GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿಗೆ ಲಕ್ಷಾಂತರ ಓದುಗರನ್ನು ತಲುಪಿದ ವಿಜಯಪ್ರಭ.ಕಾಂ

ವಿಜಯಪ್ರಭ.ಕಾಂ: ಇಂದಿನ ಡಿಜಿಟಲ್ ಯುಗದ ಪೈಪೋಟಿಯಲ್ಲಿ ಸ್ವತಂತ್ರ ಪತ್ರಿಕೋದ್ಯಮ ನಡೆಸುವುದೆಂದರೆ ಸುಲಭದ ಮಾತಲ್ಲ. ದಿನಕ್ಕೊಂದರಂತೆ ನ್ಯೂಸ್‌ಪೊರ್ಟಲ್‌ ಹುಟ್ಟಿ ಅಷ್ಟೆ ಬೇಗ ಮರೆಯಾಗುತ್ತಿವೆ. ಆದರೆ ವಿಜಯಪ್ರಭ.ಕಾಂ ಲಕ್ಷಾಂತರ ಓದುಗರಿಗೆ ವಸ್ತುನಿಷ್ಠ ಮಾಹಿತಿಯನ್ನು ನೀಡುವಲ್ಲಿ ಸಫಲವಾಗಿದ್ದು, ಇದಕ್ಕೆ…

ವಿಜಯಪ್ರಭ.ಕಾಂ gni program vijyaprabha.com

ವಿಜಯಪ್ರಭ.ಕಾಂ: ಇಂದಿನ ಡಿಜಿಟಲ್ ಯುಗದ ಪೈಪೋಟಿಯಲ್ಲಿ ಸ್ವತಂತ್ರ ಪತ್ರಿಕೋದ್ಯಮ ನಡೆಸುವುದೆಂದರೆ ಸುಲಭದ ಮಾತಲ್ಲ. ದಿನಕ್ಕೊಂದರಂತೆ ನ್ಯೂಸ್‌ಪೊರ್ಟಲ್‌ ಹುಟ್ಟಿ ಅಷ್ಟೆ ಬೇಗ ಮರೆಯಾಗುತ್ತಿವೆ. ಆದರೆ ವಿಜಯಪ್ರಭ.ಕಾಂ ಲಕ್ಷಾಂತರ ಓದುಗರಿಗೆ ವಸ್ತುನಿಷ್ಠ ಮಾಹಿತಿಯನ್ನು ನೀಡುವಲ್ಲಿ ಸಫಲವಾಗಿದ್ದು, ಇದಕ್ಕೆ ಗೂಗಲ್ ನ್ಯೂಸ್ ಇನಿಶಿಯೇಟಿವ್ (GNI) ಹಾಗೂ ಮೀಡಿಯಾಲಜಿ ಸಾಫ್ಟ್‌ವೇರ್‌ನ ಸಹಯೋಗವು ಸಾಥ್‌ ನೀಡಿದೆ.

ಸದ್ಯ ವಿಜಯಪ್ರಭ.ಕಾಂ ಅತ್ಯಾಧುನಿಕ ವಿನ್ಯಾಸದ ರೂಪದಲ್ಲಿ ಓದುಗರನ್ನು ತಲುಪುತ್ತಿದ್ದು, ನಮ್ಮ ಡಿಜಿಟಲ್ ತಂತ್ರಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಗೂಗಲ್ ನ್ಯೂಸ್ ಇನಿಶಿಯೇಟಿವ್ ಕಾರ್ಯಕ್ರಮ ಅನುಕೂಲ ಮಾಡಿಕೊಟ್ಟಿದೆ.

ವಿಜಯಪ್ರಭ.ಕಾಂ ಯಶೋಗಾಥೆ

ವಿಜಯಪ್ರಭ.ಕಾಂ ಕನ್ನಡದ ಪ್ರಮುಖ ನ್ಯೂಸ್‌ ಪೋರ್ಟಲ್, ಗೂಗಲ್ ನ್ಯೂಸ್ ಇನಿಶಿಯೇಟಿವ್ ಕಾರ್ಯಕ್ರಮದ ಸಹಾಯದೊಂದಿಗೆ ಇಂದು ಕನ್ನಡದ ಪ್ರಮುಖ ಆನ್‌ಲೈನ್‌ ಸುದ್ದಿಸಂಸ್ಥೆಯಾಗಿ ರೂಪುಗೊಂಡಿದೆ. ಸದ್ಯ ವಿಜಯಪ್ರಭ.ಕಾಂ ಅತ್ಯಾಧುನಿಕ ವಿನ್ಯಾಸ ಹೊಂದಿದ್ದು, ಜತೆಗೆ Android ಹಾಗೂ IOS App storeಗಳಲ್ಲಿ ಲಭ್ಯವಿದೆ

