ಮನಾಲಿಯಲ್ಲಿರುವ ತಮ್ಮ ಮನೆಗೆ 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿರುವುದಕ್ಕೆ ಕಂಗನಾ ರಣಾವತ್ ಆಘಾತ ವ್ಯಕ್ತಪಡಿಸಿದ್ದು, ಆಡಳಿತ ಪಕ್ಷದ ಆರ್ಥಿಕ ದುರುಪಯೋಗವನ್ನು ಟೀಕಿಸಿದ್ದಾರೆ.
ನಟಿ-ರಾಜಕಾರಣಿ ಕಂಗನಾ ರನೌತ್ ತಮ್ಮ ಮನಾಲಿ ಮನೆಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿರುವ ಬಗ್ಗೆ ಆಘಾತ ಮತ್ತು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ, ರಾಜ್ಯದ ಆಡಳಿತ ಪಕ್ಷದ ವಿರುದ್ಧ ನಟಿ ಬಲವಾದ ನಿಲುವು ತೆಗೆದುಕೊಂಡು, ಆರ್ಥಿಕ ದುರುಪಯೋಗದ ಆರೋಪ ಮಾಡಿದರು. ಆ ಮನೆಯಲ್ಲಿ ತಾನು ಹೆಚ್ಚು ಸಮಯ ಕಳೆಯುವುದಿಲ್ಲ ಆದರು ಮೊತ್ತವು ಹೇಗೆ ಇಷ್ಟೊಂದು ಹೆಚ್ಚಾಯಿತು ಎಂದು ಆಶ್ಚರ್ಯಪಟ್ಟರು.
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಕಂಗನಾ ಆರ್ಥಿಕ ದುರುಪಯೋಗಕ್ಕಾಗಿ ರಾಜ್ಯದ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ತನ್ನ ಆಘಾತವನ್ನು ವ್ಯಕ್ತಪಡಿಸಿದ ನಟಿ, “ಇಸ್ಸ್ ಮಹಿನೇ ಮೇರೆ ಮನಾಲಿ ಕಾ ಘರ್ ಕಾ 1 ಲಕ್ಷ ಬಿಜ್ಲಿ ಕಾ ಬಿಲ್ ಆಯಾ, ಜಹಾ ಮೈಂ ರೆಹತೀ ಭಿ ನಹೀ ಹೂಂ. ಇತ್ನಿ ದುರ್ದಶಾ ಕಿ ಹುಯಿ ಹೈ. ಹಮ್ ಪಧ್ತೇ ಹೈ ಔರ್ ಶರ್ಮಿಂದಗಿ ಹೋತೀ ಹೈ ಕೆ ಯೇ ಕ್ಯಾ ಮನೆಗೆ 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಡೆದಿದೆ. ಒಂದು ತಿಂಗಳು, ನಾನು ಅಲ್ಲಿ ಇಲ್ಲದಿದ್ದರೂ, ಅದನ್ನು ಓದಿ ಹತಾಶೆಗೊಂಡಿದ್ದೇನೆ ಮತ್ತು ಏನಾಗುತ್ತಿದೆ ಎಂದು ನಾಚಿಕೆಪಡುತ್ತಿದ್ದೇನೆ ಎಂದರು, ಆದರೂ ನಮಗಿನ್ನು ಅವಕಾಶವಿದೆ, ನೀವೆಲ್ಲರೂ ನನ್ನ ಸಹೋದರ ಸಹೋದರಿಯರೇ, ನೀವು ನೆಲದ ಮೇಲೆ ತುಂಬಾ ಕೆಲಸ ಮಾಡುತ್ತೀರಿ. ಇದು ನಮ್ಮೆಲ್ಲರ ಬಾಧ್ಯತೆಯಾಗಿದೆ, ಈ ದೇಶ, ಈ ರಾಜ್ಯದ ಪ್ರಗತಿಯ ಹಾದಿಯಲ್ಲಿ ನಾವು ಮುಕ್ತವಾಗಿ ಸಾಗಬೇಕು ಎಂದು ನಾನು ಹೇಳುತ್ತೇನೆ.
ಇದೀಗ ಇಡೀ ದೇಶದಲ್ಲಿ ಮೋದಿಯ ಅಲೆ ಇದೆ, ನಾವೆಲ್ಲಾರು ಕಾಂಗ್ರೆಸ್ ನ ದುರಾಡಳಿತದಿಂದ ಹಿಮಾಚಲವನ್ನು ರಕ್ಷಿಸಬೇಕು ಮತ್ತು ಅಭಿವೃದ್ಧಿಯತ್ತಾ ಸಾಗಿಸಬೇಕು ಎಂದು ಕಂಗನಾ ಹೇಳಿದರು.