ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು ‘ಹೆಣ್ಣೆಂದರೆ ಸಹನೆ, ಸಹಿಷ್ಣುತೆ, ಪ್ರೀತಿ, ತ್ಯಾಗ, ಮಮತೆಯ ಸಾಕಾರ ಮೂರ್ತಿ, ತಾಯಾಗಿ ಜನ್ಮ ಕೊಟ್ಟು, ಸಹೋದರಿಯಾಗಿ ಸಲಹಿ, ಹೆಂಡತಿಯಾಗಿ ಜೊತೆ ನಿಂತು, ಮಗಳಾಗಿ ಪೊರೆಯುವವಳು ಹೆಣ್ಣು.
ಅವಕಾಶ ದೊರೆತರೆ ಹೆಣ್ಣು ಏನೆಲ್ಲಾ ಸಾಧಿಸಬಲ್ಲಳು ಎಂಬುದು ಇಂದು ನಮ್ಮ ಕಣ್ಣ ಮುಂದಿದೆ.
ನಾಡಿನ ಸಮಸ್ತ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳು’ ಎಂದಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.