RCB for sale : IPL ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯ ಮಾಲೀಕರು ಬದಲಾಗುವುದು ಖಚಿತವಾಗಿದೆ.
ಹೌದು, ಮಾರ್ಚ್ 31, 2026ರೊಳಗೆ RCB ಫ್ರಾಂಚೈಸಿಯನ್ನು ಮಾರಾಟ ಮಾಡಲು UK ಮೂಲದ ಮದ್ಯದ ದೈತ್ಯ ಡಿಯಾಜಿಯೋ ಕಂಪೆನಿ ಮುಂದಾಗಿದ್ದು, ಈ ಬಗ್ಗೆ ಡಿಯಾಜಿಯೋ ಕಂಪೆನಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ)ಗೆ ಮಾಹಿತಿ ನೀಡಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ತನ್ನ ಹೂಡಿಕೆಯ ಕಾರ್ಯತಂತ್ರದ ಪರಿಶೀಲನೆ ನಡೆಸುತ್ತಿರುವುದಾಗಿ ಡಿಯಾಜಿಯೊ ದೃಢಪಡಿಸಿದೆ.
RCSPL ಪುರುಷರ IPL ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ RCB ತಂಡಗಳ ಮಾಲೀಕತ್ವವನ್ನು ಹೊಂದಿದೆ. RCB ಪುರುಷರ ತಂಡದ ಮೌಲ್ಯ ಸುಮಾರು 17 ಸಾವಿರ ಕೋಟಿ ರೂ. ಮತ್ತು ಮಹಿಳಾ ತಂಡದ ಮೌಲ್ಯ 3 ರಿಂದ 5 ಸಾವಿರ ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.




