ಕಾರವಾರ: ಹನಿಟ್ರ್ಯಾಪ್ ಯಾರ ಹತ್ತಿರ ಮಾಡಲು ಆಗುವುದಿಲ್ಲ, ಮಾಡಿಸಲೂ ಆಗುವುದಿಲ್ಲ, ನಾವು ಮಾಡುವ ತಪ್ಪಿಗೆ ನಾವೇ ಜವಾಬ್ದಾರರು ಹೊರತು ಯಾರೋ ಮಾಡಿಸಿದ್ದಾರೆ ಎನ್ನುವುದು ತಪ್ಪು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ನಗರದಲ್ಲಿ ಈ ಸಂಭಂದ ಮಾತನಾಡಿದ ಅವರು ಹನಿಟ್ರ್ಯಾಪ್ ಎನ್ನುವ ವಿಚಾರ ಟಿವಿಯಲ್ಲಿ ಪತ್ರಿಕೆಯಲ್ಲಿ ಇದು ಬರಬಾರದಿತ್ತು. ಯಾರನ್ನಾದರೂ ಕರೆದುಕೊಂಡು ಹೋಗಿ ಟ್ರ್ಯಾಪ್ ಮಾಡಲು ಸಾದ್ಯವೇ. ನಮ್ಮ ತಪ್ಪನ್ನ ನಾವು ಒಪ್ಪಿಕೊಳ್ಳಬೇಕಲ್ಲ. ಮಾತನಾಡುವ ಮೊದಲು ಯೋಚನೆ ಮಾಡಿ ಮಾತನಾಡಬೇಕಿತ್ತು ಎಂದರು.
ಹನಿಟ್ರ್ಯಾಪ್ ಆಗಿದೆ ಅಂತಾ ಆದರೆ ಯಾರು ಆಗಿದ್ದಾರೋ ಅವರಷ್ಟು ತಪ್ಪು ಯಾರು ಮಾಡಿಲ್ಲ ಏಂದಾಗುತ್ತದೆ. ಯತ್ನಾಳ್ ಹಿರಿಯ ಶಾಸಕರು, ಯಾರೇ ಚೀಟಿ ಕೊಟ್ಟರು ಅವರಿಗೆ ಬುದ್ದಿ ಇಲ್ಲವಾ. ಇವೆಲ್ಲಾ ಡ್ರಾಮ ಅವರ ಮೇಲೆ ಇವರು ಇವರ ಮೇಲೆ ಹಾಕುತ್ತಿದ್ದಾರೆ. ಚೀಟಿ ಕೊಡುವ ಮುಂಚೆ ಅವರಿಗೆ ಗೊತ್ತಿರಲಿಲ್ಲವೇ. ಅವರದ್ದೆ ಪಕ್ಷದ ಹಲವರು ಸ್ಟೇ ತಂದಿದ್ದಾರೆ ಯಾಕೆ, ಅದು ಹನಿ ಟ್ರ್ಯಾಪ್ ಅಲ್ಲವೇ ಎಂದು ಪ್ರಶ್ನಿಸಿದರು.
ಇನ್ನು ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಮಾತನಾಡಬಾರದಿತ್ತು. ಈ ವಿಚಾರ ಮಾದ್ಯಮದವರು, ಸಚಿವರು, ಎಲ್ಲರೂ ಬಿಡಬೇಕು, ಆಗ ಮಾತ್ರ ನಮಗೆ ಸಮಾಜದಲ್ಲಿ ಗೌರವ ಇರುತ್ತದೆ. ಜನ ಇಲ್ಲದಿದ್ದರೇ ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ ಎಂದು ಸಚಿವರು ಹೇಳಿದರು.
ಇನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಸಂವಿಧಾನ ಬದಲಾವಣೆ ಮಾಡಲೆಂದೇ ನಾವು ಬಂದಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಬಿಜೆಪಿ ಈ ಬಗ್ಗೆ ಯಾವು ನಿಲುವು ತೆಗೆದುಕೊಂಡಿತು ಎಂದು ತಿಳಿಸಲಿ ಎಂದು ಮಂಕಾಳ ವೈದ್ಯ ಹೇಳಿದರು.