2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಗ್ರೂಪ್ ಹಂತದ ಸೋಲಿನ ನಂತರ ಜೋಸ್ ಬಟ್ಲರ್ ಇಂಗ್ಲೆಂಡ್ ವೈಟ್-ಬಾಲ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಬಟ್ಲರ್ ನೇತೃತ್ವದ ಇಂಗ್ಲೆಂಡ್, ಐಸಿಸಿ ಏಕದಿನ ಪಂದ್ಯಗಳಲ್ಲಿ ಸತತ ಮೊದಲ ಸುತ್ತಿನ ಸೋಲುಗಳನ್ನು ಅನುಭವಿಸಿದೆ. ಮತ್ತು 2023ರ ಏಕದಿನ ವಿಶ್ವಕಪ್ನ ಲೀಗ್ ಹಂತದಲ್ಲೂ ಸೋತಿದೆ. ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ಸೋತ ನಂತರ ಇಂಗ್ಲೆಂಡ್ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದೆ.
ಮಾರ್ಚ್ 1 ರ ಶನಿವಾರ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಬಟ್ಲರ್ ಕೊನೆಯ ಬಾರಿಗೆ ತ್ರೀ ಲಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ನಾನು ಇಂಗ್ಲೆಂಡ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಇದು ನನಗೆ ಸರಿಯಾದ ನಿರ್ಧಾರ ಮತ್ತು ತಂಡಕ್ಕೆ ಸರಿಯಾದ ನಿರ್ಧಾರ ಎಂದು ಬಟ್ಲರ್ ಹೇಳಿದರು, ಬೇರೊಬ್ಬರು ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಿದರು. ಇಂಗ್ಲೆಂಡ್ ಪರ ಆಡುವುದನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.