ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಟಿಎಂ ನಿಂದ ಹಣ ತೆಗೆಯುವುದರ ಮೇಲಿನ ವಿನಿಮಯ ಶುಲ್ಕವನ್ನು ಹೆಚ್ಚಿಸಿದ ನಂತರ ಎಟಿಎಂಗಳಿಂದ ನಗದು ತೆಗೆಯುವಿಕೆಯು ಮೇ 1, 2025 ರಿಂದ ದುಬಾರಿಯಾಗಲಿದೆ.
ದೂರದರ್ಶನ್ (ಡಿಡಿ) ಸುದ್ದಿ ವರದಿಯ ಪ್ರಕಾರ, ಶುಲ್ಕದಲ್ಲಿನ ಬದಲಾವಣೆಯು ಎಟಿಎಂಗಳನ್ನು ಆಗಾಗ್ಗೆ ಹಣ ತೆಗೆಯಲು ಬಳಸುವ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ಗ್ರಾಹಕರು ಮೇ 1 ರಿಂದ ಉಚಿತ ಮಿತಿಯನ್ನು ಮೀರಿದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿ 2 ರೂ. ತೆರಬೇಕಾಗಿದೆ. ಅದರಂತೆ ಬ್ಯಾಲೆನ್ಸ್ ವಿಚಾರಣೆಯಂತಹ ಹಣಕಾಸೇತರ ವಹಿವಾಟುಗಳಿಗೆ ಶುಲ್ಕವು 1 ರೂ. ಹೆಚ್ಚು ವೆಚ್ಚವಾಗಲಿದೆ.
ಎಟಿಎಂನಿಂದ ಹಣವನ್ನು ತೆಗೆಯಲು ಈಗ ಪ್ರತಿ ವಹಿವಾಟಿಗೆ 19 ರೂ. ಇದ್ದು, ಖಾತೆಯ ಬಾಕಿಗಳನ್ನು ಪರಿಶೀಲಿಸುವಂತಹ ಸೇವೆಗಳಿಗೆ ಈಗ ಪ್ರತಿ ವಹಿವಾಟಿಗೆ 7 ರೂ. ಇದೆ.