್, ಜೆಮಿಮಾ ರಾಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ಸಾರಾ ಬ್ರೈಸ್ (wk), ನಿಕಿ ಪ್ರಸಾದ್, ಮಿನ್ನು ಮಣಿ, ಶಿಖಾ ಪಾಂಡೆ, ಟೈಟಾಸ್ ಸಾಧು/ಎನ್ ಚರಾನಿ

MI ಪ್ಲೇಯಿಂಗ್ 11 (ಸಂಭಾವ್ಯ): ಹೇಲಿ ಮ್ಯಾಥ್ಯೂಸ್, ಅಮೆಲಿಯಾ ಕೆರ್, ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (C), ಅಮನ್ಜೋತ್ ಕೌರ್, ಯಾಸ್ತಿಕಾ ಭಾಟಿಯಾ (Wk), ಸಜೀವನ್ ಸಜನಾ, ಜಿ ಕಮಲಿನಿ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್ಸೋಡಿಯಾ.

ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್ ಸ್ಟಾರ್ ರಾತ್ರಿ 8 ಗಂಟೆಯಿಂದ ಆರಂಭಗೊಳ್ಳಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.