Vijayaprabha Mobile App free

ಮೊದಲು, ವಿಜಯಪ್ರಭ.ಕಾಂ ತಂಡವು ಕೀವರ್ಡ್‌ಗಳು ಮತ್ತು ಗೂಗಲ್ ಟ್ರೆಂಡ್‌ಗಳ ಪ್ರಕಾರ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈಗ NCI ಉಪಕರಣದ ಸಹಾಯದಿಂದ ನಾವು ವೆಬ್‌ಸೈಟ್‌ನ ಲೈವ್ ಡೇಟಾ ಕೂಡ ವಿಶ್ಲೇಷಿಸಬಹುದು. ನಮ್ಮ ವೆಬ್‌ಸೈಟ್‌ನಲ್ಲಿ ಓದುಗರು ಯಾವ ಸುದ್ದಿಯನ್ನು ಹೆಚ್ಚು ಆಸಕ್ತಿಯಿಂದ ಓದುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ವಿಜಯಪ್ರಭ.ಕಾಂ ಓದುಗರ ಡೇಟಾವನ್ನು ಆಧರಿಸಿ ವಿಷಯವನ್ನು ಕಸ್ಟಮೈಸ್ ಮಾಡಲು ಮತ್ತು ವೈಯಕ್ತೀಕರಿಸಲು ಅನುಕೂಲವಾಗಿದೆ.

GNI ಸೂಚಿಸಿದ ವರದಿಗಳ ಆಧಾರದ ಮೇಲೆ, ನಾವು ನಮ್ಮ ವೆಬ್‌ಸೈಟ್‌ ನಲ್ಲಿ ಹಲವು ಬದಲಾವಣೆ ಮಾಡಿದ್ದೇವೆ, ಅದು ನಮ್ಮ ಸೈಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಓದುಗರ ತಲುಪಲು ಅನುಕೂಲಾಗಿದೆ. Google ನ AI ಮತ್ತು ಡೇಟಾ ಅನಾಲಿಟಿಕ್ಸ್ ಪರಿಕರಗಳನ್ನು ಬಳಸಿಕೊಂಡು, ವಿಜಯಪ್ರಭ.ಕಾಂ ತನ್ನ ಓದುಗರ ಆದ್ಯತೆಗಳು ಮತ್ತು ನಡವಳಿಕೆಯನ್ನು ಚೆನ್ನಾಗಿ ಅರ್ಥಮಾಡಿ ವಸ್ತುನಿಷ್ಠ ವರದಿ ನೀಡಲು ಮುಂದಾಗಿದೆ.

ಅತ್ಯಾಧುನಿಕ ಥೀಮ್ ಅಳವಡಿಕೆ

ಗೂಗಲ್ ನ್ಯೂಸ್ ಇನಿಶಿಯೇಟಿವ್ (GNI) ಕಾರ್ಯಕ್ರಮದ ಸಹಯೋಗದಿಂದ ಅತ್ಯಾಧುನಿಕ ಥೀಮ್ ಅಳವಡಿಸಿಕೊಂಡಿದ್ದು, ಇದರಿಂದ ನಮ್ಮ ವಿಜಯಪ್ರಭ.ಕಾಂ ಅತ್ಯಾಧುನಿಕವಾಗಿ ವಿನ್ಯಾಸಗೊಂಡಿದೆ. ಈ ಹೊಸ ಥೀಮ್ ಅಳವಡಿಕೆಯಿಂದ ಇಂದು ವಿಜಯಪ್ರಭ.ಕಾಂ ಗೆ ಟ್ರಾಫಿಕ್ ಕೂಡ ಜಾಸ್ತಿಯಾಗಿದ್ದು, ಲಕ್ಷಾಂತರ ಓದುಗರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಟ್ರಾಫಿಕ್ ಮತ್ತು ಜಾಹೀರಾತಿನಲ್ಲಿ ಹೆಚ್ಚಳ

GNI ILP 2024 ರ ಅಡಿ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡ ನಂತರ , ನಮ್ಮ Discover ಟ್ರಾಫಿಕ್ ಗಮನಾರ್ಹವಾಗಿ ಸುಧಾರಿಸಿದೆ. CTR (ಕ್ಲಿಕ್-ಥ್ರೂ ರೇಟ್) 2% ರಿಂದ 8% ಕ್ಕೆ ಹೆಚ್ಚಾಗಿದೆ, ಇದು ಅತ್ಯಂತ ಪ್ರಭಾವಶಾಲಿ ಅಂಕಿ ಅಂಶವಾಗಿದೆ. ಈ ಕಾರ್ಯಕ್ರಮದ ಸಹಾಯದಿಂದ, ವಿಜಯಪ್ರಭ.ಕಾಂ ಡಿಜಿಟಲ್ ಜಾಹೀರಾತು ತಂತ್ರಗಳನ್ನು ಸುಧಾರಿಸಿದೆ.

GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ 2024 ರ ಕಾರಣದಿಂದಾಗಿ ವಿಜಯಪ್ರಭ.ಕಾಂ ಡಿಜಿಟಲ್ ತಂತ್ರಗಳಲ್ಲಿ ಹಲವಾರು ಗಮನಾರ್ಹ ಸುಧಾರಣೆಗಳನ್ನು ಮಾಡಿಕೊಂಡಿದೆ. ಇದು ನಮ್ಮ ಓದುಗರನ್ನು ಹೆಚ್ಚಿಸಿದೆ ಜತೆಗೆ ನಮ್ಮ ಬ್ರ್ಯಾಂಡ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.